ಬೇಸಿಗೆ ಕಾಲದಲ್ಲಿ ದಾಳಿಂಬೆ ಹಣ್ಣುಗಳ ಬೆಲೆ ಗಗನಕ್ಕೇರುತ್ತದೆ. ಹಾಗೆ ದಾಳಿಂಬೆ ಜ್ಯೂಸ್ ಗೂ ಕೂಡ ಬಹಳ ಬೇಡಿಕೆ ಇರಲಿದೆ. ಇನ್ನು ಈ ದಾಳಿಂಬೆ ಜ್ಯೂಸ್ ಸೇವಿಸುವುದರಿಂದಾಗುವ ಪ್ರಯೋಜನವೇನು? ಯಾವಾಗ ಸೇವಿಸಬೇಕು ಎಂಬುದನ್ನು ಕೂಡ ತಿಳಿದಿರಬೇಕು. ಹಾಗೆ ನೀವು ನಿತ್ಯ ಬೆಳಗ್ಗೆ ದಾಳಿಂಬೆ ಜ್ಯೂಸ್ ಸೇವಿಸುವುದರಿಂದಾಗುವ ಲಾಭದ ಕುರಿತು ತಿಳಿದುಕೊಳ್ಳೋಣ.
ಹೃದಯದ ಆರೋಗ್ಯ ಕಪಾಡಲಿದೆ:
ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಮ ತು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಪರಿಸ್ಥಿತಿಗಳಿಗೆ ಕಾರಣವಾಗುವ ದೀರ್ಘಕಾಲದ ಉರಿಯೂತದ ಸಮಸ್ಯೆ ಬಗೆಹರಿಸಲು ಇದು ಸಹಕಾರಿಯಾಗಲಿದೆ. ದಾಳಿಂಬೆಯಲ್ಲಿ ಪುನಿಕಲಾಗಿನ ಎಂದು ಕರೆಯಲಾಗುವ ಸಂಯುಕ್ತವಿದ್ದು, ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಪಾಲಿಫಿನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿರುವುದರಿಂದ, ಇದರ ಜ್ಯೂಸ್ ಸೇವನೆಯು ರಕ್ತ ಶುದ್ಧೀಕರಣ ಹಾಗೆ ಹೃದಯ ಸಮಸ್ಯೆಗೆ ಪರಿಹಾರ ನೀಡಲಿದೆ.
ಕಿಡ್ನಿ ಆರೋಗ್ಯಕ್ಕೆ ಬಹಳ ಉತ್ತಮ:
ದಾಳಿಂಬೆ ಜ್ಯೂಸ್ ಮೂತ್ರಪಿಂಡದ ಕಲ್ಲುಗಳ ರಚನೆಯ ಅಪಾಯವನ್ನು ಕಡಿಮೆ ಮಾಡಲಿದೆ. ದಾಳಿಂಬೆ ಸಾರವು ಪುನರಾವರ್ತಿತ ಮೂತ್ರಪಿಂಡದ ಕಲ್ಲುಗಳಿರುವವರಲ್ಲಿ ಕಲ್ಲಿನ ರಚನೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ಪ್ರತಿಬಂಧಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ದಾಳಿಂಬೆ ರಸದಲ್ಲಿರುವ ಆಕ್ಸಲೇಟ್ಗಳು, ಕ್ಯಾಲ್ಸಿಯಂ ಮತ್ತು ಫಾಸ್ಪೇಟ್ಗಳ ನಿಯಂತ್ರಣದಲ್ಲಿಡಲಿದೆ.
ನೆನಪಿನ ಶಕ್ತಿ ವೃದ್ಧಿಗೆ ಇದು ಸಹಕಾರಿ:
ನೀವು ಬೆಳಗ್ಗೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ವೃದ್ಧಿಸಲಿದೆ. ದಾಳಿಂಬೆಗಳು ಎಲಾಜಿಟಾನಿನ್ಗಳು ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ, ಇದು ನಿಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುವ ಮೂಲಕ ಮೆದುಳಿನ ಕೋಶಗಳ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಹಾಗೆ ಇದು ಆಲ್ಜೈಮರ್ ಹಾಗೆ ಪಾರ್ಕಿಸನ್ ಅಪಾಯಗಳ ಕಡಿಮೆ ಮಾಡಬಹುದಾಗಿದೆ. ಎಲ್ಲಜಿಟಾನಿನ್ಗಳು ಕರುಳಿನಲ್ಲಿ ಯುರೊಲಿಥಿನ್ ಎ ಎಂದು ಕರೆಯಲ್ಪಡುವ ಸಂಯುಕ್ತವನ್ನು ಉತ್ಪಾದಿಸುತ್ತವೆ, ಇದನ್ನು ಮೆದುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಮತ್ತು ಅರಿವಿನ ಕಾಯಿಲೆಗಳ ಅಪಾಯ ಕಡಿಮೆ ಮಾಡಲಿವೆ.
ಜೀರ್ಣಕ್ರಿಯೆಗೆ ಬಹಳ ಉತ್ತಮ:
ಬೆಳಗ್ಗೆಯ ಸಮಯದಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಇದರಿಂದ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸಲು ಸಹಾಯ ಮಾಡಲಿದೆ. ಕರುಳಿನ ಆರೋಗ್ಯ ವೃದ್ಧಿಸುವ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲಿವೆ. ಇದು ಪ್ರಿಬಯಾಟಿಕ್ ಅಂಶ ಹೆಚ್ಚಾಗಲು ಕಾರಣವಾಗಲಿದೆ. ಈ ಪ್ರಿಬಯಾಟಿಕ್ ಅಂಶವು ಕರುಳಿನ ಆರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ. ಹೀಗಾಗಿ ಬೆಳಗಿನ ವೇಳೆ ದಾಳಿಂಬೆ ಜ್ಯೂಸ್ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ.
ತೂಕ ಇಳಿಸಲು ವ್ಯಾಯಾಮಕ್ಕೂ ಮುನ್ನ ಕುಡಿಯುವುದು ಉತ್ತಮ:
ದಾಳಿಂಬೆಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಹೀಗಾಗಿ ನೀವು ತೂಕ ಇಳಿಸಲು ಇಚ್ಛಿಸುತ್ತಿದ್ದರೆ ಬೆಳಗ್ಗೆ ದಾಳಿಂಬೆ ಜ್ಯೂಸ್ ಕುಡಿಯುವುದು ಬಹಳ ಉತ್ತಮ. ಹಾಗೆ ನೀವು ಬೆಳಗ್ಗೆ ವ್ಯಾಯಾಮ ಮಾಡುವವರಾಗಿದ್ದರೆ ಈ ಜ್ಯೂಸ್ ಕುಡಿದು ವ್ಯಾಯಾಮ ಆರಂಭಿಸುವುದು ಬಹಳ ಉತ್ತಮವಂತೆ. ಇದರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗಲಿದೆ.