ಮುಟ್ಟಿನ ದಿನಗಳಲ್ಲಿ ಸೆಕ್ಸ್- ಇವೆಲ್ಲಾ ಸಂಗತಿಗಳು ನೆನಪಿರಲಿ!

ಹುಡುಗಿಯರು ಪ್ರೌಢವಸ್ಥೆ ತಲುಪಿದ ದಿನದಿಂದ ಸುಮಾರು 40ರ ಹರೆಯದ ಬಳಿಕವೂ ಋತುಚಕ್ರವೆನ್ನುವುದು ಸಾಮಾನ್ಯವಾಗಿ ಪ್ರತೀ ತಿಂಗಳು ಆಗುತ್ತಲಿರುವುದು. ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮಹಿಳೆಯರ ಸಂಖ್ಯೆಯು ತುಂಬಾ ಕಡಿಮೆಯೆಂದು ಹೇಳಬಹುದು. ಇದು ತುಂಬಾ ಅಶುಚಿಯ ಕ್ರಿಯೆಯಾಗಿರುವುದು. ಆದರೆ ಸುರಕ್ಷಿತ ಎಂದು ಹೇಳಲಾಗುತ್ತದೆ.

ಆದರೆ ಹೆಚ್ಚಿನ ಮಹಿಳೆಯರು ನೋವನ್ನು ಅನುಭವಿಸುವ ಕಾರಣದಿಂದಾಗಿ ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಿಂದ ದೂರವೇ ಇರುವರು. ಅದರಲ್ಲೂ ಭಾರತೀಯರು ಈ ದಿನಗಳಲ್ಲಿ ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಇಲ್ಲವೆನ್ನಬಹುದು. ಆದರೆ ಈ ಲೇಖನದಲ್ಲಿ ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಿಂದ ಸೆಳೆತ ಸಹಿತ ಕೆಲವೊಂದು ಲಾಭಗಳು ಸಿಗುವುದು. 

ಸೆಳೆತದಿಂದ ಆರಾಮ: 
ಲೈಂಗಿಕ ಕ್ರಿಯೆ ವೇಳೆ ಸಿಗುವ ಪರಾಕಾಷ್ಠೆಯಿಂದಾಗಿ ಸೆಳೆತ ಕಡಿಮೆಯಾಗುವುದು. ಗರ್ಭಕೋಶವು ತನ್ನ ಒಳಪದರ ಬಿಡುಗಡೆ ಮಾಡುವ ಪರಿಣಾಮವಾಗಿ ಸೆಳೆತ ಉಂಟಾಗುವುದು. ಪರಾಕಾಷ್ಠೆ ವೇಳೆ ಗರ್ಭಕೋಶದ ಸ್ನಾಯುಗಳು ಮತ್ತಷ್ಟು ಸಂಕುಚಿತವಾಗುವುದು ಮತ್ತು ಇದರ ಬಳಿಕ ಬಿಡುಗಡೆಯಾಗುವುದು. ಈ ಬಿಡುಗಡೆಯಿಂದಾಗಿ ಸ್ನಾಯು ಸೆಳೆತದಿಂದ ಆರಾಮ ಸಿಗುವುದು. ಲೈಂಗಿಕ ಕ್ರಿಯೆಯಿಂದಾಗಿ ಎಂಡ್ರೋಪಿನ್ ಎನ್ನುವ ರಾಸಾಯನಿಕವು ಬಿಡುಗಡೆಯಾಗುವ ಕಾರಣದಿಂದಾಗಿ ನಿಮಗೆ ಒಳ್ಳೆಯ ಭಾವನೆಯಾಗುವುದು. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದಾಗಿ ಋತುಚಕ್ರದ ಕಿರಿಕಿರಿಯಿಂದ ಮನಸ್ಸು ಬೇರೆಡೆ ಸಾಗುವುದು.

ಅವಧಿ ಕಡಿಮೆಯಾಗಬಹುದು: 
ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಅವಧಿ ಕಡಿಮೆ ಮಾಡಬಹುದು. ಪರಾಕಾಷ್ಠೆ ವೇಳೆ ಗರ್ಭಕೋಶದ ಅಂಶಗಳು ಬೇಗನೆ ಸಾಗುವುದು. ಇದರಿಂದ ಅವಧಿ ಕಡಿಮೆಯಾಗಬಹುದು.

ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚಾಗುವುದು: 
ಹಾರ್ಮೋನು ವೈಪರಿತ್ಯದಿಂದಾಗಿ ಋತುಚಕ್ರದ ಸಮಯದಲ್ಲಿ ಕಾಮಾಸಕ್ತಿಯಲ್ಲಿ ಬದಲಾವಣೆಯಾಗುವುದು. ಅಂಡೋತ್ಪತ್ತಿ ವೇಳೆ ತಮ್ಮ ಲೈಂಗಿಕ ಆಸಕ್ತಿಯು ಹೆಚ್ಚಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಇನ್ನು ಕೆಲವರು ಇದರಲ್ಲಿ ಆಸಕ್ತಿ ಕುಂದಿರುವುದಾಗಿ ತಿಳಿಸಿದ್ದಾರೆ.

ನೈಸರ್ಗಿಕ ಲ್ಯೂಬ್ರಿಕೆಂಟ್: 
ಋತುಚಕ್ರದ ವೇಳೆ ಕೆವೈಯನ್ನು ನೀವು ದೂರವಿಡಬಹುದು. ಯಾಕೆಂದರೆ ರಕ್ತವು ನೈಸರ್ಗಿಕ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದು.

ತಲೆನೋವು ಕಡಿಮೆ ಮಾಡುವುದು: 
ಋತುಚಕ್ರದ ವೇಳೆ ಹೆಚ್ಚಿನ ಮಹಿಳೆಯರಿಗೆ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುವುದು. ಋತುಚಕ್ರದ ವೇಳೆ ಮೈಗ್ರೇನ್ ಇರುವಂತಹ ವ್ಯಕ್ತಿಗಳು ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲ್ಲ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತಹ ಮಹಿಳೆಯರು ತಲೆನೋವು ಅಲ್ಪ ಅಥವಾ ಸಂಪೂರ್ಣವಾಗಿ ಶಮನವಾಗಿದ ಎಂದು ಹೇಳುವರು.

ಅಡ್ಡಪರಿಣಾಮಗಳು ಏನು?
ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ದೊಡ್ಡ ಸಮಸ್ಯೆಯೆಂದರೆ ಅಶುಚಿ. ಯಾಕೆಂದರೆ ರಕ್ತವು ನಿಮ್ಮ, ಸಂಗಾತಿ ಮತ್ತು ಹಾಸಿಗೆ ಮೇಲೆ ಬೀಳಬಹುದು. ಅದರಲ್ಲೂ ನಿಮಗೆ ಅಧಿಕ ರಕ್ತಸ್ರಾವವಿದ್ದರೆ. ಹಾಸಿಗೆಗೆ ರಕ್ತ ಮೆತ್ತಿಕೊಳ್ಳುವುದರ ಜತೆಗೆ ನಿಮಗೆ ಇದರಿಂದ ಆತ್ಮವಿಶ್ವಾಸ ಕುಂದಬಹುದು. ಅಶುಚಿಗೊಳಿಸುವ ಭಯದಿಂದಾಗಿ ಲೈಂಗಿಕ ಕ್ರಿಯೆಯ ಎಲ್ಲಾ ಸಂತೋಷ ಮಾಯವಾಗಬಹುದು.

ಲೈಂಗಿಕ ರೋಗಗಳು ಹರಡಬಹುದು: 
ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಇರುವಂತಹ ಮತ್ತೊಂದು ಅಪಾಯವೆಂದರೆ ಲೈಂಗಿಕ ರೋಗಗಳಾಗಿರುವ ಎಚ್ ಐವಿ ಅಥವಾ ಹೆಪಟಿಟಿಸ್ ಹರಡಬಹುದು. ಈ ವೈರಸ್ ಗಳು ರಕ್ತದಲ್ಲಿ ಇರುವುದು ಮತ್ತು ಇದು ರಕ್ತದಿಂದ ಹರಡಬಹುದು. ಲೈಂಗಿಕ ರೋಗಗಳ ತಡೆಯಲು ಈ ವೇಳೆ ಕಾಂಡೋಮ್ ಧರಿಸಿದರೆ ತುಂಬಾ ಒಳ್ಳೆಯದು. ಋತುಚಕ್ರದ ವೇಳೆ ಟ್ಯಾಂಪನ್ ನ್ನು ತೆಗೆದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲವಾದಲ್ಲಿ ಇದು ಮತ್ತಷ್ಟು ಆಳಕ್ಕೆ ಹೋಗಬಹುದು ಮತ್ತು ಇದನ್ನು ತೆಗೆಯಲು ವೈದ್ಯರನ್ನು ಭೇಟಿಯಾಗಬೇಕಾಗಿ ಬರಬಹುದು.

ಗರ್ಭಧರಿಸುವ ಸಾಧ್ಯತೆಯಿದೆಯಾ?
ನೀವು ಗರ್ಭಧರಿಸಲು ಪ್ರಯತ್ನಿಸದೆ ಇದ್ದರೆ ಆಗ ನೀವು ಗರ್ಭನಿರೋಧಕ ಬಳಸಿಕೊಳ್ಳುವುದು ಒಳ್ಳೆಯದು. ಋತುಚಕ್ರದ ವೇಳೆ ಗರ್ಭಧರಿಸುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಆದರೆ ಈ ವೇಳೆ ಗರ್ಭಧರಿಸುವ ಸಾಧ್ಯತೆಗಳು ಇವೆ. ಅಂಡೋತ್ಪತ್ತಿ ವೇಳೆ ನೀವು ಗರ್ಭಧರಿಸುವಂತಹ ಸಾಧ್ಯತೆಯು ಇರುವುದು. ಇದು ನಿಮ್ಮ ಋತುಚಕ್ರ ಆರಂಭವಾಗುವ 14 ದಿನ ಮೊದಲು ಆಗುವುದು. ಪ್ರತಿಯೊಬ್ಬ ಮಹಿಳೆಯ ಅವಧಿಯು ಭಿನ್ನವಾಗಿರುವುದು ಮತ್ತು ತಿಂಗಳಿಗೆ ಇದು ಬದಲಾಗುತ್ತ ಲಿರುವುದು. ಋತುಚಕ್ರಗಳ ನಡುವಿನ ಅವಧಿಯು ತುಂಬಾ ಸಣ್ಣದಾಗಿದ್ದರೆ ಆಗ ನೀವು ಋತುಚಕ್ರದ ವೇಳೆ ಗರ್ಭಧರಿಸುವ ಸಾಧ್ಯತೆಯು ಹೆಚ್ಚಾಗಿದೆ.

ವೀರ್ಯ ದೇಹದಲ್ಲಿ ಏಳು ದಿನಗಳ ಕಾಲ ಉಳಿಯಬಲ್ಲದು: 
ವೀರ್ಯವು ದೇಹದಲ್ಲಿ ಸುಮಾರು 7 ದಿನಗಳ ಕಾಲ ಉಳಿಯಬಲ್ಲದು. 22 ದಿನಗಳ ಆವರ್ತನವಾಗಿದ್ದರೆ ಋತುಚಕ್ರದ ಬಳಿಕ ಅಂಡೋತ್ಪತ್ತಿಯಾಗುವುದು. ಇದರಿಂದ ಅಂಡಾಣುವು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿರುವ ವೀರ್ಯವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಇದು ಸುರಕ್ಷಿತವಾಗಿರಬೇಕೇ? 
ಸುರಕ್ಷಿತ ಸೆಕ್ಸ್ ನಿಂದಾಗಿ ನೀವು ಲೈಂಗಿಕ ರೋಗಗಳಿಂದ ಮುಕ್ತಿ ಪಡೆಯಬಹುದು. ನಿಮಗೆ ಮಾತ್ರ ಲೈಂಗಿಕ ರೋಗವು ಹರಡುವುದಲ್ಲದೆ, ನಿಮ್ಮ ಸಂಗಾತಿಗೂ ನೀವು ಇದನ್ನು ಹರಡಬಹುದು. ಋತುಚಕ್ರದ ರಕ್ತದಲ್ಲಿ ಎಚ್ ಐವಿ ವೈರಸ್ ಬದುಕಬಹುದು. ನಿಮಗೆ ಗರ್ಭಧರಿಸಲು ಇಷ್ಟವಿಲ್ಲದೆ ಇದ್ದರೆ ಅಥವಾ ಲೈಂಗಿಕ ರೋಗ ಹರಡುವುದನ್ನು ತಡೆಯಲು ನಿಮ್ಮ ಸಂಗಾತಿಯು ಪ್ರತೀ ಸಲ ಲೈಂಗಿಕ ಕ್ರಿಯೆ ಮೊದಲು ಲ್ಯಾಟೆಕ್ಸ್ ಕಾಂಡೋಮ್ ಧರಿಸಲಿ. ಲ್ಯಾಟೆಕ್ಸ್ ನ ಅಲರ್ಜಿ ಇದ್ದರೆ ಆಗ ಬೇರೆ ವಿಧಾನಗಳನ್ನು ಅನುಸರಿಸಬಹುದು. ವೈದ್ಯರು ಅಥವಾ ಔಷಧಿಯಂಗಡಿಯಲ್ಲಿ ನೀವು ಸಲಹೆ ಪಡೆಯಬಹುದು.

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಕೆಲವು ಸಲಹೆಗಳು: ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯು ತುಂಬಾ ಆರಾಮದಾಯಕ ಹಾಗೂ ಕಡಿಮೆ ಅಶುಚಿಯಿಂದ ಸಾಗಲು ಇಲ್ಲಿ ಕೆಲವು ಸಲಹೆಗಳಿವೆ •ನಿಮ್ಮ ಸಂಗಾತಿ ಜತೆ ಮುಕ್ತ ಹಾಗೂ ಪ್ರಾಮಾಣಿಕವಾಗಿರಿ. ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ನಿಮಗೆ ಯಾವ ರೀತಿಯ ಭಾವನೆಯಾಗುವುದು ಎಂದು ತಿಳಿಸಿ ಮತ್ತು ಅವರ ಭಾವನೆಗಳನ್ನು ಕೇಳಿ. ನಿಮ್ಮಲ್ಲಿ ಒಬ್ಬರಿಗೆ ಹಿಂಜರಿಯಾಗುತ್ತಲಿದ್ದರೆ ಆಗ ಇದಕ್ಕೆ ಕಾರಣ ಹೇಳಿ.

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಕೆಲವು ಸಲಹೆಗಳು:

• ಟ್ಯಾಂಪನ್ ಹಾಕಿದ್ದರೆ ಆಗ ನೀವು ಲೈಂಗಿಕ ಕ್ರಿಯೆ ಮೊದಲು ಇದನ್ನು ತೆಗೆಯಿರಿ. ರಕ್ತ ಕೆಳಗೆ ಬಿದ್ದರೆ ಕಾಣದಿರಲು ಕಡುಬಣ್ಣದ ಟವೆಲ್ ನ್ನು ಹಾಸಿಗೆಗೆ ಹಾಕಿ. ಶಾವರ್ ಅಥವಾ ಬಾತ್ ಟಬ್ ನಲ್ಲಿ ಸೆಕ್ಸ್ ಈ ಸಮಯದಲ್ಲಿ ಒಳ್ಳೆಯದು.
• ಲೈಂಗಿಕ ಕ್ರಿಯೆ ಬಳಿಕ ಒರೆಸಿಕೊಳ್ಳಲು ಒಂದು ಒಣ ಬಟ್ಟೆ ಅಥವಾ ಟವೆಲ್ ಇಟ್ಟುಕೊಳ್ಳಿ.

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಕೆಲವು ಸಲಹೆಗಳು: 
• ಲ್ಯಾಟೆಕ್ಸ್ ಕಾಂಡೋಮ್ ಧರಿಸಲು ನಿಮ್ಮ ಸಂಗಾತಿಗೆ ಹೇಳಿ. ಇದರಿಂದ ಗರ್ಭಧಾರಣೆ ಹಾಗೂ ಲೈಂಗಿಕ ರೋಗಗಳು ಹರಡುವುದನ್ನು ತಡೆಯಬಹುದು.
• ನಿಮ್ಮ ನಿಯಮಿತ ಲೈಂಗಿಕ ಭಂಗಿಯು ಆರಾಮದಾಯಕವಲ್ಲದೆ ಇದ್ದರೆ ಆಗ ನೀವು ಬೇರೆ ಭಂಗಿ ಪ್ರಯತ್ನಿಸಿ. ಉದಾಹರಣೆಗೆ ನೀವು ಹೊಟ್ಟೆಯಲ್ಲಿ ಮಲಗಿಕೊಂಡು ಸಂಗಾತಿಯು ನಿಮ್ಮ ಬೆನ್ನ ಮೇಲೆ ಮಲಗಲು ಹೇಳಬಹುದು.