ಒಂದು ಮಾವಿನ ಹಣ್ಣನ್ನು ಸಂಪೂರ್ಣ ತಿನ್ನಿ:
ಮಾವಿನ ಹಣ್ಣನ್ನು ಸಿಪ್ಪೆ ಸುಲಿದು ತಿಂತಾರೆ, ಆದರೆ ನೀವು ಮಧುಮೇಹಿಗಳಾಗಿದ್ದರೆ ಹಾಗೆ ತಿನ್ನಬೇಡಿ, ಸಿಪ್ಪೆ ಸಹಿತ ತಿನ್ನಿ. ಸಿಪ್ಪೆ ಸಹಿತ ತಿಂದಾಗ ಅಧಿಕ ನಾರಿನಂಶ ದೇಹವನ್ನು ಸೇರುವುದು , ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದಿಲ್ಲ.
ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ:
ನೀವು ಮಧುಮೇಹಿಗಳಾಗಿದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ, ಇದರಿಂದ ಸಕ್ಕರೆಯಂಶ ಹೆಚ್ಚಾಗುವುದು, ನೀವು ಮಾವಿನ ಹಣ್ಣನ್ನು ಹಾಗೆಯೇ ತಿನ್ನಿ, ಬದಲಿಗೆ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಅಂತ ಮಾಡಲು ಹೋಗಬೇಡಿ.
ನಾರಿನಂಶ ಅಧಿಕವಿರುವ ಮಾವಿನ ಹಣ್ಣು ಸೇವಿಸಿ:
ನೀವು ಮಾವಿನ ಹಣ್ಣು ಆಯ್ದುಕೊಳ್ಳುವಾಗ ನಾರಿನಂಶ ಅಧಿಕವಿರುವ ಮಾವಿನ ಹಣ್ಣು ಸೇವಿಸಿ. ಈ ಮಾವಿನ ಹಣ್ಣು ನಾರು ಕಡಿಮೆ ಇರುವ ಮಾವಿನ ಹಣ್ಣಿನಷ್ಟೇ ರುಚಿ ಇರುತ್ತದೆ, ಹಾಗಾಗಿ ಇಂಥ ಹಣ್ಣುಗಳನ್ನು ಆಯ್ಕೆ ಮಾಡಿ.
ಮಧ್ಯಾಹ್ನ ಹೊತ್ತು ತಿನ್ನಿ:
ಮಾವಿನ ಹಣ್ಣನ್ನು ರಾತ್ರಿ ಹೊತ್ತು ತಿನ್ನಲು ಹೋಗಬೇಡಿ, ಮಧ್ಯಾಹ್ನ ಹೊತ್ತು ತಿನ್ನಿ, ನಂತರ ಸ್ವಲ್ಪ ವಕ್ ಮಾಡಿ, ಮಾವಿನ ಹಣ್ಣಿನ ಜೊತೆಗೆ ಅಧಿಕ ನಾರಿನಂಶವಿರುವ ಆಹಾರ ಸೇವಿಸಿ.
ಮಾವಿನ ಹಣ್ಣು ತಿಂದಾಗ ಕಾರ್ಬ್ಸ್ ಸವಿಯಬೇಡಿ:
ನೀವು ಮಾವಿನ ಹಣ್ಣು ತಿಂದಾಗ ಓಟ್ಸ್ ತಿನ್ನಿ, ಬದಲಿಗೆ ಅನ್ನ ತಿನ್ನಬೇಡಿ, ಈ ರೀತಿ ಡಯಟ್ ಬ್ಯಾಲೆನ್ಸ್ ಮಾಡಿದರೆ ಮಾವಿನ ಹಣ್ಣನ್ನು ಮಧುಮೇಗಳು ತಿನ್ನಬಹುದು.
ಎಷ್ಟು ಮಾವಿನ ಹಣ್ಣು ತಿಂದರೆ ಯಾವುದೇ ಅಪಾಯವಿಲ್ಲ:
ಮಧುಮೇಹಿಗಳು ದಿನದಲ್ಲಿ 100 ಗ್ರಾಂನಷ್ಟು ಮಾವಿನ ಹಣ್ಣು ಸೇವಿಸಬಹುದು, ಇಷ್ಟು ಪ್ರಮಾಣದಲ್ಲಿ ತಿಂದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ಮಾವಿನ ಹಣ್ಣಿನಲ್ಲಿ ನಾರಿನಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿದೆ.
ಮಾವಿನ ಹಣ್ಣು ತಿಂದಾಗ ನಾರಿನಂಶ ಹೆಚ್ಚು ತಿನ್ನಿ:
ನೀವು ಒಂದು ಮಾವಿನ ಹಣ್ಣು ತಿಂದರೆ ನಾರಿನಂಶ ಹೆಚ್ಚಾಗಿ ತಿನ್ನಿ. ತರಕಾರಿ ಹೆಚ್ಚಾಗಿ, ರಾಗಿ ಬಳಸಿ, ಈ ರೀತಿ ಆಹಾರಕ್ರಮದಲ್ಲಿಯೇ ಬ್ಯಾಲೆನ್ಸ್ ಮಾಡಿದರೆ ಮಾವಿನ ಹಣ್ಣು ಭಯವಿಲ್ಲದೆ ತಿನ್ನಬಹುದು.