ನಾನ್ವೆಜ್ ಆಹಾರ ಸೇವನೆ ತುಂಬಾನೇ ಕಮ್ಮಿ ಮಾಡಬೇಕು, ಅದರೆ ಮೊಟ್ಟೆ ಸೇವಿಸಬಹುದು. ಮೊಟ್ಟೆಯಿಂದ ಪ್ರೊಟೀನ್ ದೊರೆಯುವುದು. ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಿದೆ, ಅಲ್ಲದೆ 9 ಬಗೆಯ ಅಮೈನೋ ಆಮ್ಲವಿದೆ. ಇದರಿಂದಾಗಿ ಮೊಟ್ಟೆಯು ಹಾನಿಗೊಳಗಾದ ಸ್ನಾಯುಗಳನ್ನು ರಿಪೇರಿ ಮಾಡುತ್ತದೆ. ಅಲ್ಲದೆ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ. ಬೇಸಿಯಲ್ಲಿ ಉಷ್ಣಾಂಶ ಅಧಿಕವಿರುವಾಗ ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ದೊರೆಯುವ ಲಾಭವೇನು, ಅಡ್ಡಪರಿಣಾಮವಿದೆಯೇ? ಎಂದು ನೋಡೋಣ ಬನ್ನಿ:
ಮೊಟ್ಟೆಯಲ್ಲಿರುವ ಪೋಷಕಾಂಶಗಳು
ವಿಟಮಿನ್ ಎ
ವಿಟಮಿನ್ ಡಿ
ವಿಟಮಿನ್ ಇ ವಿಟಮಿನ್ ಬಿ12
ರಿಬೋಪ್ಲೇವಿನ್
ಫೋಲೆಟ್
ಕಬ್ಬಿಣದಂಶ
ಸೆಲೆನಿಯಂ
ಸತುವಿನಂಶವಿದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು:
ಮೊಟ್ಟೆ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯಲ್ಲಿರುವ ಪೊಷಕಾಂಶ ನಿಮ್ಮ ಕಣ್ಣಿನ ದೃಷ್ಟಿಗೆ ತುಂಬಾನೇ ಒಳ್ಳೆಯದು.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು:
ಮೊಟ್ಟೆಯಲ್ಲಿರುವ ಚೊಲೈನೆ ಅಂಶ ಮೆದೂಳಿನ ಆರೋಗ್ಯಕ್ಕೆ ಒಳ್ಳೆಯದು, ಮಕ್ಕಳಿಗೂ ಅವರ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಸ್ನಾಯುಗಳನ್ನು ಬಲ ಪಡಿಸುತ್ತದೆ:
ಬೇಸಿಗೆಯಲ್ಲಿ ಸ್ವಲ್ಪ ಓಡಾಡಿದರೆ ಸುಸ್ತಾಗುತ್ತದೆ, ಸ್ನಾಯುಗಳನ್ನು ಬಲಪಡಿಸಲು ಮೊಟ್ಟೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ.
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು:
ಮೊಟ್ಟೆಯಲ್ಲಿ ವಿಟಮಿನ್ ಎ, ಇ , ಸೆಲೆನಿಯಮ್,ಸತುವಿನಂಶವಿದೆ, ಇದು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು, ಇನ್ನು ಮೊಟ್ಟೆಯಲ್ಲಿರುವ ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು.