ತಾವರೆ ಬೀಜದಲ್ಲಿ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅತ್ಯಧಿಕವಾಗಿದೆ. ಇದರ ಸೇವನೆಯಿಂದ ನಿದ್ದೆ ಚೆನ್ನಾಗಿ ಬರುತ್ತದೆ, ವಿಶ್ರಾಂತಿಯ ಅನುಭವ ನೀಡುತ್ತದೆ. ಅದರಲ್ಲೂ ಇದನ್ನು ಮಲಗುವ ಮುನ್ನ ಸೇವಿಸಿದರೆ ಒಳ್ಳೆಯದು. ಹಾಲಿನ ಜೊತೆ ತಾವರೆ ಬೀಜ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಮೈ ತೂಕ ನಿಯಂತ್ರಣ ಮಾಡುತ್ತದೆ:
ತಾವರೆ ಬೀಜ ಮೈಯಲ್ಲಿರುವ ಅನಗ್ಯತ ಕೊಬ್ಬು ಕರಗಿಸುತ್ತದೆ. ದೇಹದ ಲಿಪಿಡ್ ಪ್ರೊಫೈಲ್ ಉತ್ತಮಗೊಳಿಸುತ್ತದೆ. ಆದ್ದರಿಂದ ರಾತ್ರಿ ಮಲಗುವಾಗ ಹಾಲಿನ ಜೊತೆ ತಾವರೆ ಬೀಜ ಹಾಕಿ ಕುಡಿಯುವುದು ಒಳ್ಳೆಯದು. ಇದನ್ನು ಹಾಲಿನ ಜೊತೆಗೆ ಕುಡಿದರೆ ಚೆನ್ನಾಗಿ ನಿದ್ದೆ ಬರುವುದು ಜೊತೆಗೆ ಈ ಎಲ್ಲಾ ಪ್ರಯೋಜನಗಳಿವೆ.
ಖಿನ್ನತೆ ದೂರ ಮಾಡುತ್ತದೆ:
ಇದು ಸಂಶೋಧನೆಯಿಂದಲೂ ದೃಢಪಟ್ಟಿದೆ. ತಾವರೆ ಬೀಜದಲ್ಲಿ ಸಪೋನಿನ್ಸ್ ಮತ್ತು ಫ್ಲೇವೋನಾಯ್ಡ್ ಇರುವುದರಿಂದ ಖಿನ್ನತೆ ಸಮಸ್ಯೆ ದೂರ ಮಾಡಲು ಸಹಾಯ ಮಾಡುತ್ತದೆ. ಯಾರು ಖಿನ್ನತೆಯಲ್ಲಿ ಇರುತ್ತಾರೋ ಅವರು ಔಷಧಿ ಜೊತೆಗೆ ಇದನ್ನು ಸೇವಿಸುವುದು ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚುವುದು:
ಇದರಲ್ಲಿ ಫ್ಲೇವೋನಾಯ್ಡ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿ.
ನೈಸರ್ಗಿಕ ನೋವು ನಿವಾರಕ:
ಇದನ್ನು ಸೇವಿಸುವುದು ಮೈ ಕೈ ನೋವು ಕಡಿಮೆಯಾಗುವುದು, ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
ರಕ್ತದಲ್ಲಿ ಮಧುಮೇಹ ನಿಯಂತ್ರಿಸಲು ಸಹಕಾರಿ:
ಕೆಲವೊಂದು ಸಂಶೋಧನೆಗಳು ಕೂಡ ಇದರ ಬಗ್ಗೆ ಹೇಳಿದೆ. ಇದರ ಬಗ್ಗೆ ಇನ್ನು ಹಲವು ಸಂಶೋಧನೆಗಳು ನಡೆಯುತ್ತಲೇ ಇದೆ. ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನದಲ್ಲಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಬರುವುದು ಕಂಡು ಬಂದಿದೆ.
ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ:
ವಯಸ್ಸಾದಂತೆ ನೆರಿಗೆ ಬೀಳುವುದು ಸಹಜ ಪ್ರಕ್ರಿಯೆ ಆದರೆ ತಾವರೆ ಬೀಜ ಬಳಸುವುದರಿಂದ ಮುಖದಲ್ಲಿ ನೆರಿಗೆ ಬೀಳುವುದು ತಡೆಗಟ್ಟಲು ಸಹಕಾರಿ, ಮುಖ ಕಾಂತಿಯುತವಾಗಿರುತ್ತದೆ, ಇದರಿಂದ ನಿಮ್ಮ ಸೌಂದರ್ಯ ಹೆಚ್ಚಾಗುವುದು.
ಈ ರೀತಿ ಕೂಡ ಪ್ರಯೋಜನಕಾರಿ:
ಇದರಲ್ಲಿ ನಾರಿನಂಶ ಅಧಿಕವಿರುತ್ತದೆ, ಇದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಇದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಅಧಿಕವಿರಲಿದೆ. ಮೆಗ್ನಿಷ್ಯಿಯಂ, ಪೊಟಾಷ್ಯಿಯಂ , ಸೋಡಿಯಂ , ಕ್ಯಾಲ್ಸಿಯಂ ಅಧಿಕವಿರಲಿದೆ. ಇದು ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಇದನ್ನು ಸ್ನ್ಯಾಕ್ಸ್ ರೀತಿ ಬಳಸಬಹುದು. ಪುರುಷರಿಗೆ ಮಹಿಳೆಯರಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
ಒತ್ತಡ ಜೀವನಶೈಲಿ ನಡೆಸುತ್ತಿರುವವರು ಇದನ್ನು ತಿಂದರೆ ಒಳ್ಳೆಯದು. ಅತ್ಯಧಿಕ ಒತ್ತಡ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದನ್ನು ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು ಮೆದುಳಿನ ನರಗಳಿಗೆ ಒಳ್ಳೆಯದು, ಆದ್ದರಿಂದ ಮೆದುಳು ಚುರುಕಾಗಿ ಯೋಚಿಸುತ್ತದೆ. ಸಂಧಿವಾತದ ಸಮಸ್ಯೆ ಇರುವವರು ಇದನ್ನು ಸೇವಿಸುವುದು ಒಳ್ಳೆಯದು. ಮೂಳೆಗಳಲ್ಲಿನ ಸಮಸ್ಯೆಯಿಂದಾಗಿ ಸಂಧಿವಾತದ ಸಮಸ್ಯೆ ಉಂಟಾಗುವುದು. ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.