ಚಳಿಗಾಲದಲ್ಲಿ ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನಲು ಯಾರು ಸಹ ಇಷ್ಟಪಡುವುದಿಲ್ಲ. ಬದಲಿಗೆ ಬಿಸಿ ಬಿಸಿ ಕಾಫಿ ಟೀ, ಕುರುಕಲು ತಿಂಡಿನ್ನು ಸೇವಿಸಲು ಇಷ್ಟಪಡುತ್ತಾರೆ. ಚಳಿಗಾಲದಲ್ಲೇ ಹೆಚ್ಚು ಸಿಗುವ ಅನಾನಸ್ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗಾದರೆ ಚಳಿಗಾಲದಲ್ಲಿ ಈ ಹಣ್ಣಿನ ಸೇವನೆಯಿಂದ ಏನಾಗಲಿದೆ ಎಂಬ ಕುರಿತು ನೋಡೋಣ.
ಅನಾನಸ್ ಹಣ್ಣಿನಲ್ಲಿ ವಿಶೇಷವಾಗಿರುವ ಬ್ರೋಮಿಲೈನ್ ಎಂಬ ಕಿಣ್ವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ ಮತ್ತು ರಕ್ತದ ಶುದ್ಧೀಕರಣ, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು, ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಅದರೆ ಚಳಿಗಾಲದಲ್ಲಿ ಈ ಹಣ್ಣು ಆರೋಗ್ಯದ ಪರವಾಗಿ ಕೆಲಸ ಮಾಡುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು, ಅದರಲ್ಲೂ ಪ್ರಥಮ ತಿಂಗಳುಗಳಲ್ಲಿರುವವರಿಗೆ ಅನಾನಸ್ ಸೇವನೆ ಒಳಿತಲ್ಲ. ಇದು ಗರ್ಭಪಾತತ ಸಂಭವವನ್ನು ಹೆಚ್ಚಿಸಲಿದೆಯಂತೆ.
ಅಲರ್ಜಿ ಹೆಚ್ಚಳ:
ಸಾಮಾನ್ಯವಾಗಿ ಚಳಿಗಾಲದಲ್ಲಿ ಅಲರ್ಜಿಕಾರಕ ತೊಂದರೆಗಳು ಹೆಚ್ಚು. ಏಕೆಂದರೆ ಚಳಿಯಿಂದ ನಡುಗುವ ದೇಹವನ್ನು ಬೆಚ್ಚಗಿರಿಸಲು ದೇಹ ಹೆಚ್ಚಿನ ಶಕ್ತಿಯನ್ನು ಈ ನಿಟ್ಟಿನತ್ತ ಹರಿಸುತ್ತದೆ. ಸ್ವಾಭಾವಿಕವಾಗಿ ಕೆಲವು ಕಡೆ ಕಡಿಮೆಯಾಗುತ್ತದೆ. ಅಲ್ಲದೇ ಒಂದು ವೇಳೆ ಅಲರ್ಜಿಯಿದ್ದರೆ ಅನಾನಾಸ್ ಈ ಅಲರ್ಜಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಕಿಣ್ವಗಳು ತುಟಿಗಳನ್ನು ದಪ್ಪಗಾಗಿಸುವುದು ಮತ್ತು ಗಂಟಲಿನಲ್ಲಿ ಕೆರೆತ ಮೊದಲಾದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಒಂದು ವೇಳೆ ಅನಾನಾಸನ್ನು ತಿನ್ನದಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಇದರ ಅಭಿಮಾನಿಯಾಗಿದ್ದರೆ ಉಪ್ಪುನೀರಿನಲ್ಲಿ ನೆನೆಸಿಟ್ಟ ತುಂಡುಗಳನ್ನು ತಿನ್ನಬಹುದು.
ಗರ್ಭಿಣಿಯರಿಗೆ ಒಳ್ಳೆಯದಲ್ಲ:
ನಾವು ಮೊದಲೇ ಹೇಳಿದಂತೆ ಪ್ರಥಮ ಮೂರು ಹಾಗೂ ಬಳಿಕದ ಮೂರು ತಿಂಗಳುಗಳಲ್ಲಿ ಗರ್ಭಿಣಿಯರು ಅನಾನಾಸ್ ಹಣ್ಣಿನ ತಂಟೆಗೆ ಹೋಗದೇ ಇರುವುದೇ ಉತ್ತಮ. ಏಕೆಂದರೆ ಈ ಅವಧಿಯಲ್ಲಿ ತಿಂದ ಅನಾನಾಸು ಗರ್ಭಪಾತದ ಸಾಧ್ಯತೆಯನ್ನು ಅಪಾರವಾಗಿ ಹೆಚ್ಚಿಸುತ್ತದೆ. ಇದಕ್ಕೆ ಚಳಿಗಾಲ, ಬೇಸಿಗೆ ಎಂಬ ಭೇದವಿಲ್ಲ. ಆದರೆ ನಂತರದ ತಿಂಗಳಲ್ಲಿ ಸೇವಿಸಬಹುದು.
ಸಂಧಿವಾತವನ್ನು ಹೆಚ್ಚಿಸುತ್ತದೆ:
ಸಂಧಿವಾತದ ತೊಂದರೆ ಇದ್ದವರಿಗೆ ಚಳಿಗಾಲದ ಅನಾನಾಸು ಸೇವನೆ ತಕ್ಕುದಲ್ಲ. ಏಕೆಂದರೆ ಇದು ಗಂಟುಗಳ ನೋವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಚಳಿಗಾಲದಲ್ಲಿ ಅನಾನಾಸಿನ ರಸ ಅಲ್ಕೋಹಾಲ್ ಆಗಿ ಪರಿವರ್ತಿತವಾಗುತ್ತದೆ ಮತ್ತು ಜೀರ್ಣಾಂಗಗಳಿಗೆ ತಲುಪಿದ ಬಳಿಕ ಸಂದುಗಳಲ್ಲಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.
ಕಫವನ್ನು ಹೆಚ್ಚಿಸುತ್ತದೆ:
ಸೈನಸ್ ತೊಂದರೆ, ಮೂಗು ಕಟ್ಟುವುದು, ಗಂಟಲಬೇನೆ, ಕಫ ಮೊದಲಾದ ತೊಂದರೆ ಇದ್ದವರು ಚಳಿಗಾಲದಲ್ಲಿ ಅನಾನಾಸನ್ನು ತಿನ್ನದೇ ಇರುವುದು ಉತ್ತಮ. ಏಕೆಂದರೆ ಇದು ಒಂದು ಉತ್ತಮ ಕಫಕಾರಕವಾಗಿದ್ದು ಈಗಾಗಲೇ ಇದ್ದ ಕಫವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಗಂಟಲಬೇನೆ ಮತ್ತು ಹೊಟ್ಟೆನೋವು ತೀವ್ರವಾಗುತ್ತದೆ.
ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ:
ಅನಾನಾಸಿನಲ್ಲಿ ಉತ್ತಮ ಪ್ರಮಾಣದ ಸುಕ್ರೋಸ್ ಸಕ್ಕರೆ ಇದೆ (ಸುಮಾರು ಶೇಖಡಾ ಹತ್ತರಷ್ಟು) ಗ್ಲುಕೋಸ್ ಗಿಂತಲೂ ಸುಕ್ರೋಸ್ ಹೆಚ್ಚು ಪ್ರಭಾವಶಾಲಿಯಾದ ಸಕ್ಕರೆಯಾಗಿದ್ದು ಇದನ್ನು ಅರಗಿಸಿಕೊಳ್ಳಲು ದೇಹ ಹೆಚ್ಚು ಕಷ್ಟಪಡಬೇಕಾಗುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಈ ಸಕ್ಕರೆಯನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಮಧುಮೇಹಿಗಳು ಚಳಿಗಾಲದಲ್ಲಿ ಅನಾನಾಸು ಸೇವಿಸಲೇಬಾರದು.
ಔಷಧಿಗಳ ಪರಿಣಾಮವನ್ನು ಏರುಪೇರು ಮಾಡುತ್ತದೆ:
ಒಂದು ವೇಳೆ ನೀವು ಆಂಟಿ ಬಯಾಟಿಕ್ ಗಳನ್ನು ಸೇವಿಸುತ್ತಿದ್ದರೆ ಅನಾನಾಸಿನಲ್ಲಿರುವ ಬ್ರೋಮಿಲೈನ್ ಕಿಣ್ವ ಈ ಔಷಧಗಳ ಪ್ರಭಾವಗಳನ್ನು ಏರುಪೇರಾಗಿಸುತ್ತದೆ. ಇದು ಆರೋಗ್ಯವನ್ನು ಇನ್ನಷ್ಟು ಕೆಡಿಸಬಲ್ಲದು. ಚಳಿಗಾಲದಲ್ಲಿ ಈ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅನಾನಾಸ್ ತಿನ್ನುವುದನ್ನು ಬಿಟ್ಟರೇ ಉತ್ತಮ.