ಮನೆಯಲ್ಲಿ ನಾವು ಹೇಗೆ ನೀರನ್ನು ಸಂರಕ್ಷಿಸಬಹುದು? ಇಲ್ಲಿದೆ ಸೂಪರ್ ಟಿಪ್ಸ್

ವಿಶ್ವಾದ್ಯಂತ ದೇಶಗಳಿಗೆ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿದೆ. ಅನೇಕ ದೇಶಗಳಲ್ಲಿ ನೀರಿಗಾಗಿ ಪರದಾಡುತ್ತಾರೆ. ಇತರೆ ಬಳಕೆ ಬಿಡಿ ಕುಡಿಯಲು ಕೂಡ ನೀರಿನ ಸಮಸ್ಯೆ ಇರುವ ಅನೇಕ ದೇಶಗಳಿವೆ. ಹೀಗಾಗಿ ಇದೀಗ ಜಗತ್ತಿನಾದ್ಯಂತ ನೀರಿನ ಮಹತ್ವವೇನು ಎನ್ನುವುದು ಎಲ್ಲರಿಗೂ ತಿಳಿದಿದೆ.

ಹೀಗಾಗಿಯೇ ನೀರಿನ ಸಂರಕ್ಷಣೆಯನ್ನು ಜನರು ಹಾಗೂ ಸರ್ಕಾರ ಮಾಡುತ್ತಿದೆ. ಆದರೂ ನಮ್ಮಲ್ಲಿ ಅನೇಕರು ಈಗಲೂ ನೀರನ್ನು ವೇಸ್ಟ್ ಮಾಡುತ್ತಾರೆ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಖಂಡಿತವಾಗ್ಲು ಕಾಡಬಹುದು. ನಮಗೆ ಅಲ್ಲದಿದ್ದರೂ ನಮ್ಮ ಭವಿಷ್ಯದ ಪೀಳಿಗೆಗಾಗಿ ನಾವು ನೀರಿನ ಸಂರಕ್ಷಣೆ ಮಾಡಲೇಬೇಕು. ಹೀಗಾಗಿಯೇ ವಿವಿಧ ಸಂಘ ಸಂಸ್ಥೆಗಳು ಟೊಂಕ ಕಟ್ಟಿಕೊಂಡು ನೀರಿನ ಸಂರಕ್ಷಣೆಯ ಬಗ್ಗೆ ಮುತುವರ್ಜಿ ವಹಿಸುತ್ತಿದೆ.

ಹಾಗಾದರೆ ಮನೆಯಲ್ಲಿ ನಾವು ಹೇಗೆ ನೀರನ್ನು ಸಂರಕ್ಷಿಸಬಹುದು? ಅದಕ್ಕಾಗಿ ನಾವು ಮಾಡಬೇಕಾದದ್ದು ಏನು? ಇಲ್ಲಿವೆ ಈ ಬಗ್ಗೆ ಕೆಲವೊಂದು ಟಿಪ್ಸ್.

ಕಡಿಮೆ ಹರಿಯುವ ನೀರು ಬಳಸಿ: 
ಕೆಲವು ಕಡೆ ಟ್ಯಾಪ್ ಜಸ್ಟ್ ಒಪನ್ ಮಾಡಿದರೆ ಸಾಕು ನೀರು ಫುಲ್ ಹರಿಯೋಕೆ ಆರಂಭವಾಗುತ್ತದೆ. ಈ ರೀತಿ ನೀರು ಹರಿದರೆ ಖಂಡಿತವಾಗ್ಲು ನೀರನ್ನು ಉಳಿಸೋಕೆ ಆಗುವುದಿಲ್ಲ. ಅಲ್ಲದೇ ಈ ರೀತಿ ವೇಗವಾಗಿ ನೀರು ಹರಿಯುತ್ತಿದ್ದರೆ ಆ ನೀರನ್ನು ಬಳಕೆ ಮಾಡಲು ಕೂಡ ಆಗುವುದಿಲ್ಲ. ಉದಾಹರಣೆಗೆ ಪಾತ್ರೆ ತೊಳೆಯುವ ಟ್ಯಾಪ್ ಅತೀ ವೇಗವಾಗಿ ನೀರು ಹರಿಸಿದರೆ ಪಾತ್ರೆ ತೊಳೆಯಲು ಆಗುವುದಿಲ್ಲ.  ಅಲ್ಲದೇ ನೀರು ಕೂಡ ವೇಸ್ಟ್ ಆಗಿ ಹೋಗುತ್ತದೆ. ಹೀಗಾಗಿ ನಾವು ಯಾವಾಗಲೂ ಮನೆಯಲ್ಲಿ ಕಡಿಮೆ ಹರಿಯುವ ಅಂದರೆ ಲೋ ಫ್ಲೋ ನೀರು ಬಳೆಕೆ ಮಾಡುವುದು ಒಳ್ಳೆಯ ಐಡಿಯಾ. 

ನೀರಿನ ಸೋರಿಕೆಯನ್ನು ಸರಿಪಡಿಸಿ: 
ನೀರು ಸೋರಿಕೆಯನ್ನು ಸರಿಪಡಿಸಿದರೆ ಸಾಕು ನೀವು ನೀರು ಸಂರಕ್ಷಣೆ ಮಾಡಿದಂತೆ. ಹೌದು, ಯಾಕೆಂದರೆ ಪ್ರತೀ ಮನೆಯಲ್ಲೂ ನೀರು ಲೀಕೇಜ್ ನ ಸಮಸ್ಯೆ ಇದ್ದೆ ಇದೆ. ಟಾಯ್ಲೆಟ್ ಆಗಿರಬಹುದು, ಅಡುಗೆ ರೂಂ ಆಗಿರಬಹುದು. ನೀರು ಲಿಕೇಜ್ ಆಗುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಕೆಲವೊಂದು ಬಾರಿ ಒಂದು ಹನಿ ನೀರು ಹೋಗ್ತಾ ಇರುವುದಲ್ವಾ ಎಂದು ನೀವು ಸುಮ್ಮನಾಗುತ್ತೀರಿ. ಆದರೆ ಒಂದು ನೆನಪಿರಲಿ ಒಂದೊಂದು ಹನಿಯಂತೆ ನಿತ್ಯವೂ ನೀರು ನೆಲಕ್ಕೆ ಬೀಳುತ್ತಿದ್ದರೆ. ಇದು ಪೋಲೂ ಅಥವಾ ನೀರಿನ ವೇಸ್ಟ್ ಆಗುತ್ತದೆ. ಹೀಗಾಗಿ ಮನೆಯಲ್ಲಿ ಎಲ್ಲೆ ಸೋರಿಕೆ ಇದ್ದರು ಅದನ್ನು ಕೂಡಲೇ ಸರಿಪಡಿಸಿ. ಹೆಚ್ಚಿನಾದಾಗಿ ಮನೆಯ ಹೊರಗಡೆಯ ಪೈಪ್ ಲೈನ್ ಅಥವಾ ಟಾಯ್ಲೆಟ್ ಅಥವಾ ಅಡುಗೆ ಕೋಣೆಯಲ್ಲಿರುವ ಸಿಂಕ್ ನಲ್ಲಿ ಸೋರಿಕೆ ಇರುತ್ತದೆ. ಈ ಸೋರಿಕೆಯನ್ನು ತಪ್ಪಿಸಲು ಎಲ್ಲಿ ಡ್ಯಾಮೇಜ್ ಆಗಿರುತ್ತದೆ. ಅದನ್ನು ಸರಿಪಡಿಸುವ ಕೆಲಸವನ್ನು ನೀವು ಮಾಡಬೇಕು. ಈ ಮೂಲಕ ಸೋರಿಕೆ ನಿಲ್ಲುವುದು ಮಾತ್ರವಲ್ಲ. ನಿಮ್ಮ ನೀರಿನ ಬಿಲ್ ನಲ್ಲೂ ಹಣ ಉಳಿಸಬಹುದು.

ಕೈನಲ್ಲೇ ಹೂದೋಟಕ್ಕೆ ನೀರು ಹಾಕಿ: 
ಈಗ ಎಲ್ಲರ ಮನೆಯಲ್ಲೂ ಗಾರ್ಡನ್ ಇದ್ದೆ ಇದೆ. ಅದರಲ್ಲೂ ಗಾರ್ಡನ್ ಅನ್ನು ಸರಿಯಾಗಿ ಪೋಷಿಸಲು ನೀರನ್ನು ಬಳಕೆ ಮಾಡುವುದು ಕೂಡ ಸಾಮಾನ್ಯ. ಆದರೆ ನೀವು ನಿಜವಾಗಲೂ ನೀರನ್ನು ಉಳಿಸುವ ಕಾಳಜಿಯನ್ನು ಹೊಂದಿದ್ದೀರಿ ಎಂದಾದರೆ ನೀವು ಕೈನಿಂದಲೇ ನೀರನ್ನು ಹಾಕುವ ಕೆಲಸ ಮಾಡಿ. ಹೌದು, ಈಗ ಗಾರ್ಡನ್ ಗೆ ನೀರು ಹಾಕುವ ಜಗ್ ರೂಪದ ವಸ್ತು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಜಗ್ ಮೂಲಕ ಕೈನಿಂದಲೇ ಗಿಡಗಳಿಗೆ ಬೇಕಾದಷ್ಟು ನೀರನ್ನು ನೀವು ಹಾಕಬಹುದು. ಯಾಕೆಂದರೆ ಸ್ವಯಂಚಾಲಿತ ಪೈಪ್ ಲೈನ್ ಗಳು ಹೆಚ್ಚಿಗಿನ ನೀರನ್ನು ಗಿಡಗಳಿಗೆ ಬಳಕೆ ಮಾಡುತ್ತದೆ. ಅಲ್ಲದೇ ನೀರು ಪೋಲು ಆಗುವುದು ಜಾಸ್ತಿ. ಹೀಗಾಗಿ ಕೈನಿಂದಲೇ ನೀರು ಹಾಕಿ ಗಿಡವನ್ನು ಉತ್ತಮವಾಗಿ ಪೋಷಿಸುವುದು ಅಲ್ಲದೇ ನೀರನ್ನು ಉಳಿಸಬಹುದು.

ಸಿಂಕ್ ನಲ್ಲಿ ನೀರು ವೇಸ್ಟ್ ಆಗುವುದನ್ನು ತಡೆಯಿರಿ: 
ಮನೆಯಲ್ಲಿ ಅತ್ಯಂತ ನೀರು ವೇಸ್ಟ್ ಆಗುವ ಜಾಗ ಎಂದರೆ ಅದು ಸಿಂಕ್. ಹೌದು, ಸಿಂಕ್ ನಲ್ಲಿ ವೇಸ್ಟ್ ಆದಷ್ಟು ನೀರು ಎಲ್ಲೂ ವೇಸ್ಟ್ ಆಗುವುದಿಲ್ಲ. ಹೀಗಾಗಿ ನೀವು ಸಿಂಕ್ ನಲ್ಲಿ ನೀರು ವೇಸ್ಟ್ ಆಗುವುದನ್ನು ತಡೆಯುವ ಕೆಲಸ ಮಾಡಬೇಕು. ಹೌದು, ಹೆಚ್ಚಿನ ಸಿಂಕ್ ನ ಪೈಪ್ ಲೈನ್ ಗಳಲಿ ನೀರಿನ ಹರಿವು ವೇಗವಾಗಿ ಇರುತ್ತದೆ. ಹೀಗಾಗಿ ನೀರು ಪಾತ್ರೆ ತೊಳೆಯುವಾಗ, ಕೈ ತೊಳೆಯುವಾಗ ಬಸ್ ಎಂದು ಬಂದು ವೇಗದಲ್ಲಿ ಪೋಲು ಆಗುತ್ತಲೇ ಇರುತ್ತದೆ. ಹೀಗಾಗಿ ಸಿಂಕ್ ನಲ್ಲಿರುವ ನೀರಿನ ವೇಗವನ್ನು ಮಿತಿಗೊಳಿಸಬೇಕು. ಈ ಮೂಲಕ ನೀರು ಪೊಲು ಆಗುವುದನ್ನು ತಡೆಯಬಹುದು. ಇನ್ನು ನಿಮಗೆ ಅನುಭವ ಆಗಿರಬಹುದು ಸಿಂಕ್ ಮುಂದೆ ಹಲ್ಲು ತೊಳೆಯಲು ಹೋದರೆ ಬ್ರಷ್ ಮಾಡುವಾಗ ಸಿಂಕ್ ನ ನೀರು ಹಾಗೇ ಬಿಟ್ಟಿರುತ್ತೇವೆ. ಅಥವಾ ಶೇವ್ ಮಾಡುವಾಗ ಸಿಂಕ್ ನ ಟ್ಯಾಪ್ ಆನ್ ಆಗೇ ಇರುತ್ತದೆ. ಹೀಗಾಗಿ ಸಿಂಕ್ ಬಳಿ ನೀವು ಗಮನಿಸಬೇಕು. ನೀರನ್ನು ಸಂರಕ್ಷಿಸಲು ಇಂದೇ ಸಿಂಕ್ ನಲ್ಲಿ ಆಗುವ ವೇಸ್ಟ್ ಅನ್ನು ತಡೆಯಿರಿ.

ಸ್ನಾನ ಮಾಡುವಾಗ ನೀರಿನ ಉಳಿಕೆ ಬಗ್ಗೆ ಯೋಚಿಸಿ: 
ನಮ್ಮಲ್ಲಿ ಅನೇಕರು ಸ್ನಾನದ ಕೊಠಡಿಗೆ ಹೋದರೆ ಸಾಕು ಹೊರಗೆ ಬರುವಾಗ ಅರ್ಧ ಗಂಟೆ ಒಂದು ಗಂಟೆ ಆಗುತ್ತದೆ. ಕೆಲವರಿಗೆ ನೀರಿನಲ್ಲಿ ಆಡುವ ಹುಚ್ಚು ಇರುತ್ತದೆ. ಹೀಗೆ ನೀರಿನಲ್ಲಿ ಆಡುತ್ತ ನೋರು ಪೊಲು ಮಾಡುವುದುಂಟು. ಹೀಗಾಗಿ ಸ್ನಾನವನ್ನು ಸ್ನಾನದ ರೀತಿ ಮಾಡಲು ಕಲಿಯಬೇಕು. ನೀರಿನಲ್ಲಿ ಆಟ ಆಡಬಾರದು ಅಥವಾ ನೀರು ಮೈ ಮೇಲೆ ಹಾಕುತ್ತಲೇ ಇರಬಾರದು. ಸ್ನಾನಕ್ಕೆ ಎಷ್ಟು ನೀರು ಬೇಕು ಅಷ್ಟನೇ ಬಳಸಿದರೆ ಉತ್ತಮ. ಅಲ್ಲದೇ ಸ್ನಾನ ಮಾಡುವ ಸಮಯವನ್ನು ಮಿತಿಗೊಳಿಸಿ.