ಹುಡುಗೀರ ದೃಷ್ಟಿಯಲ್ಲಿ ಚೆನ್ನಾಗಿ ಕಾಣಬೇಕೆಂದು ಹುಡುಗರು ಬಯಸುತ್ತಾರೆ. ಪುರುಷರು ತಮ್ಮ ಗೆಳತಿ ಅಥವಾ ಸಂಗಾತಿಯ ದೃಷ್ಟಿಯಲ್ಲಿ ಉತ್ತಮರಾಗಲು ಏನೇನೋ ಮಾಡ್ತಾರೆ. ಆದರೆ ಇದೆಲ್ಲಾ ಆರಂಭದಲ್ಲಿ ಉತ್ತಮವಾಗಿದೆ ಎಂದು ತೋರುತ್ತದೆ.
ನಂತರ ಅವರು ತಮ್ಮ ಈ ಅಭ್ಯಾಸಕ್ಕೆ ಬೇಸರ ವ್ಯಕ್ತಿಪಡಿಸ್ತಾರೆ. ಆದರೆ ನಂತರ ಪಶ್ಚಾತ್ತಾಪಪಡುವುದರಿಂದ ಏನಾಗುತ್ತದೆ, ಏಕೆಂದರೆ, ಅಷ್ಟೊತ್ತಿಗಾಗಲೇ ನಿಮ್ಮ ಸಂಗಾತಿ ನಿಮ್ಮನ್ನ ಸರಿಯಾಗಿಯೇ ಯೂಸ್ ಮಾಡೋದನ್ನು ಕಲಿತಿರುತ್ತಾರೆ. ಹಾಗಾದ್ರೆ ಅಂತಹ ವಿಷಯಗಳು ಯಾವುವು ಅನ್ನೋದನ್ನು ತಿಳಿಯೋಣ.
ಅವರಿಗೆ ಅಂಟಿಕೊಂಡಿರಬೇಡಿ:
ಯಾವಾಗಲೂ ಸಂಗಾತಿಗೆ ಅಂಟಿಕೊಂಡಿರುವುದು ಒಳ್ಳೆಯದಲ್ಲ. ಮೊದ ಮೊದಲು ಅಂಟಿಕೊಂಡು ಇರೋದು ಬೆಸ್ಟ್ ಎಂದು ಅನಿಸಬಹುದು, ಆದರೆ ಮುಂದೆ ನಿಮಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತೆ. ನಿಮ್ಮ ಸಂಗಾತಿ ದೂರು ನೀಡಲು ಪ್ರಾರಂಭಿಸುತ್ತಾರೆ. ನಿಮ್ಮ ಸಂಗಾತಿಯು ನಂತರ ಅದನ್ನು ಇಷ್ಟಪಡದಿರಬಹುದು. ಇದನ್ನು ಆರಂಭದಲ್ಲಿ ಮಾಡುವುದು ಒಳ್ಳೆಯದು ಆದರೆ ನೀವು ಅದನ್ನು ದೀರ್ಘಕಾಲದವರೆಗೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಂಬಂಧ ದೀರ್ಘ ಕಾಲ ಉಳಿಯಲು ಒಂದು ಅಂತರ ಕಾಯ್ದುಕೊಳ್ಳುವುದು ಉತ್ತಮ.
ಎಲ್ಲವನ್ನೂ ಒಪ್ಪಿಕೊಳ್ಳೋ ಅಗತ್ಯವಿಲ್ಲ:
ಹೌದು, ಎಲ್ಲವನ್ನೂ ಸ್ವೀಕರಿಸೋದರಿಂದ ಎಲ್ಲರೂ ನಿಮ್ಮನ್ನು ಒಳ್ಳೆಯವರು ಎಂದು ಕರೆಯೋದಿಲ್ಲ. ಸಂಗಾತಿಯು ಹೇಳುವ ಎಲ್ಲವನ್ನೂ ಕುರುಡಾಗಿ ಸ್ವೀಕರಿಸುವ ಬದಲು ಯೋಚಿಸಿ. ತಮ್ಮ ಸಂಗಾತಿ ಹೇಳೀದ್ದನ್ನೆಲ್ಲಾ ನಂಬಿ ಒಪ್ಪಿಕೊಳ್ಳುವವರು ನೀವಾಗಿದ್ದರೆ, ಮುಂದೆ ಪಶ್ಚಾತ್ತಾಪ ಪಡಬೇಕಾದ್ದು ಖಚಿತ.
ಪ್ರತಿ ಬಾರಿಯೂ ಖರ್ಚು ಮಾಡುವುದನ್ನು ತಪ್ಪಿಸಿ:
ಪ್ರತಿಯೊಬ್ಬ ಹುಡುಗನೂ ಇದನ್ನು ಮಾಡುತ್ತಾನೆ. ಹುಡುಗಿಗೆ ಖರ್ಚು ಮಾಡಲು ಬಿಡೋದೆ ಇಲ್ಲ. ಹುಡುಗಿ ಖರ್ಚು ಮಾಡಿದರೆ, ಹುಡುಗರು ಅದನ್ನು ಹೃದಯಕ್ಕೆ ತೆಗೆದುಕೊಳ್ಳುತ್ತಾರೆ. ರೆಸ್ಟೋರೆಂಟ್ ಅಥವಾ ಶಾಪಿಂಗ್ ಮಾಲ್ ನಲ್ಲಿ ಬಿಲ್ಲಿಂಗ್ ಮಾಡುವಾಗ ಹುಡುಗರು ಶಾಪಿಂಗ್ ಮಾಲ್ ನ ಬಿಲ್ ಪಾವತಿಸಲು ಸಿದ್ಧರಿರುವುದನ್ನು ನೀವು ಆಗಾಗ್ಗೆ ನೋಡಿರಬಹುದು.
ಸಾಮಾನ್ಯವಾಗಿ ಹುಡುಗರು ಹುಡುಗಿಯರ ಮುಂದೆ ಒಳ್ಳೆಯವರಾಗಲು ತಾವೇ ಸ್ವತಃ ಬಿಲ್ ಪೇ ಮಾಡ್ತಾರೆ. ಆದರೆ ಹೀಗೆ ಮಾಡೋದರಿಂದ ಮುಂದೆ ನಿಮ್ಮ ಜೇಬು ಖಾಲಿಯಾಗೋದು ಖಚಿತ. ಆದುದರಿಂದ ಆಗೊಮ್ಮೆ, ಈಗೊಮ್ಮೆ ನಿಮ್ಮ ಬಳಿ ಹಣ ಇದ್ದರೂ ಸಹ ಸಂಗಾತಿಗೆ ಬಿಲ್ ಪೇ ಮಾಡಲು ಅನುಮತಿ ನೀಡಿ. ಇದರಿಂದ ಸಂಬಂಧವೂ ಚೆನ್ನಾಗಿರುತ್ತೆ.
ನೀವೊಬ್ಬರೇ ಎಲ್ಲಾ ವಿಷಯದ ಬಗ್ಗೆ ತಲೆಗೆಡಿಸಿಕೊಳ್ಳಬೇಡಿ:
ಎಲ್ಲಾ ಹೊರೆಯನ್ನು ಹೊರುವ ಅಗತ್ಯವೇನಿದೆ? ನೀವಿಬ್ಬರೂ ಜೊತೆಯಾಗಿ ಜೀವನ ಸಾಗಿಸೋದರಿಂದ, ಎಲ್ಲವನ್ನೂ ಇಬ್ಬರು ಯೋಚಿಸಿ ನಿರ್ಧರಿಸಿದ್ರೆ ಉತ್ತಮ. ಸಂಬಂಧದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಇದನ್ನು ನೆನಪಿನಲ್ಲಿಡಿ. ಯಾವತ್ತೂ ನಿಮ್ಮಿಬ್ಬರ ಜೀವನದ ಬಗ್ಗೆ ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಅನುಮತಿಸಬೇಡಿ.
ಸಂಗಾತಿಗೆ ಮಾತ್ರ ಆದ್ಯತೆ ನೀಡಬೇಡಿ:
ನೀವು ನಿಮಗೆ ಆದ್ಯತೆ ನೀಡದಿದ್ದರೆ, ನಿಮ್ಮ ಜೀವನದ ಮೌಲ್ಯವನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ನಿಮ್ಮ ಜೀವನವನ್ನು ನಿರ್ಲಕ್ಷಿಸಬೇಡಿ. ಪ್ರತಿ ಬಾರಿಯೂ, ನಿಮ್ಮ ಸಂಗಾತಿಗೆ ಎಲ್ಲೆಡೆ ಆದ್ಯತೆ ನೀಡುವುದು ಮಾತ್ರವಲ್ಲದೆ ನಿಮ್ಮನ್ನು ನೀವು ಮುಂದೆ ಇರಿಸಿಕೊಳ್ಳಿ. ಒಬ್ಬ ಒಳ್ಳೆಯ ಹುಡುಗ ಅದನ್ನು ಮಾಡಬೇಕು.
ನೀವು ಸ್ನೇಹಿತರ ಜೊತೆ ಅಥವಾ ಸಂಬಂಧಿಕರು ಅಥವಾ ಅತ್ತೆ-ಮಾವಂದಿರೊಂದಿಗಿದ್ದರೆ, ನಿಮಗೆ ನೀವು ಆದ್ಯತೆ ನೀಡಿ. ಹೌದು, ನಿಮ್ಮ ಸಂಗಾತಿಯನ್ನು ಸಹ ಮರೆಯಬೇಡಿ. ಅವರನ್ನು ಸಹ ನಿಮ್ಮೊಂದಿಗೆ ಇಟ್ಟುಕೊಳ್ಳಿ, ಆದರೆ ಅವರಿಗೆ ಗಮನ ನೀಡುವ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಯಾವಾಗಲೂ ಮರೆಯಬೇಡಿ. ನಿಮ್ಮ ಗೆಳತಿಯ ದೃಷ್ಟಿಯಲ್ಲಿ ಹೀರೋ ಆಗಲು ನೀವು ಈ ಸಲಹೆಗಳನ್ನು ಅನುಸರಿಸಿದರೆ ಉತ್ತಮ.