ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪು ನೀಡುವ ರಾಗಿ ಉಪ್ಪಿಟ್ಟು ಮಾಡಿ!

ಬೆಳಗ್ಗೆ ಸಮಯದಲ್ಲಿ ರುಚಿ ರುಚಿಯಾದ ತಿಂಡಿ ಸವಿಯಲು ಇಷ್ಟಪಡುತ್ತೀರಿ. ಹಾಗೆ ಕಡಿಮೆ ಸಮಯದಲ್ಲಿ ಕಡಿಮೆ ಮಾಡುವಂತಹ ಬ್ರೇಕ್ಫಾಸ್ಟ್ ಮಾಡಲು ನೀವು ಯಾವಾಗಲು ಮುಂದಾಗುತ್ತೀರಿ. ಅದರಲ್ಲೂ ಈ ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪಾಗುವಂತಹ ತಿಂಡಿಗಳನ್ನು ಮಾಡಿ ಸವಿಯುವುದು ಬಹಳ ಮುಖ್ಯ ಎನಿಸಲಿದೆ. 

ಬಿಸಿಲು ಹೆಚ್ಚಾದಾಗ ದೇಹದ ಉಷ್ಣಾಂಶ ಹೆಚ್ಚಾಗುವ ಕಾರಣ ತಂಪಾಗಲು ರಾಗಿ ಬಳಸಿ. ಹಾಗೆ ಈ ಸಮಯದಲ್ಲಿ ದೇಹಕ್ಕೆ ಬಹಳ ತಂಪು ನೀಡುತ್ತದೆ. ರಾಗಿಯಿಂದ ಹಲವು ರೀತಿಯ ಖಾದ್ಯ ಮಾಡಿ ಸವಿಯುತ್ತೇವೆ. ರಾಗಿ ಕಾಫಿ, ರಾಗಿ ಅಂಬಲಿ, ರಾಗಿ ಇಡ್ಲಿ, ರಾಗಿ ದೋಸೆ ಹೀಗೆ ಒಂದಕ್ಕಿಂತ ಒಂದು ರುಚಿ ರುಚಿಯ ಖಾದ್ಯ ಮಾಡಬಹುದು. 

ರಾಗಿಯ ಸೇವನೆಯು ನಿಮ್ಮ ದೇಹದಲ್ಲಿನ ರಕ್ತ ಹೀನತೆಯಂತಹ ಸಮಸ್ಯೆಗೂ ಪರಿಹಾರ ನೀಡಲಿದೆ. ಫೈಬರ್ ತುಂಬಿರುವ ಕಾರಣ ಜೀರ್ಣಕ್ರಿಯೆ, ಕರುಳಿನ ಆರೋಗ್ಯಕ್ಕೂ ಕೂಡ ಇದು ಉತ್ತಮ ಆಹಾರವಾಗಿದೆ. ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಮೂಲಕ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲಿವೆ. ಹೀಗಾಗಿ ರಾಗಿ ಮುದ್ದೆ ಸೇವನೆ ದೇಹಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. 

ಆದ್ರೆ ನಾವಿಂದು ಈ ರಾಗಿಯಿಂದ ಮಾಡಬಹುದಾದಂತಹ ರುಚಿ ರುಚಿಯ ಉಪ್ಪಿಟ್ಟು ರೆಸಿಪಿಯನ್ನು ತಿಳಿದುಕೊಳ್ಳೋಣ. ರಾಗಿ ಉಪ್ಪಿಟ್ಟು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಇದರ ರುಚಿ ಹೇಗಿರಲಿದೆ ಎಂಬುದನ್ನು ಈ ರೆಸಿಪಿ ಮೂಲಕ ತಿಳಿದುಕೊಳ್ಳೋಣ. ರಾಗಿ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು ಯಾವುದು?

ರಾಗಿ ಹಿಟ್ಟು ರವೆ, ಟೊಮೆಟೋ, ಈರುಳ್ಳಿ, ಸಾಸಿವೆ, ಜೀರಿಗೆ, ಉಪ್ಪು, ಎಣ್ಣೆ, ತುಪ್ಪ, ಕರಿಬೇವು, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಮೆಣಸು, ಒಣ ಮೆಣಸು, ರಾಗಿ ಉಪ್ಪಿಟ್ಟು.

ಮಾಡುವ ವಿಧಾನ:
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ. 

ನಂತರ ಕರಿಬೇವು, ಹಸಿ ಮೆಣಸು, ಒಣ ಮೆಣಸು, ಈರುಳ್ಳಿ ಹಾಕಿಕೊಂಡು 2 ನಿಮಿಷ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿ. ಬಳಿಕ ಟೊಮೆಟೋ ಕೂಡ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಈಗ ಒಂದು ಕಪ್ ರವೆಯನ್ನು ಇದಕ್ಕೆ ಹಾಕಿ ಹುರಿದುಕೊಳ್ಳಿ. ಇದಕ್ಕೆ ಅರ್ಧ ಕಪ್ ರಾಗಿ ಹಿಟ್ಟು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅಳತೆ ಕಪ್ನಲ್ಲಿ ಮೂರು ಅಥವಾ 4 ಕಪ್ ಬಿಸಿ ನೀರು ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಿ. 3 ನಿಮಿಷದಲ್ಲಿ ರಾಗಿ ಬೇಯುತ್ತದೆ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಗೆ ತುಪ್ಪದಲ್ಲಿ ಹರಿದ ಗೋಡಂಬಿ ಇದಕ್ಕೆ ಹಾಕಿ ಸವಿಯಲು ನೀಡಬಹುದು. ಇದರ ರುಚಿ ಒಮ್ಮೆಯಾದರು ಮಾಡಿ ನೋಡಿ. ಅದರ ರುಚಿಗೆ ಎಲ್ಲರು ಬೆರಗಾಗೋದು ಖಚಿತ ಹಾಗೆ ಮಕ್ಕಳು ಕೂಡ ಬಹಳ ಇಷ್ಟ ಪಟ್ಟು ಇದನ್ನು ಸವಿಯುತ್ತಾರೆ.