ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ

ಪ್ರೀತಿಯಲ್ಲಿ ಬೀಳುವವರೆಗೆ, ಮದುವೆಯಾಗುವರೆಗೆ ಮಾತ್ರ ನಮ್ಮ ಹುಟ್ಟುಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುವುದು. ನಂತರ ನಾವು ನಮ್ಮ ಹುಟ್ಟು ಹಬ್ಬಕ್ಕಿಂತ ಅವರ ಹುಟ್ಟುಹಬ್ಬವನ್ನು ತುಂಬಾನೇ ಅದ್ದೂರಿಯಾಗಿ ಆಚರಿಸುತ್ತೇವೆ.

ಸಂಗಾತಿಯ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಪ್ಲ್ಯಾನ್ ಮಾಡುತ್ತೇವೆ. ಡೆಕೋರೇಷನ್ನಿಂದ ಹಿಡಿದು, ಕೇಕ್ ಯಾವುದಿರಬೇಕು, ಯಾವ ಡಿಸೈನ್ನಲ್ಲಿರಬೇಕು ಎಂದೆಲ್ಲಾ ಪ್ಲ್ಯಾನ್ ಮಾಡುತ್ತೇವೆ. ಅದರ ಜೊತೆಗೆ ಸ್ಪೆಷಲ್ ಗ್ರೀಟಿಂಗ್ಸ್ ಕೂಡ ಇದ್ದರೆ ಸೂಪರ್ ಅಲ್ವಾ? ಅದು ಯಾವುದು ಅಂತ ಓದಿ..

1. ಹ್ಯಾಪಿ ಹ್ಯಾಪಿ ಹ್ಯಾಪಿ.ನನಗೆಲ್ಲಾ ಆದ ನನ್ನ ಸಂಗಾತಿಯ ಹ್ಯಾಪಿ ಬರ್ತ್ಡೇ.... ಸದಾ ಹೀಗೆ ಖುಷಿ ಖುಷಿಯಾಗಿರು.

2. ಹ್ಯಾಪಿ ಬರ್ತ್ಡೇ ಬೇಬಿ.ದೇವರು ಎಲ್ಲಾ ಖುಷಿ, ಸಂಪತ್ತು ನಿನಗೆ ನೀಡಲಿ... ನೂರು ವರ್ಷ ಸುಖವಾಗಿ ಬಾಳಿ.

3, ನೀನು ನನಗೆಷ್ಟು ಮುಖ್ಯ ಎಂದು ನಾನು ಆಗಾಗ ಹೇಳಲ್ಲ, ಆದರೆ ನನ್ನ ಕಣ್ಣುಗಳ ನೋಡಿದರೆ ನಿನಗೆ ತಿಳಿಯುತ್ತೆ, ನಿನ್ನಂಥ ಸಂಗಾತಿಯನ್ನು ಕೊಟ್ಟ ದೇವರಿಗೆ ಕೃತಜ್ಞತೆಗಳು ಜನ್ಮದಿನದ ಶುಭಾಶಯಗಳು ಮೈ ಲವ್.

4. ಈ ಪ್ರಪಂಚದಲ್ಲಿ ನನಗೆ ಎಲ್ಲರಿಗಿಂತ ಮುಖ್ಯವಾದ ವ್ಯಕ್ತಿ ನೀನು. ನಿನ್ನ ಬಾಳು ಸದಾ ಖುಷಿಯಾಗಿರಲಿ, ಸದಾ ನಿನ್ನ ಜೊತೆಯಿರಲು ಬಯಸುವ ನಿನ್ನವಳು.

5. ನಿನ್ನ ನನಗೆ ಕೊಟ್ಟ ಆ ದೇವರಿಗೆ ಕೃತಜ್ಞತೆಗಳು, ನನ್ನ ಉಸಿರುವವರೆಗೆ ನನ್ನ ಜೊತೆಯಿರುವ ನಿನ್ನ ಜನ್ಮ ದಿನ ನನಗೆ ಹರ್ಷ ದಿನ.

6. ಪ್ರೀತಿಯ ಅರ್ಥ ತಿಳಿಸಿದ, ಬದುಕಿನಲ್ಲಿ ಜೊತೆಯಾದ, ನೋವಿನಲ್ಲಿ ಕಣ್ಣೊರಿಸುವ, ಸೋಲಿನಲ್ಲಿ ನನ್ನ ಮೇಲತ್ತಲು ಹೆಗಲು ಕೊಡುವ ನನ್ನ ಸರ್ವಸ್ವವಾಗಿರುವ ನಿನಗೆ ಜನ್ಮ ದಿನದ ಶುಭಾಶಯಗಳು.

7. ನಿಮ್ಮ ನಗು ನೋಡಿದರೆ ಸಾಕು ಎಲ್ಲಾ ಟೆನ್ಷನ್ ಮರೆತು ಹೋಗುತ್ತೆ, ಸದಾ ನಗು ನಗುತ್ತಲೇಇರ ಲಿ ಹುಟ್ಟು ಹಬ್ಬದ ಶುಭಾಶಗಳು ನಿಮಗೆ.

8. ಪತಿಯಾಗಿ, ತಂದೆಯಾಗಿ ನೀವೊಬ್ಬರು ಅದ್ಭುತ ವ್ಯಕ್ತಿ ನಿಮಗೆ ಜನ್ಮ ದಿನದ ಶುಭಾಶಯಗಳು.

9. ಈ ಮನೆ ಇಷ್ಟು ಚೆನ್ನಾಗಿದೆ ಎಂದರೆ ಅದಕ್ಕೆ ಕಾರಣ ನೀನು, ನನ್ನ ಬದುಕಿನ ಮಹಾಲಕ್ಷ್ಮಿಗೆ ಹುಟ್ಟು ಹಬ್ಬದ ಶುಭಾಶಯಗಳು.

10. ಎಂದೆಂದಿಗೂ ನನ್ನವನಾಗಿರುವ ನನ್ನ ಪ್ರೀತಿಗೆ ಹುಟ್ಟು ಹಬ್ಬದ ಶುಭಾಶಯಗಳು

ಗಿಫ್ಟ್ಸ್, ಗ್ರೀಟಿಂಗ್ಸ್ ಸಂಬಂಧದಲ್ಲಿ ತುಂಬಾ ಮುಖ್ಯ ನಮಗೆ ಇಷ್ಟವಾದವರಿಗೆನಾವು ಆಗಾಗ ಈ ರೀತಿ ವಿಶೇಷ ಸಾಲುಗಳನ್ನು ಬರಿಯಬೇಕು, ಈ ರೀತಿಯ ವಿಶೇಷ ಸಂದರ್ಭಗಳಲ್ಲಿ ಸ್ಪೆಷಲ್ ಗಿಫ್ಟ್ಸ್ ನೀಡಬೇಕು, ಇದು ನಿಮ್ಮಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. 

ಎಲ್ಲಾ ಸಂದರ್ಭದಲ್ಲಿ ನಾವು ಅವರ ಬಗ್ಗೆ ಹೊಗಳುವುದಿಲ್ಲ, ಹೆಚ್ಚೆಂದರೆ ಐ ಲವ್ ಯೂ ಎಂದು ಹೇಳುತ್ತೇವೆ, ಆದರೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇಂಥ ವಿಶೇಷ ಸಂದರ್ಭಗಳಲ್ಲಿಯೇ ನಾವು ಜಸ್ಟ್ ವಿಶ್ ಮಾಡುವ ಬದಲಿಗೆ ಈ ರೀತಿ ಶುಭಾಶಯ ಕೋರಿದರೆ ತುಂಬಾನೇ ವಿಶೇಷವಾಗಿರುತ್ತದೆ. ಅಲ್ಲದೆ ನಿಮ್ಮಿಬ್ಬರ ಪ್ರೇಮ ಬಂಧ ಮತ್ತಷ್ಟು ಗಟ್ಟಿಯಾಗುವುದು. 

ನೀವು ಕೊಡುವ ಗಿಫ್ಟ್ಸ್ಗಿಂತ ಇಂಥ ಸಂದೇಶಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ, ಆದ್ದರಿಂದ ನಿಮ್ಮ ಪ್ರೇಮಿಗೆ ಈ ಗ್ರೀಟಿಂಗ್ಸ್ ಕಳುಹಿಸಿ ಶುಭ ಕೋರಿ.....