ಗರ್ಭಾವಸ್ಥೆಯಲ್ಲಿ ಆತಂಕ ಹೆಚ್ಚಾಗೋದಕ್ಕೆ ಕಾರಣಗಳೇನು?
* ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದು
* ದೈಹಿಕ ನೋವುಗಳು
* ನಿದ್ರಾಚಕ್ರ ಬದಲಾಗೋದು * ಆಹಾರ ಪದ್ಧತಿ ಬದಲಾಗುವುದು
* ಕಿರಿಕಿರಿ ಉಂಟಾಗುವುದು
* ಗಮನ ಕೇಂದ್ರೀಕರಿಸೋದಕ್ಕೆ ಕಷ್ಟವಾಗುತ್ತದೆ
* ಇನ್ನಿಲ್ಲದಂತೆ ಕಾಡುವ ಆಲೋಚನೆಗಳು
ಗರ್ಭಾವಸ್ಥೆಯಲ್ಲಿ ಉಂಟಾಗುವ ಆತಂಕದಿಂದ ಹೊರಬರೋದು ಹೇಗೆ?
1. ಧ್ಯಾನವನ್ನು ಅಭ್ಯಾಸ ಮಾಡಿ:
ಗರ್ಭಾವಸ್ಥೆಯ ಸಮಯದಲ್ಲಿ ನಮ್ಮ ತಲೆಯಲ್ಲಿ ಇಲ್ಲದ ಆಲೋಚನೆಗಳು ಓಡಾಡೋದಕ್ಕೆ ಶುರುವಾಗುತ್ತದೆ. ಅದ್ರಲ್ಲೂ ಗರ್ಭಿಣಿಯರ ಮನಸ್ಥಿತಿಯು ಅಷ್ಟು ಚೆನ್ನಾಗಿ ಇರೋದಿಲ್ಲ. ಮಗುವಿನ ಬಗ್ಗೆಯೇ ಹೆಚ್ಚಾಗಿ ಅವರ ಮನಸ್ಸು ಚಿಂತಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸು ಶಾಂತವಾಗಿರೋದು ತುಂಬಾನೇ ಮುಖ್ಯವಾಗುತ್ತದೆ.
ಹೀಗಾಗಿ ಧ್ಯಾನ ಮಾಡೋದು ತುಂಬಾನೇ ಮುಖ್ಯ. ಇದ್ರಿಂದ ನಿಮ್ಮ ಆತಂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಇದ್ರಿಂದ ನಿಮ್ಮ ಒತ್ತಡದ ಹಾರ್ಮೋನುಗಳು ಶಾಂತವಾಗೋದಕ್ಕೆ ಸಹಕಾರಿಯಾಗುತ್ತದೆ. ಹೀಗಾಗಿ ಗರ್ಭಿಣಿಯರು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳ ಜೊತೆಗೆ ಧ್ಯಾನ ಮಾಡಿದ
2. ನಿಯಮಿತವಾಗಿ ವ್ಯಾಯಾಮ ಮಾಡಿ:
ವ್ಯಾಯಾಮ ಮಾಡೋದು ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದು ಆತಂಕವನ್ನು ಆದಷ್ಟು ಕಡಿಮೆ ಮಾಡೋದಕ್ಕೆ ಸಹಕಾರಿಯಾಗಿದೆ. ಹಾಗಂತ ದೇಹಕ್ಕೆ ಹಾನಿಯಾಗುವಂತಹ ವ್ಯಾಯಾಮಗಳನ್ನು ಮಾಡಬಾರದು. ಗರ್ಭಾವಸ್ಥೆಯಲ್ಲಿ ಇರುವವರು ನಡೆದಾಟ, ಈಜು ಮತ್ತು ಯೋಗ ಇತ್ಯಾದಿಗಳನ್ನು ಅಭ್ಯಾಸ ಮಾಡಬಹುದು.
3. ನಿಮ್ಮ ಆಪ್ತರೊಂದಿಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳಿ:
ಗರ್ಭಾವಸ್ಥೆಯಲ್ಲಿ ಆತಂಕಗಳಾಗೋದು ಸಹಜ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಆಪ್ತರ ಜೊತೆಗೆ ನಿಮ್ಮ ನೋವುಗಳ ಬಗ್ಗೆ ಹಂಚಿಕೊಳ್ಳಬಹುದು. ಮುಖ್ಯವಾಗಿ ನಿಮ್ಮ ಪತಿ, ತಾಯಿ ಅಥವಾ ಸ್ನೇಹಿತರು ಹೀಗೆ ಯಾರು ನಿಮಗೆ ಹೆಚ್ಚು ಆಪ್ತರಾಗಿ ಇರುತ್ತಾರೆಯೋ ಅವರೊಂದಿಗೆ ನಿಮ್ಮ ನೋವುಗಳನ್ನು ಹಂಚಿಕೊಳ್ಳಬಹುದು.
ನೋವನ್ನು ಹಂಚಿಕೊಳ್ಳೋದ್ರಿಂದ ನಮ್ಮ ಮನಸ್ಸು ಹಗುರವಾಗುತ್ತದೆ. ನಾವು ದುಃಖವನ್ನು ಹೊರಹಾಕೋದಕ್ಕೆ ಸಾಧ್ಯವಾಗುತ್ತದೆ. ನಮ್ಮ ಆಪ್ತರು ನಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುವ ಸಾಧ್ಯತೆಯಿದೆ.
4. ಸ್ವ-ಆರೈಕೆ ಮತ್ತು ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ!
ಗರ್ಭಾವಸ್ಥೆಯ ಸಂದರ್ಭದಲ್ಲಿ ಆತಂಕ ದೂರವಾಗಬೇಕಂದ್ರೆ ಸ್ವ ಆರೈಕೆಯಲ್ಲಿ ತೊಡಗಿಕೊಳ್ಳುವುದು ತುಂಬಾನೇ ಮುಖ್ಯ. ಈ ಸಮಯದಲ್ಲಿ ಬೇರೆ ಚಟುವಟಿಕೆಗಳನ್ನು ಮಾಡುತ್ತಾ ನಿಮ್ಮನ್ನು ನೀವು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಸಣ್ಣ-ಪುಟ್ಟ ವ್ಯಾಯಾಮ ಮಾಡಿ, ಕೂದಲು ಹಾಗೂ ಚರ್ಮದ ಆರೈಕೆಯನ್ನು ಮಾಡಿ.
ಜೊತೆಗೆ ಪುಸ್ತಕ ಓದುವುದು, ನಿಮ್ಮ ಇತರ ಹವ್ಯಾಸಗಳನ್ನು ಎಂಜಾಯ್ ಮಾಡಿ. ಪೌರಾಣಿಕ ಕಥೆಗಳನ್ನು ಕೇಳಿ, ಲೈಟ್ ಮ್ಯೂಸಿಕ್ ಕೇಳುವುದು ಕೂಡ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
5. ತಜ್ಞರ ಸಲಹೆಯನ್ನು ಪಡೆಯಿರಿ:
ಕೆಲವೊಂದು ಸಲ ನಾವು ಯಾರೊಂದಿಗೂ ಸಮಸ್ಯೆಗಳನ್ನು ಹೇಳೋದಿಕ್ಕೆ ಆಗದ ಹಂತಕ್ಕೆ ತಲುಪುತ್ತೇವೆ. ಬೇರೆಯವರು ಏನಂದುಕೊಳ್ಳುತ್ತಾರೆ ಎನ್ನುವ ಭಯ ನಮ್ಮಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ತಜ್ಞರ ಸಲಹೆ ಪಡೆದುಕೊಳ್ಳುವುದು ತುಂಬಾನೇ ಮುಖ್ಯ. ಯಾಕಂದ್ರೆ ಅವರ ಬಳಿ ಯಾವುದೇ ಮುಚ್ಚು ಮರೆಯಿಲ್ಲದೇ ನಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಹಾಗೂ ಅವರಿಂದ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು.