ದೇಹದ ಆರೋಗ್ಯಕ್ಕೆ ಶಿಲಾಜಿತ್ ಎಂಬ ಒಂದೇ ಔಷಧಿ! ಇದರ ಲಾಭವೇನು ಗೊತ್ತಾ?

ಶಿಲಾಜಿತ್ ಅನ್ನುವ ಹೆಸರನ್ನು ಬಹುಪಾಲು ಜನರು ಇಂದೇ ಕೇಳುತ್ತಿರಬಹುದು. ಶಿಲಾಜಿತ್ ಮೂಲತಃ ಉರಿಯೂತ ಕಡಿಮೆ ಮಾಡಲು ಬಳಸಲ್ಪಡುವ ವಸ್ತು. ಆದರೆ ಇದಕ್ಕೂ ಮುನ್ನ ಶಿಲಾಜಿತ್ ಎಂಬ ಅತ್ಯುತ್ತಮ ಆರೋಗ್ಯಕಾರಕದ ಬಗ್ಗೆ ತಿಳಿದುಕೊಳ್ಳಿ.

ಶಿಲಾಜಿತ್ ಒಂದು ನೈಸರ್ಗಿಕ ವಸ್ತುವಾಗಿದ್ದು, ಇದನ್ನು ಸಾಂಪ್ರದಾಯಿಕ ಆಯುರ್ವೇದ ಔಷಧದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದು ವಿವಿಧ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ನಿಮ್ಮ ಕ್ಷೇಮ ದಿನಚರಿಗೆ ಅಮೂಲ್ಯವಾದ ಸೇರ್ಪಡೆಯಾಗಿದೆ. 

ಶಿಲಾಜಿತ್ ಎಂಬ ವಸ್ತು ಮೂಲತಃ ಕಪ್ಪು ಶಿಲೆಗಳಿರುವ ಕಲ್ಲುಗಳಿರುವ ಪ್ರದೇಶದಲ್ಲಿ ಮಾತ್ರ ಕಂಡುಬರುವ ಒಂದು ರೀತಿಯ ಪುಡಿಯಾಗಿದೆ. ಇದು ಹಿಮಾಲಯದ ತಪ್ಪಲಲ್ಲಿ ಕಂಡು ಬರುತ್ತದೆ. ಇದು ನೈಸರ್ಗಿಕವಾಗಿಯೇ ತ್ವಚೆಯು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ ಮತ್ತು ಪುನರುಜ್ಜೀವನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಇದು ನಮ್ಮನ್ನು ದೈಹಿಕವಾಗಿ ಹೆಚ್ಚು ಸಕ್ರಿಯವಾಗಿ ಮಾಡುತ್ತದೆ.

ಶಿಲಾಜಿತ್ ಖನಿಜ ಆಧಾರಿತ ಸಾರವಾಗಿದ್ದು, ಇದು ತೆಳು-ಕಂದು ಬಣ್ಣದಿಂದ ಕಪ್ಪು-ಕಂದು ಬಣ್ಣ ಹೊಂದಿರುತ್ತದೆ. ಶಿಲಾಜಿತ್ ಹ್ಯೂಮಸ್, ಸಾವಯವ ಸಸ್ಯ ಸಾಮಗ್ರಿಗಳು ಮತ್ತು ಫುಲ್ವಿಕ್ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿ ಈ ಶಿಲಾಜಿತ್ ಔಷಧಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಾಗಾದರೆ ನಾವಿಂದು ಶಿಲಾಜಿತ್ ಪುಡಿಯ ಆರೋಗ್ಯಕರ ಲಾಭಗಳೇನು ತಿಳಿದುಕೊಳ್ಳೋಣ.

ಇದು ಅತ್ಯುತ್ತಮ ರೋಗ ನಿರೋಧಕ ಶಕ್ತಿ ಹೊಂದಿದೆ: 
ಶಿಲಾಜಿತ್ ಫುಲ್ವಿಕ್ ಆಮ್ಲ ಮತ್ತು ಇತರ ನಿರೋಧಕಗಳ ಗಣಿಯಾಗಿದೆ. ಅದು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ ನಿಮ್ಮ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಗೆ ಪೂರಕವಾದ ಬಿಳಿ ರಕ್ತಕಣಗಳ ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ.

ಉರಿಯೂತಕ್ಕೆ ಮನೆ ಮದ್ದು:
ಶಿಲಾಜಿತ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದೊಂದು ಮನೆ ಮದ್ದಾಗಿದ್ದು, ದೀರ್ಘಕಾಲದ ಉರಿಯೂತವು ಸಂಧಿವಾತ, ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿರುತ್ತದೆ. ಹೀಗಾಗಿ ಈ ಶಿಲಾಜಿತ್ ಎಂಬ ಆರೋಗ್ಯ ವರ್ಧಕ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿದೆ.ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ ಶಿಲಾಜಿತ್ ಮೆದುಳಿನ ಕಾರ್ಯ ಹಾಗೂ ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಡೋಪಮೈನ್ ಮತ್ತು ಅಸೆಟೈಲ್ಕೋಲಿನ್ನಂತಹ ಮೆದುಳಿನ ರಾಸಾಯನಿಕಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ಸೆರೆಬ್ರಲ್ ಪರಿಚಲನೆ ಸುಧಾರಿಸುತ್ತದೆ. ನೈಸರ್ಗಿಕ ಕಾಮೋತ್ತೇಜಕ

ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ:
ಶಿಲಾಜಿತ್ ಮೆದುಳಿನ ಕಾರ್ಯ ಹಾಗೂ ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಡೋಪಮೈನ್ ಮತ್ತು ಅಸೆಟೈಲ್ಕೋಲಿನ್ನಂತಹ ಮೆದುಳಿನ ರಾಸಾಯನಿಕಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ಸೆರೆಬ್ರಲ್ ಪರಿಚಲನೆ ಸುಧಾರಿಸುತ್ತದೆ.

ನೈಸರ್ಗಿಕ ಕಾಮೋತ್ತೇಜಕ:
ಶಿಲಾಜಿತ್ ಬಹುಪಾಲು ಕಾಮೋತ್ತೇಜಕ ಔಷಧಿಯಾಗಿಯೇ ಬಳಕೆಯಾಗುತ್ತಿದೆ. ಪುರುಷ ಫಲವತ್ತತೆ ಮತ್ತು ಟಸ್ಟೋಸ್ಟರೇನ್ ವೀರ್ಯ ಹೆಚ್ಚಲು ಇದು ಸಹಕಾರಿಯಾಗಿದೆ. ವೃಷಣಗಳಲ್ಲಿನ ಲೇಡಿಗ್ ಕೋಶಗಳ ಕಾರ್ಯವನ್ನು ಹೆಚ್ಚಿಸುವ ಮೂಲಕ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಮೂಳೆಗಳ ಆರೋಗ್ಯ ವೃದ್ಧಿ:
ಶಿಲಾಜಿತ್ ಪುಡಿ ಮೂಳೆಗಳ ಆರೋಗ್ಯ ಕಾಪಾಡಲಿದೆ. ವಿಶೇಷವಾಗಿ ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆ ಇದರ ಬಳಕೆ ಅತ್ಯಗತ್ಯ. ಹೀಗಾಗಿ ಮಕ್ಕಳಿಗೆ ಊಟದ ಬಳಿಕ ಶಿಲಾಜಿತ್ ನೀಡುವುದು ಉತ್ತಮ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿರುತ್ತದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಉತ್ತಮ.

ವಯಸ್ಸಾಗುವಿಕೆ ತಡೆಯುತ್ತದೆ:
ಶಿಲಾಜಿತ್ ಪುಡಿಯು ರಾಡಿಕಲ್ಗಳಿಂದ ಹಾನಿಯಾಗುವ ಜೀವಕೋಶಗಳ ರಕ್ಷಿಸುವ ಮೂಲಕ ಅವಧಿ ಪೂರ್ವ ವಯಸ್ಸಾಗುವಿಕೆ ಕಡಿವಾಣ ಹಾಕುತ್ತದೆ. ಚರ್ಮ ಸುಕ್ಕುಗಟ್ಟುವಿಕೆ, ಆರೋಗ್ಯಕರ ಚರ್ಮ, ಸುಧಾರಿತ ಕಾಲಜನ್ ಉತ್ಪಾದನೆ ಮತ್ತು ಕಡಿಮೆ ಸುಕ್ಕುಗಳಿಗೆ ಕಾರಣವಾಗುತ್ತದೆ.