ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಹೊರಗಡೆಯಿಂದ ಖರೀದಿಸಿದ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಅವರ ಪುಟ್ಟ ಕಣ್ಣುಗಳಿಗೆ ಯಾವುದೇ ರಾಸಾಯನಿಕ ಸೇರಿಸದ ಕಾಡಿಗೆ ಬಳಸಬೇಕು. ಅವರಿಗೆ ಮನೆಯಲ್ಲಿಯೇ ತಯಾರಿಸಿದ ಕಾಡಿಗೆ ತುಂಬಾನೇ ಸುರಕ್ಷಿತವಾಗಿರುತ್ತದೆ.
ಮನೆಯಲ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಹತ್ತಿ
ಅಜ್ವೈನ್ಸಾ
ಸಿವೆಯೆಣ್ಣೆ
ತುಪ್ಪ
ಕಾಡಿಗೆ ಮಾಡುವುದು ಹೇಗೆ?
. ಕಾಡಿಗೆ ಮಾಡುವ ಮೊದಲು ಹಣತೆಗೆ ಹತ್ತಿಯನ್ನು ಹಾಕಿ, ನಂತರ ತುಪ್ಪ ಸುರಿಯಿರಿ.
. ಆ ಹಣತೆ ನಾಲ್ಕು ಭಾಗದಲ್ಲಿ ಎತ್ತರದ ನಾಲ್ಕು ಲೋಟ ಇಟ್ಟು ಅದರ ಮೇಲೆ ತಟ್ಟೆಯನ್ನು ಮಗುಚಿ ಹಾಕಬೇಕು. ದೀಪ ಬಟ್ಟಲು ಮುಟ್ಟಬಾರದು, ಆದ್ದರಿಂದ ಬಟ್ಟಲು ಸ್ವಲ್ಪ ಮೇಲಿಡಿ. ಹಾಗಂತ ನೀವು ದೂರನೂ ಇಡಬಾರದು.
. ನೀವು ಎಣ್ಣೆ ಹಾಕುತ್ತಾ 30 ನಿಮಿಷ ದೀಪ ಉರಿಸಿ, ಹೆಚ್ಚು ಕಾಡಿಗೆ ಬೇಕೆಂದರೆ ಹೆಚ್ಚು ಹೊತ್ತು ಉರಿಸಬೇಕು.
. ನಂತರ ದೀಪವನ್ನು ಆರಿಸಿ ಅಥವಾ ಆರುವವರೆಗೆ ಕಾದು ನಂತರ ಪ್ಲೇಟ್ ಅನ್ನು ಮಗುಚಿ ಇಡಿ. ಬಿಸಿ ಇರುವಾಗ ಮುಟ್ಟಬೇಡಿ.
. ನಂತರ ಪ್ಲೇಟ್ನಲ್ಲಿದ್ದ ಮಸಿಯನ್ನು ಚಮಚದ ಸಹಾಯದಿಂದ ತೆಗೆಯಿರಿ. ಅದನ್ನು ಡಬ್ಬದಲ್ಲಿ ಹಾಕಿ 1 ಚಮಚ ಸಾಸಿವೆಯೆಣ್ಣೆ ಹಾಕಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ಕಾಜಲ್ ರೆಡಿ.
. ನೀವು ಸಾಸಿವೆಯೆಣ್ಣೆ ಬದಲಿಗೆ ಕೊಬ್ಬರಿಯೆಣ್ಣೆ, ಹರಳೆಣ್ಣೆ ಕೂಡ ಹಾಕಬಹುದು.
. ಈ ಕಾಡಿಗೆ ಬಳಸಿದರೆ ಹರಡುವೂದೂ ಇಲ್ಲ.
ಕಾಡಿಗೆ ಈ ರೀತಿ ಕೂಡ ತಯಾರಿಸಿಬಹುದು:
ದೀಪಕ್ಕೆ ಹತ್ತಿಯ ಬತ್ತಿ ಹಾಕಿ, ನಂತರ ಹರಳೆಣ್ನೆ ಹಾಕಿ, ದೀಪವನ್ನು ಹೊತ್ತಿಸಿ, ಇದರ ಶಾಖದಲ್ಲಿ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಂಪೂರ್ಣವಾಗಿ ಸುಡಬೇಕು. ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ನಂತರ ಅದನ್ನು ನುಣ್ಣಗೆ ಪುಡಿ ಮಾಡಿ ಆ ಪುಡಿಯನ್ನು ಡಬ್ಬದಲ್ಲಿ ತುಂಬಿ, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.
ಕಾಡಿಗೆ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು?
. ಹರಳೆಣ್ಣೆ ಕಣ್ಣಿಗೆ ತುಂಬಾ ತಂಪಾಗಿರುವುದರಿಂದ ಇದನ್ನು ಬಳಸಿದರೆ ಉಪಯುಕ್ತವಾಗಿರುತ್ತದೆ.
. ಕಾಡಿಗೆಯನ್ನು ಬಳಸುವುದರಿಂದ ಕಣ್ಣಿಗೆ ಒಳ್ಳೆಯ ನಿದ್ದೆ ಬರುತ್ತದೆ.
. ಹರಳೆಣ್ಣೆ, ತುಪ್ಪ ಬಳಸುವುದರಿಂದ ಕಣ್ಣು ಉರಿಯುವುದಿಲ್ಲ.
. ಬಾದಾಮಿ ಪೌಷ್ಠಿಕಾಂಶದಿಂದ ಕೂಡಿದ್ದು ಇದರ ಬಳಕೆ ಕಣ್ಣಿಗೆ ಉತ್ತಮ.
ಕಾಡಿಗೆ ಬಳಸುವುದಾದರೆ ಮೇಕಪ್ ಟಿಪ್ಸ್:
. ಕಾಡಿಗೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
. ಕಾಡಿಗೆಯನ್ನು ಬಳಸಿದ ತಕ್ಷಣ ಕಣ್ಣುಗಳನ್ನು ಕೈಯಿಂದ ಉಜ್ಜಬಾರದು. ಇದರಿಂದ ಮೇಕಪ್ ಹಾಳಾಗುತ್ತದೆ.
. ಮುಖದ ಮೇಕಪ್ ಎಲ್ಲಾ ಮುಗಿದ ನಂತರ ಕಾಡಿಗೆ ಬಳಸುವುದು ಉತ್ತಮ.
. ಕನ್ನಡ ಹಾಕುವುದಾದರೆ ತೆಳುವಾಗಿ ಕಾಡಿಗೆ ಹಚ್ಚಿಕೊಳ್ಳಬಾರದು.
. ಕಾಡಿಗೆಯನ್ನು ಕೈಯಿಂದ ಹಚ್ಚುವಾಗ, ಕೈಯನ್ನು ಶುದ್ದವಾಗಿಟ್ಟುಕೊಳ್ಳಬೇಕು.
ಈ ರೀತಿ ಕಾಡಿಗೆಯನ್ನು ಯಾವುದೇ ಭಯವಿಲ್ಲದೆ ಕಣ್ಣಿಗೆ ಹಾಕಬಹುದು, ಮಕ್ಕಳಿಗೆ ಇದು ತುಂಬಾನೇ ಸುರಕ್ಷಿತ, ಅಲ್ಲದೆ ಇದನ್ನು ಮಾಡುವುದೇನೂ ದೊಡ್ಡ ಶ್ರಮವಲ್ಲ, ಆದ್ದರಿಂದ ಈ ಕಾಡಿಗೆ ಟ್ರೈ ಮಾಡಿ ನೋಡಬಹುದು.