ಶಮಿ ಕಬಾಬ್ ಚಿಕನ್ ನಿಂದಲೂ ಮಾಡಬಹುದು, ಸೂಪರ್ ಟೇಸ್ಟಿ ಆಗಿರುತ್ತೆ. ಒಮ್ಮೆ ಟ್ರೈ ಮಾಡಿ

ಶಮಿ ಕಬಾಬ್ ಹೆಚ್ಚಾಗಿ ಮಟನ್‌ನಿಂದ ತಯಾರಿಸುತ್ತಾರೆ, ಆದರೆ ನೀವು ಚಿಕನ್‌ಲ್ಲಿಯೂ ತಯಾರಿಸಬಹುದು. ನೀವು ಈ ಹೊಸ ರುಚಿಯ ಅಡುಗೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಇದನ್ನು ಟ್ರೈ ಮಾಡಿ ತುಂಬಾನೇ ಟೇಸ್ಟ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿ:

1/2 ಕೆಜಿ ಬೋನ್ಲೆಸ್ ಚಿಕನ್

1/3 ಕಪ್ ಕಡ್ಲೆ ಬೇಳೆ 75ಗ್ರಾಂ, ನೆನೆಹಾಕಿ

1/2 ಕೆಜಿ ಬೋನ್ಲೆಸ್ ಚಿಕನ್ 

1/3 ಕಪ್ ಕಡ್ಲೆ ಬೇಳೆ 75ಗ್ರಾಂ, ನೆನೆಹಾಕಿ

 1 ಚಮಚ ಖಾರದ ಪುಡಿ

 1/4 ಚಮಚ ಅರಿಶಿಣ ಪುಡಿ 

ಇಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ 

2-3 ಏಲಕ್ಕಿ

2 ಒಣ ಮೆಣಸು 

ತುರಿದ ಶುಂಠಿ 

1 ಚಮಚ 

3 ಬೆಳ್ಳುಳ್ಳು ಎಸಳು, ಚಿಕ್ಕದಾಗಿ ಕತ್ತರಿಸಿದ್ದು

 1 ಚಮಚ ಗರಂ ಮಸಾಲೆ 

ರುಚಿಗೆ ತಕ್ಕ ಉಪ್ಪು 

1 ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ್ದು

 2 ಮೊಟ್ಟೆ, 

1 ಮಿಕ್ಸರ್ಗೆ ಹಾಕಲು,ಮತ್ತೊಂದು ಕೋಟ್ ಮಾಡಲು

 ಸ್ವಲ್ಪ ಕೊತ್ತಂಬರಿ ಸೊಪ್ಪು 

ಸ್ವಲ್ಪ ಪುದೀನಾ 

1 ಹಸಿಮೆಣಸು 

ಎಣ್ಣೆ (ಫ್ರೈ ಮಾಡಲು)

ಮಾಡುವುದು ಹೇಗೆ?: 

* ಕಡ್ಲೆ ಬೇಳೆಯನ್ನು 4 ಗಂಟೆಗಳ ನೆನೆ ಹಾಕಿ. ನಂತರ ನೀರನ್ನು ಸೋಸಿ. 

* ಪ್ಯಾನ್ಗೆ ಬೇಳೆ, ಶುಂಠಿ, ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ, ಒಣ ಮೆಣಸು, ಗರಂ ಮಸಾಲ, ಚಕ್ಕೆ, ಜೀರಿಗೆ, ಏಲಕ್ಕಿ, ಚಿಕನ್, ಸ್ವಲ್ಪ ನೀರು ಹಾಕಿ ಬೇಯಿಸಿ. 

* ಚಿಕನ್, ಕಡ್ಲೆಬೇಳೆ ಬೇಯಿಸಿದಾಗ ಅದರಲ್ಲಿರುವ ನೀರಿನಂಶ ಸಂಪೂರ್ಣ ತೆಗಿಯುವವರೆಗೆ ಬೇಯಿಸಿ. 

* ನಂತರ ಚಿಕನ್, ಕಡ್ಲೆಬೇಳೆ ಬೆಂದ ಮೇಲೆ ಉರಿಯಿಂದ ಇಳಿಸಿ ತಣ್ಣಗಾದ ಮೇಲೆ, ಮೊಟ್ಟೆ ಹಾಕಿ ತರಿ-ತರಿ ರುಬ್ಬಿ. 

* ಮಿಶ್ರಣ ಹುಡಿ-ಹುಡಿಯಾಗಿರಬೇಕು. 

* ಹಸಿಮೆಣಸು, ಈರುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. 

* ಒಂದು ಬೌಲ್ಗೆ ಮೊಟ್ಟೆಯನ್ನು ಒಡೆದು ಹಾಕಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬೀಟ್ ಮಾಡಿ 

* ನಂತರ ಸ್ವಲ್ಪ-ಸ್ವಲ್ಪ ಮಿಶ್ರಣ ತೆಗೆದು ನಾವು ವಡೆಗೆ ತಟ್ಟುತ್ತೇವೆ ಅಲ್ವಾ ಅದೇ ರೀತಿ ತಟ್ಟಿ ಮೊಟ್ಟೆಯಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. 

* ಇದನ್ನು ಕರಿಯುವಾಗ ಉರಿ ಮೀಡಿಯಂನಲ್ಲಿರಲಿ. 

* ಎಣ್ಣೆಯನ್ನು ತುಂಬಾ ಕಾಯಿಸಿದರೆ ಹೊರಗಡೆ ಬೆಂದು ಒಳಗಡೆ ಸರಿಯಾಗಿ ಬೇಯುವುದಿಲ್ಲ, ಆದ್ದರಿಂದ ಮೀಡಿಯಂ ಉರಿಯಲ್ಲಿ ಬೇಯಿಸಿ. 

* ರೆಡಿಯಾದ ಶಮಿ ಕಬಾಬ್ ಅನ್ನು ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ. 

ಸಲಹೆ

* ನೀವು ಎಣ್ಣೆ ಶಮಿ ಕಬಾಬ್ ಹಾಕುವಾಗ ಪ್ರತಿ ಬಾರಿ ಒಂದೊಂದೇ ಹಾಕಿ, ಎರಡು-ಮೂರು ಜೊತೆಯಲ್ಲಿ ಹಾಕಬೇಡಿ. ಮೆಲ್ಲನೆ ಮಗುಚಿ ಹಾಕಿ. 

* ಶಮಿಯನ್ನು ಮೊಟ್ಟೆಯಲ್ಲಿ ಅದ್ದಿ ತೆಗೆದಾಗ ಶಮಿಯನ್ನು ಮೆಲ್ಲನೆ ಕೊಡವಿ ತೆಗೆಯಿರಿ. 

* ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.