ನಿಮ್ಮ ಕೂದಲು ಡಲ್ ಆಗಿ ಕಾಣಿಸುತ್ತಿದೆ ಎಂದಾದರೆ ಹೊಳಪು ಹೆಚ್ಚಿಸಲು ಹೀಗೆ ಮಾಡಿ!

ಪ್ರತಿಯೊಬ್ಬರು ಕೂಡ ಆಕರ್ಷಕವಾದ ಕೂದಲು ಬೇಕೆಂದು ಬಯಸುತ್ತಾರೆ, ಆದರೆ ಆಕರ್ಷಕ ಕೂದಲು ಪಡೆಯಬೇಕೆಂದರೆ ಕೂದಲನ್ನು ಅಷ್ಟೇ ಚೆನ್ನಾಗಿ ಆರೈಕೆ ಮಾಡಬೇಕಾಗುತ್ತದೆ. ಆಗ ಮಾತ್ರ ಮೃದುವಾದ, ಸೊಂಪಾದ ಕೂದಲನ್ನು ಪಡೆಯಲು ಸಾಧ್ಯ.

ನಿಮ್ಮ ಕೂದಲು ಡಲ್ ಆಗಿ ಕಾಣಿಸುತ್ತಿದೆ ಎಂದಾದರೆ ನೀವು ಈ ರೀತಿ ಆರೈಕೆ ಮಾಡಿದರೆ ಹೊಳಪಿನ ಕೂದಲು ಪಡೆಯಬಹುದು. ನಿಮ್ಮ ಕೂದಲಿನ ಆರೈಕೆಗೆ ಈ ಸಿಂಪಲ್ ಟಿಪ್ಸ್ ತುಂಬಾನೇ ಸಹಕಾರಿಯಾಗಿದೆ ನೋಡಿ:

ಮೊದಲಿಗೆ ಡಲ್ ಕೂದಲಿಗೆ ಕಾರಣವೇನು ಎಂದು ನೋಡೋಣ:
ದೂಳು, ಶುಷ್ಕ ವಾತಾವರಣ, ಹೇರ್ ಕಲರಿಂಗ್, ಅತಿಯಾದ ಶ್ಯಾಂಪೂ ಬಳಸುವುದು ಈ ಎಲ್ಲಾ ಕಾರಣಗಳಿಂದ ಕೂದಲಿನಲ್ಲಿನ ಮಾಯಿಶ್ಚರೈಸರ್ ಕಡಿಮೆಯಾಗಿ ಕೂದಲು ಡಲ್ ಆಗುವುದು. ಈ ರೀತಿ ಡಲ್ ಆದ ಕೂದಲಿನ ಹೊಳಪನ್ನು ಹೆಚ್ಚಿಸುವುದು ಹೇಗೆ ಎಂದು ನೋಡೋಣ:

ಕೂದಲಿನ ಹೊಳಪು ಹೆಚ್ಚಿಸುವುದು ಹೇಗೆ:

ಸರಿಯಾದ ಶ್ಯಾಂಪೂ ಬಳಸಿ:
ಅಧಿಕ ರಾಸಾಯನಿಕವಿರುವ ಶ್ಯಾಂಪೂ ಬಳಸುವುದರಿಂದ ಕೂದಲಿನಲ್ಲಿರುವ ಮಾಯಿಶ್ಚರೈಸರ್ ಎಲ್ಲಾ ಹೋಗಿ ಕೂದಲು ಡ್ರೈಯಾಗುವುದು, ಆದ್ದರಿಂದ ಕೂದಲಿನ ಮಾಯಿಶ್ಚರೈಸರ್ ಕಾಪಾಡುವಂಥ ಶ್ಯಾಂಪೂ ಬಳಸಿ. 

ತಣ್ಣೀರಿನಲ್ಲಿ ತಲೆ ತೊಳೆಯಿರಿ:
ಬಿಸಿ ನೀರಿನಿಂದ ತಲೆತೊಳೆಯುವ ಅಭ್ಯಾಸ ಇದ್ದರೆ ಈ ಅಭ್ಯಾಸ ಬಿಡುವುದು ಒಳ್ಳೆಯದು, ಏಕೆಂದರೆ ಬಿಸಿ ನೀರು ಕೂದಲಿನ ಮಾಯಿಶ್ಚರೈಸರ್ ಹಾಳು ಮಾಡುತ್ತದೆ. ನೀವು ಪಾರ್ಲರ್ಗೆ ಹೋಗಿ ಹೇರ್ ವಾಶ್ ಮಾಡಿಸಿದರೆ ಅವರು ತಣ್ಣೀರಿನಿಂದ ಮಾಡುತ್ತಾರೆ ಏಕೆಂದರೆ ತಣ್ಣೀರಿನಲ್ಲಿ ಹೇರ್ ವಾಶ್ ಮಾಡಿದರೆ ಮಾಯಿಶ್ಚರೈಸರ್ ಲಾಕ್ ಆಗಿ ಕೂದಲು ಬಲವಾಗುವುದು.

ಸಿಲ್ಕ್ ಅಥವಾ ಸ್ಯಾಟಿನ್ ದಿಂಬು ಬಳಸಿ:
ನೀವು ಸ್ಯಾಟಿನ್ ಅಥವಾ ಸಿಲ್ಕ್ ದಿಂಬಿನ ಮೇಲೆ ಮಲಗಿ, ಇಲ್ಲದಿದ್ದರೆ ಕೂದಲು ಹಾಳಾಗುವುದು. ಕಾಟನ್ ಅಥವಾ ಗಟ್ಟಿಯಾದ ದಿಂಬು ಬಳಸಿದರೆ ಕೂದಲು ಒರಟಾಗುವುದು.

ಕೂದಲಿನ ಆರೋಗ್ಯ ವೃದ್ಧಿಸುವ ಆಹಾರ ಸೇವಿಸಿ:

 * ಬ್ಲೂಬೆರ್ರಿ

 * ನಟ್ಸ್

 * ಮೊಟ್ಟೆ

 * ಪಾಲಾಕ್

* ಮೀನು 

* ಬೆಣ್ಣೆಹಣ್ಣು 

* ತೆಂಗಿನೆಣ್ಣೆ 

* ಆಲೀವ್ ಎಣ್ಣೆ ಹೇರ್ ಡ್ರೈಯರ್ನಿಂದ ಕೂದಲಿಗೆ ಹಾನಿಯಾಗುತ್ತಿದ್ದರೆ, ಈ ಸಿಂಪಲ್ ಟ್ರಿಕ್ಸ್ ಬಳಸಿ

ಟೆಂಪೋರರಿ ಶೈನಿಂಗ್ ಬಳಸಿ: 
ಎಣ್ಣೆ, ಸೆರಮ್, ಸ್ಪ್ರೇಗಳು ಕೂದಲಿಗೆ ಟೆಂಪೋರರಿ ಶೈನಿಂಗ್ ನೀಡುತ್ತೆ, ಅದನ್ನು ಬಳಸಿ. ಒಳ್ಳೆಯ ಬ್ರ್ಯಾಂಡ್ನ ಹೇರ್ ಕಲರಿಂಗ್ ಮಾಡಿ. ನಿಮ್ಮ ಹೇರ್ ಸ್ಟೈಲಿಸ್ಟ್ ಬಳಿ ಮಾಡಿಸಿ. 

ತಲೆ ಬುಡದ ಮೇಲೆ ಗಮನ ಹರಿಸಿ: 
ನಿಮ್ಮ ತಲೆ ಬುಡಕ್ಕೆ ಮಸಾಜ್ ಮಾಡಿ, ಇದರಿಂದ ತಲೆ ಬುಡದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕೂದಲಿನ ಬುಡ ಬಲವಾಗುವುದು. 

* ಬೆರಳನ್ನು ವೃತ್ತಾಕಾರವಾಗಿ ತಲೆಯ ಮೇಲೆ ಪ್ರೆಸ್ ಮಾಡಿ, ಈ ರೀತಿ 5-10 ನಿಮಿಷ ಪ್ರತಿದಿನ ಮಾಡಿ. ದಿನದಲ್ಲಿ ಎರಡು ಬಾರಿ ಮಾಡಿದರೆ ಇನ್ನೂ ಒಳ್ಳೆಯದು. 

ಈ ರೀತಿ ಮಾಡುವುದು ಕಡಿಮೆ ಮಾಡಿ: 

* ಹೇರ್ಸ್ಟೈಲ್ ಮಾಡಲು ಹೇರ್ ಡ್ರೈಯರ್ ಬಳಸುವುದು, ಹೇರ್ ಸ್ಟ್ರೈಟ್ನಿಂಗ್, ಕರ್ಲಿಂಗ್ ಮೆಷಿನ್ ಬಳಸುವುದು, ಕೂದಲನ್ನು ಹೀಟ್ ಮಾಡುವುದು ಇವೆಲ್ಲಾ ಮಾಡಬೇಡಿ. 

* ತುಂಬಾ ಕಂಡೀಷನರ್ ಬಳಸಬೇಡಿ ಕಂಡಿಷನರ್ ಬೇಕು, ಆದರೆ ಲೈಟ್ ಆಗಿರಲಿ, ಇಲ್ಲದಿದ್ದರೆ ಕೂದಲಿನಲ್ಲಿ ಜಿಡ್ಡಿನಂಶ ಹೆಚ್ಚಿಸುತ್ತೆ. 

* ತಲೆಗೆ ಬಿಸಿ ನೀರು ಹಾಕಬೇಡಿ.