ಹಣೆಯಲ್ಲಿ ಮೊಡವೆ ಆದರೆ ತಡೆಗಟ್ಟುವುದು ಹೇಗೆ?

ಹದಿಹರೆಯದ ಪ್ರಾಯದವರಲ್ಲಿ ತುಂಬಾನೇ ಮೊಡವೇ ಇರುತ್ತದೆ. ಅದರಲ್ಲೂ  ಹಣೆಯ ಮೇಲೆ ಹಾಗೂ ಕೆನ್ನೆಯ ಮೇಲೆ ಜಾಸ್ತಿ ಇರುತ್ತದೆ. ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು ಹಣೆಯ ಮೇಲೆ. ಇದನ್ನು ತಡೆಯುವುದು ಹೇಗೆ? ಚಿಕಿತ್ಸೆಯೇನು ಎಂದು ನೋಡೋಣ.

ತಲೆಗೆ ಎಣ್ಣೆ ತುಂಬಾನೇ ಹಾಕಬೇಡಿ:
ತಲೆಯಲ್ಲಿ ಜಿಡ್ಡಿನಂಶ ಇದ್ದರೆ ಹಣೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು, ಹಣೆಯಲ್ಲಿ ಎಣ್ಣೆಯಂಶ ಹೆಚ್ಚಾಗುವುದು, ಅಲ್ಲದೆ ತಲೆಯನ್ನು ತೊಳೆಯುವಾಗ ಶ್ಯಾಂಪೂ ತಲೆಗೆ ಹಚ್ಚುವಾಗ ಹಣೆಗೆ ತಾಗದಂತೆ ಜಾಗ್ರತೆವಹಿಸಿ. ಕೆಲವರಿಗೆ ತಲೆಗೆ ಎಣ್ಣೆ ಹಾಕದಿದ್ದರೆ ತಲೆನೋವು ಬರುತ್ತದೆ, ಅಂಥವರು ತಲೆಗೆ ಎಣ್ಣೆ ಹಚ್ಚಿ 2 ಗಂಟೆಯೊಳಗೆ ತಲೆಯನ್ನು ತೊಳೆಯಿರಿ.

ತಲೆಹೊಟ್ಟು ಹೋಗಲಾಡಿಸಿ:
ತಲೆಹೊಟ್ಟಿನ ಸಮಸ್ಯೆಯಿದ್ದರೆ ಮೊಡವೆ ಸಮಸ್ಯೆ ತುಂಬಾನೇ ಹೆಚ್ಚಾಗುವುದು. ತಲೆಹೊಟ್ಟಿನ ಸಮಸ್ಯೆಯಿದ್ದರೆ ಜಿಡ್ಡಿನಂಶ ಹೆಚ್ಚಾಗುವುದು, ನೀವು ತಲೆಹೊಟ್ಟು ಹೋಗಲಾಡಿಸಲು ಶ್ಯಾಂಪೂ ಬಳಸಿ.

ಹಣೆಗೆ ಕೂದಲು ಬೀಳದಂತೆ ಬ್ಯಾಂಡ್ ಅಥವಾ ಕ್ಲಿಪ್ ಬಳಸಿ:
ಹಣೆಗೆ ಕೂದಲು ಬೀಳುವುದರಿಂದ ಹಣೆ ಬೆವರುವುದು, ಇದರಿಂದ ಕೂಡ ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಹಣೆಗೆ ಕೂದಲು ಬೀಳದಂತೆ ಕ್ಲಿಪ್ ಬಳಸಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

ಆಗಾಗ ಮುಖ ತೊಳೆಯಿರಿ:
ಆಗಾಗ ಮುಖ ತೊಳೆಯಿರಿ, ಸೋಪು ಹಾಕಬೇಡಿ, ಫೇಸ್ ಕ್ರೀಮ್ ಬಳಸಿ ಹೀಗೆ ಮಾಡುವುದರಿಂದ ಕೂಡ ಮುಖದಲ್ಲಿ ಜಿಡ್ಡಿನಂಶ ಕಡಿಮೆಯಾಗುವುದು, ಇದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಮೊಡವೆ ಸಮಸ್ಯೆ ತಡೆಗಟ್ಟಲು ಈ ಕ್ರೀಮ್ ಪರಿಣಾಮಕಾರಿ:
ಸಾಲಿಸೈಲಿಕ್ ಆಸಿಡ್ ಹೊಸ ಮೊಡವೆ ಏಳುವುದನ್ನು ತಡೆಗಟ್ಟುತ್ತದೆ, ಈ ಆಮ್ಲ ಇರುವ ಕ್ರೀಮ್ ಬಳಸಿ, ಇದನ್ನು ಪ್ರತಿದಿನ ಎರಡು ಬಾರಿ ಬಳಸಿ, ಇದರಿಂದ ಉರಿಯೂತ, ತುರಿಕೆ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.

ಬೆಂಝೋಲ್ ಪೆರಾಕ್ಸೈಡ್:
ಬೆಂಝೋಲ್ ಪೆರಾಕ್ಸೈಡ್ ಕೂಡ ಮೊಡವೆ ಸಮಸ್ಯೆ ತಡೆಗಟ್ಟಲು ಪರಿಣಾಮಕಾರಿ, ಇದು ಮೊಡವೆ ಉತ್ಪತ್ತಿ ಮಾಡುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ, ಇದನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಕೂಡ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಜೆಲ್ ಮಾಯಿಶ್ಚರೈಸರ್ ಮೊಡವೆಗೆ ಕ್ರೀಮ್ ಹಚ್ಚಿ ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚಿ, ಹೀಗೆ ಮಾಡುವುದರಿಂದ ತ್ವಚೆ ಕಾಪಾಡಲು ಸಹಕಾರಿ. ಈ ರೀತಿ ತ್ವಚೆ ಆರೈಕೆ ಮಾಡುವುದರಿಂದ ಮೊಡವೆ ತಡೆಗಟ್ಟಬಹುದು, ತ್ವಚೆಯೂ ಚೆನ್ನಾಗಿರುತ್ತದೆ.

ಇತರ ಟಿಪ್ಸ್:
ಸನ್ಸ್ಕ್ರೀನ್ ಬಳಸಿ: ಬಿಸಿಲಿನಲ್ಲಿ ಓಡಾಡುವಾಗ ಸನ್ಸ್ಕ್ರೀನ್ ಬಳಸಿ, ಇದರಿಂದ ಮುಖ ಬೆವರಿ ಮೊಡವೆ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಬಹುದು.

ಫೇಶಿಯಲ್ ಮಾಡಿಸುವಾಗ ಜಾಗ್ರತೆ: ಮೊಡವೆ ಸಮಸ್ಯೆಯಿದ್ದಾಗ ನೀವು ಮುಖದ ಫೇಶಿಯಲ್ ಮಾಡಿಸುವಾಗ ಜಾಗ್ರತೆ, ಮುಖದ ಫೇಶಿಯಲ್ ಮಾಡಿಸಿದಾಗ ಮೊಡವೆ ಹೆಚ್ಚಾಗಬಹುದು ಆದ್ದರಿಂದ ನೀವು ನಿಮ್ಮ ಮುಖಕ್ಕೆ ಹೊಸ ಫೇಶಿಯಲ್ ಟ್ರೈ ಮಾಡುವುದಕ್ಕಿಂತ ಈ ಮೊದಲು ಮಾಡುತ್ತಿದ್ದ ಫೇಶಿಯಲ್ ಮಾಡಿ.

ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ: ಮೊಡವೆ ಸಮಸ್ಯೆ ಮಾನಸಿಕ ಒತ್ತಡದಿಂದ ಕೂಡ ಹೆಚ್ಚಾಗುವುದು, ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

ರಕ್ತ ಚಂದನ: ನೀವು ರಕ್ತಚಂದನ ದಿನಾ ಹಣೆಗೆ ಹಚ್ಚುವುದರಿಂದ ಈ ಬಗೆಯ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಕೆಲವರಿಗೆ ಅರಿಶಿಣ ಅಲರ್ಜಿ, ಇನ್ನು ಕೆಲವರಿಗೆ ಮೊಡವೆ ಕಡಿಮೆ ಮಾಡುತ್ತದೆ, ನಿಮ್ಮ ತ್ವಚೆ ಅರಿಶಿಣ ಒಳ್ಳೆಯದು ಎಂದಾದರೆ ಅದನ್ನು ಬಳಸಿ. 

ಹೀಗೆ ಮುಖದ ಆರೈಕೆ ಮಾಡಿದರೆ ಕಲೆಯೂ ಬೇಗನೆ ಕಡಿಮೆಯಾಗುವುದು.