ಶೀತ ಅಥವಾ ನೆಗಡಿ ಆದಾಗ ಔಷಧ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಗರ್ಭವಸ್ಥೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಣ್ಣಪುಟ್ಟ ಶೀತ, ಜ್ವರ ಕಾಣಿಸಿಕೊಂಡಾಗ ಸುಲಭವಾಗಿ ಔಷಧಗಳನ್ನು ಸೇವಿಸಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯವಾಗಿ ವೈದ್ಯರ ಸಲಹೆ ಬೇಕು.
ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಇರುವ ಸ್ತ್ರೀ ಹೆಚ್ಚಾಗಿ ಔಷಧಿಯನ್ನು ಸೇವನೆ ಮಾಡಿದರೆ ಅದು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಕೂಡ ಅಷ್ಟಾಗಿ ಔಷಧ ಸೇವನೆಗೆ ಸಲಹೆ ಮಾಡುವುದಿಲ್ಲ.
ಗರ್ಭವಸ್ಥೆಯಲ್ಲಿ ಶೀತ ಉಂಟಾದಾಗ ಸ್ತ್ರೀಯರು ಅನುಸರಿಸಬೇಕಾದ ಸಲಹೆಗಳು!
ಮಹಿಳೆ ಗರ್ಭಿಣಿಯಾದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಇಂತಹ ಸಂದರ್ಭದಲ್ಲಿ ಶೀತ ಅಥವಾ ನೆಗಡಿ ಜ್ವರ ಮೊದಲ ಸಮಸ್ಯೆಗಳು ಮೊದಲ ತ್ರೈಮಾಸಿಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಂದ ಮಾತ್ರಕ್ಕೆ ರಾಸಾಯನಿಕ ಔಷಧಗಳನ್ನ ಕೂಡ ಸೇವಿಸಲು ವೈದ್ಯರು ಈ ಸಂದರ್ಭದಲ್ಲಿ ಸಲಹೆ ನೀಡುವುದಿಲ್ಲ. ಹಾಗಾಗಿ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕಿಂತ ನೀವು ಹೇಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು ಎನ್ನುವುದನ್ನು ನೋಡೋಣ.
ದೇಹ ಡಿ-ಹೈಡ್ರೇಟ್ ಆಗದಂತೆ ನೋಡಿಕೊಳ್ಳಿ!
ಗರ್ಭಾವಸ್ಥೆಯಲ್ಲಿ ಇರುವಾಗ ಸ್ತ್ರೀಯರು ಎರಡು ಜೀವಕ್ಕೆ ಬೇಕಾಗುವಷ್ಟು ನೀರನ್ನು ಕುಡಿಯಬೇಕು ಅಂದರೆ ತಮಗಾಗಿ ಹಾಗೂ ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿಗಾಗಿಯೂ ಕೂಡ ನೀರು ಸೇವನೆ ಮಾಡುವುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ದೇಹ ಡಿ ಹೈಡ್ರೇಟ್ ಆಗಲು ಬಿಡಬೇಡಿ. ನೀರು ಮಾತ್ರವಲ್ಲದೆ ತಾಜಾ ಹಣ್ಣಿನ ಜ್ಯೂಸ್ ಕೂಡ ಸೇವಿಸಿದರೆ ದೇಹ ಹೈಡ್ರೇಟ್ ಆಗಿರುತ್ತದೆ.
ಮನೆಯಲ್ಲಿಯೇ ಮಾಡಿಕೊಳ್ಳಿ ಸ್ಟೀಮ್ ಚಿಕಿತ್ಸೆ!
ಗರ್ಭಾವಸ್ಥೆಯ ಸಮಯದಲ್ಲಿ ಮೂಗು ಕಟ್ಟಿದಂತೆ ಆದಾಗ ಮನೆಯಲ್ಲಿ ಬಿಸಿನೀರಿನ ಹಬೆ ತೆಗೆದುಕೊಳ್ಳುವುದು ಒಳ್ಳೆಯದು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಆ ಹಬೆಗೆ ಮುಖವನ್ನು ಒಡ್ಡಿ ಹಬೆಯನ್ನು ತೆಗೆದುಕೊಳ್ಳಬೇಕು. ಮುಖನೀರಿನೊಂದಿಗೆ ನೇರ ಸಂಪರ್ಕ ಹೊಂದಿದಾಗ ಉಸಿರಾಡುವ ಪ್ರಕ್ರಿಯೆ ಸುಲಭವಾಗುತ್ತದೆ ಸುಮಾರು ಎರಡರಿಂದ ಐದು ನಿಮಿಷಗಳ ಕಾಲ ಮಾಡಬಹುದು.
ವಿಶ್ರಾಂತಿ ತೆಗೆದುಕೊಳ್ಳುವುದು!
ನೀವು ಗರ್ಭಿಣಿಯಾಗಿದ್ದಾಗಲೂ ಕೂಡ ಕೆಲಸಕ್ಕೆ ಹೊರಗಡೆ ಹೋಗುವುದಿದ್ದರೆ ಹೊರಗಿನ ಧೂಳು ಪ್ರದೂಷಣೆಯಿಂದ ನೆಗಡಿಯಾಗುವ ಸಾಧ್ಯತೆ ಇರುತ್ತದೆ. ಕಚೇರಿಗೆ ರಜೆ ಹಾಕಿ ಮನೆಯಲ್ಲಿಯೇ ಉಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಿದರೆ ಆಗ ಅನಾರೋಗ್ಯದ ಸಮಸ್ಯೆ ನಿವಾರಣೆ ಆಗುತ್ತದೆ.
ಬೆಚ್ಚಗಿನ ನೀರಿನ ಉಪಯೋಗ!
ಶೀತ ಆರಂಭವಾಗುವುದಕ್ಕೂ ಮೊದಲು ಅಥವಾ ಶೀತ ಇರುವಾಗ ಗಂಟಲು ನೋವು ಉಂಟಾಗುವುದು ಸಹಜ. ಈ ಕಾರಣದಿಂದಾಗಿ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ತಪ್ಪದೆ ಗಾರ್ಗ್ಲಿಂಗ್ ಮಾಡಿ. ಈ ರೀತಿ ಮಾಡೋದ್ರಿಂದ ಗಂಟಲಲ್ಲಿ ಉಂಟಾಗುವ ಕಿರಿಕಿರಿ ನಿವಾರಣೆ ಆಗುತ್ತದೆ.
ಜೇನುತುಪ್ಪ ಮತ್ತು ನಿಂಬೆರಸ!
ನಿಂಬೆರಸ ದೇಹದಲ್ಲಿ ಡಿ ಹೈಡ್ರೇಟ್ ಆಗದಂತೆ ಕಾಪಾಡುತ್ತದೆ. ಜೊತೆಗೆ ಜೇನುತುಪ್ಪ ಕೂಡ ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವುದರಿಂದ ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
ಮಲಗುವಾಗ ದಿಂಬನ್ನು ಬಳಸುವುದು!
ಗರ್ಭವಸ್ಥೆಯಲ್ಲಿ ಶೀತ ಹೆಚ್ಚಾಗಿ ಮೂಗು ಕಟ್ಟಿಕೊಂಡರೆ ಅಥವಾ ಮೂಗಿನಿಂದ ನೀರು ಇಳಿಯುತ್ತಿದ್ದರೆ ನೀವು ನಿಮ್ಮ ತಲೆಗೆ ಭಾಗವನ್ನು ಸ್ವಲ್ಪ ಎತ್ತರದಲ್ಲಿ ಇಡಬೇಕು ಅಂದರೆ ಮಲಗುವಾಗ ದಿಂಬನ್ನು ಬಳಸಿ ಮಲಗಿದರೆ ಆಗ ಸುಲಭವಾಗಿ ಉಸಿರಾಡಿಸಲು ಸಾಧ್ಯವಾಗುತ್ತದೆ. ಗರ್ಭವಸ್ಥೆಯಲ್ಲಿ ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಶೀತ ಅಥವಾ ನೆಗಡಿ ಉಂಟಾದಾಗ ಅರಿಶಿಣ ಹಾಲನ್ನು ಸೇವಿಸುವುದು ಸಾಮಾನ್ಯ. ಹಾಗಂದ ಮಾತ್ರಕ್ಕೆ ಗರ್ಭಿಣಿ ಸ್ತ್ರೀಯರು ಅರಿಶಿನ ಹಾಲನ್ನು ಆಗಾಗ ಕುಡಿಯುವುದು ಒಳ್ಳೆಯದಲ್ಲ. ಇದು ಈಸ್ಟ್ರೋಜನ್ ಮಟ್ಟದಲ್ಲಿ ಬದಲಾವಣೆ ತಂದು ರಕ್ತಸ್ರಾವದಂತಹ ಸಮಸ್ಯೆಗೆ ಕಾರಣವಾಗಬಹುದು.