ಥೈರಾಯ್ಡ್ ನಮ್ಮ ದೇಹದ ಒಂದು ಅತ್ಯಂತ ಪ್ರಮುಖ ಭಾಗ. ಥೈರಾಯ್ಡಿಸಮ್ ಸಮಸ್ಯೆಯು ಸರಿಯಾಗಿ ಆಹಾರ ಸೇವನೆ ಮಾಡದಿರುವುದು, ವ್ಯಾಯಾಮದ ಕೊರತೆಯಂತಹ ಕಾರಣಗಳು ಥೈರಾಯ್ಡ್ ಸಮಸ್ಯೆಗೆ ಕಾರಣ. ಆದ್ದರಿಂದ ಹೈಪೋಥೈರಾಯ್ಡಿಸಮ್ ನಿಂದ ದೂರವಿರಲು ಯಾವ ಆಹಾರ ಪದಾರ್ಥಗಳು ಮುಖ್ಯ, ಯಾವ ಆಹಾರಗಳಿಂದ ನೀವು ದೂರ ಉಳಿಯಬೇಕು ಅನ್ನೋದನ್ನು ನಾವು ತಿಳಿಯೋಣ.
ಥೈರಾಯ್ಡ್ ಒಂದು ರೀತಿಯ ಅಂತಃಸ್ರಾವಕ ಗ್ರಂಥಿಯಾಗಿದ್ದು, ಇದು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶ ಮತ್ತು ಗ್ರಂಥಿಯು ಅದರ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಥೈರಾಯ್ಡ್ ಹಾರ್ಮೋನುಗಳನ್ನು ಅವಲಂಬಿಸಿರುತ್ತದೆ. ದೇಹವು ಕ್ಯಾಲೊರಿ ಬರ್ನ್ ಮಾಡಲು ಇದು ಸಹಾಯ ಮಾಡುತ್ತೆ. ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿಶೇಷವಾಗಿ ಮಹಿಳೆಯರು ಹೈಪೋ- ಮತ್ತು ಹೈಪರ್-ಥೈರಾಯ್ಡಿಸಂನೊಂದಿಗೆ ಹೋರಾಡುತ್ತಾರೆ.
ಥೈರಾಯ್ಡ್ ನಲ್ಲಿ ಎರಡು ವಿಧಗಳಿವೆ:
ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡ್ ಎಂಬ ಎರಡು ವಿಧಗಳಾಗಿವೆ. ಇಂದಿನ ಬದಲಾಗುತ್ತಿರುವ ಲೈಫ್ ಸ್ಟೈಲ್ ಮತ್ತು ಆಹಾರ ಪದ್ಧತಿಯಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇಂದು ನಾವು ಹೈಪೋ-ಥೈರಾಯ್ಡಿಸಮ್ ಬಗ್ಗೆ ಹೇಳುತ್ತಿದ್ದೇವೆ. ಹೈಪೋ-ಥೈರಾಯ್ಡಿಸಮ್ ಎಂಬುದು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ತಯಾರಿಸದ ಸ್ಥಿತಿಯಾಗಿದೆ.
ಈ ಸಮಸ್ಯೆಯನ್ನು ಹೊಂದಿರುವ ಜನರು ಆಗಾಗ್ಗೆ ಶೀತ ಸಮಸ್ಯೆ ಅನುಭವಿಸುತ್ತಾರೆ ಮತ್ತು ಅಲ್ಲದೇ ತುಂಬಾ ದಣಿದಿರುತ್ತಾರೆ. ಜೊತೆಗೆ ಈ ಸಮಸ್ಯೆ ಇರೋರ ತೂಕವೂ ಹೆಚ್ಚಾಗುತ್ತೆ. ಸರಿಯಾದ ಚಿಕಿತ್ಸೆ, ದೈಹಿಕ ಚಟುವಟಿಕೆ ಮತ್ತು ಉತ್ತಮ ಆಹಾರದ ಸಹಾಯದಿಂದ ಹೈಪೋ-ಥೈರಾಯ್ಡಿಸಮ್ ಅನ್ನು ನಿಯಂತ್ರಣದಲ್ಲಿಡಬಹುದು. ನೀವು ಸಹ ಹೈಪೋ-ಥೈರಾಯ್ಡಿಸಂನೊಂದಿಗೆ ಹೋರಾಡುತ್ತಿದ್ದರೆ, ಈ 6 ಆಹಾರಗಳನ್ನು ಎಂದಿಗೂ ತಿನ್ನಬೇಡಿ.
ಸಕ್ಕರೆಯುಕ್ತ ಆಹಾರಗಳು:
ಸಕ್ಕರೆಯಲ್ಲಿ ಕ್ಯಾಲೋರಿಗಳು ತುಂಬಾ ಹೆಚ್ಚಿರುತ್ತವೆ, ಆದರೆ ಪೋಷಕಾಂಶಗಳು ಇರೋದಿಲ್ಲ. ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರೆ, ಚಾಕೊಲೇಟ್, ಚೀಸ್ ಕೇಕ್ ಅಥವಾ ಹೆಚ್ಚು ಸಕ್ಕರೆಯನ್ನು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಹೈಪೋ-ಥೈರಾಯ್ಡಿಸಮ್ನಿಂದಾಗಿ, ದೇಹದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಸಿಹಿ ತಿನ್ನೋದ್ರಿಂದ ತೂಕ ಹೆಚ್ಚಾಗುತ್ತೆ.
ಸಂಸ್ಕರಿಸಿದ ಆಹಾರಗಳು:
ನೀವು ಹೈಪೋ-ಥೈರಾಯ್ಡಿಸಮ್ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಸಂಸ್ಕರಿಸಿದ ಆಹಾರವನ್ನು ನಿಮ್ಮ ಆಹಾರದ ಲಿಸ್ಟ್ ನಿಂದ ಸಂಪೂರ್ಣವಾಗಿ ತೆಗೆದುಹಾಕಿ. ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಅಧಿಕವಾಗಿರುತ್ತದೆ, ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
ಕೊಬ್ಬಿನ ಆಹಾರಗಳು:
ಹೈಪೋ-ಥೈರಾಯ್ಡಿಸಮ್ ಸಮಸ್ಯೆ ಇದ್ದಲ್ಲಿ, ಮಾಂಸ, ಬೆಣ್ಣೆ, ಮಯೋನೈಸ್ ಮುಂತಾದ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಡಿ ಅಥವಾ ಸಾಧ್ಯವಾದಷ್ಟು ಕಡಿಮೆ ಸೇವಿಸಿ. ಇದಲ್ಲದೆ, ಕರಿದ ಆಹಾರವನ್ನು ಸೇವಿಸಬಾರದು.
ಗ್ಲುಟೆನ್ ಭರಿತ ಆಹಾರಗಳು:
ಹೈಪೋ-ಥೈರಾಯ್ಡಿಸಮ್ ನಲ್ಲಿ ಗ್ಲುಟೆನ್ ಯುಕ್ತ ಆಹಾರ ಸೇವನೆಯನ್ನು ತಪ್ಪಿಸಬೇಕು. ಗ್ಲುಟೆನ್ ಒಂದು ಪ್ರೋಟೀನ್ ಆಗಿದ್ದು, ಇದು ಗೋಧಿ, ಬಾರ್ಲಿ, ರಾಗಿಯಂತಹ ಧಾನ್ಯಗಳಲ್ಲಿ ಕಂಡುಬರುತ್ತದೆ ಮತ್ತು ಅದರ ಸೇವನೆಯು ಥೈರಾಯ್ಡ್ ಅನ್ನು ಹೆಚ್ಚಿಸುತ್ತದೆ. ಆದುದರಿಂದ ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿದ್ರೆ ಉತ್ತಮ.
ಕೆಫೀನ್:
ಹೆಚ್ಚಿನ ಪ್ರಮಾಣಾದ ಕೆಫೆನ್ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ ಅನ್ನೋದು ನಿಮಗೆ ಗೊತ್ತೇ ಇದೆ. ಅದೇ ರೀತಿ ಕೆಫೀನ್ ಸೇವನೆಯು ಹೈಪೋ-ಥೈರಾಯ್ಡಿಸಮ್ ಸಮಸ್ಯೆಯನ್ನು ಹೆಚ್ಚಿಸಬಹುದು. ಆದ್ದರಿಂದ ಸಾಧ್ಯವಾದಷ್ಟು ಈ ಕೆಫೇನ್ ಅಂಶವಿರುವ ಆಹಾರಗಳಿಂದ ದೂರವಿರಲು ಪ್ರಯತ್ನಿಸಿ.
ಸೋಯಾ ಉತ್ಪನ್ನಗಳು:
ನೀವು ಹೈಪೋ-ಥೈರಾಯ್ಡಿಸಮ್ ಸಮಸ್ಯೆ ಹೊಂದಿದ್ದರೆ, ಸೋಯಾ ಹಾಲು, ಟೋಫು, ಸೋಯಾ ಬೀನ್ಸ್ ನಂತಹ ವಸ್ತುಗಳನ್ನು ತಿನ್ನಬೇಡಿ. ಸೋಯಾವು ಐಸೋಫ್ಲಾವೊನ್ ಎಂಬ ಸಂಯುಕ್ತವನ್ನು ಹೊಂದಿರುತ್ತೆ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ, ಇದು ಹೈಪೋಥೈರಾಯ್ಡ್ ಸಮಸ್ಯೆ ಹೆಚ್ಚಿಸುವ ಸಾಧ್ಯತೆ ಇದೆ.