ಗರ್ಭಸಂಸ್ಕಾರ:
ಗರ್ಭಸಂಸ್ಕಾರದಲ್ಲಿ ಯೋಗ್ಯ ಗುಣದ ಮಕ್ಕಳನ್ನು ಪಡೆಯುವುದು ಹೇಗೆ ಎಂದು ಹೇಳಲಾಗಿದೆ. ಜೀವನ ಆತ್ಮ ಗರ್ಭದಳಗಿನ ಆತ್ಮಕ್ಕೆ ಹೊಕ್ಕಾಗಿನಿಂದ ಪ್ರಾರಂಭವಾಗುವುದು. ಮಕ್ಕಳ ಗುಣ, ಆಸೆ, ನಡತೆ ಇತರ ಗುಣಗಳು ಅವರು ಗರ್ಭದಲ್ಲಿರುವಾಗಲೇ ಬೆಳೆಯುತ್ತದೆಯಂತೆ. ಆದ್ದರಿಂದ ಗರ್ಭಿಣಿ ಮಹಿಳೆ ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕೆಂದು ಹೇಳುವುದು.
ಹಿಂದೂ ಧರ್ಮದಲ್ಲಿ ಸೃಷ್ಟಿಯ ಪರಿಕಲ್ಪನೆ:
ಹಿಂದೂ ಶಾಸ್ತ್ರದ ಪ್ರಕಾರ ದಂಪತಿ ಒಂದು ಜೀವವನ್ನು ಸೃಷ್ಟಿಸುವ ಮುನ್ನ ತಾವು ಎಂಥ ಮಗುವಿಗೆ ಜನ್ಮ ನೀಡುವುದು ಒಳ್ಳೆಯದು ಎಂದು ಹೇಳಲಾಗಿದೆ. ಒಂದು ಮಗುವಿಗೆ ಜನ್ಮ ನೀಡುವ ಮೊದಲೇ, ತಮ್ಮ ಮಗುವಿನಲ್ಲಿ ಸನ್ನಡತೆಯ ಬಗ್ಗೆ ಯೋಚಿಸಬೇಕು. ಒಳ್ಳೆಯ ಗುಣದ, ಸನ್ನಡತೆ ಮಕ್ಕಳು ಜನಿಸಬೇಕೆಂದರೆ ಕೆಲವೊಂದು ದಿನಗಳಲ್ಲಿ ದಂಪತಿ ಒಂದಾಗಬಾರದು ಎಂದು ಹೇಳಲಾಗುವುದು.
ಶುಭ ಘಳಿಗೆಯಲ್ಲಿ ಮಗು ರೂಪತಾಳಬೇಕು:
ನಾವೆಲ್ಲಾ ಮಗು ಜನಿಸುವಾಗ ಮಗು ಶುಭ ಘಳಿಗೆಯಲ್ಲಿ ಜನಿಸಬೇಕು, ಅದರ ನಕ್ಷತ್ರ ಚೆನ್ನಾಗಿರಬೇಕು ಎಂದೆಲ್ಲಾ ಬಯಸುತ್ತೇವೆ, ಆದರೆ ನಿಮಗೆ ಗೊತ್ತೇ? ಹಿಂದೂ ಧರ್ಮದಲ್ಲಿ ಗರ್ಭಧಾರಣೆಯೂ ಶುಭ ಘಳಿಗೆಯಲ್ಲಿ ಆಗಬೇಕೆಂದು ಹೇಳಲಾಗುವುದು. ಆದ್ದರಿಂದ ಸಂತಾನೋತ್ಪತ್ತಿಗಾಗಿ ಗಂಡ-ಹೆಂಡತಿ ಒಂದಾಗುವಾಗ ಒಳ್ಳೆಯ ದಿನಗಳಲ್ಲಿ ಒಂದಾಗಬೇಕು.
ಮಗುವಿನ ಭವಿಷ್ಯಕ್ಕೆ ಒಳ್ಳೆಯದು:
ಶುಭ ಘಳಿಗೆಯಲ್ಲಿ ಮಗು ರೂಪುಗೊಂಡರೆ ಆ ಮಗು ಜನಿಸಿದರೆ ಒಳ್ಳೆಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲ ಆ ಮಗುವಿನ ಭವಿಷ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುವುದು.
ಅಶುಭ ಸಮಯದಲ್ಲಿ ಗರ್ಭಧಾರಣೆ ಗರ್ಭ ಸಂಸ್ಕಾರ ಪ್ರಕಾರ ಅಶುಭ ಸಮಯದಲ್ಲಿ ಗರ್ಭಧಾರಣೆಯಾದರೆ ಆ ಮಕ್ಕಳ ಗುಣ-ನಡತೆ ಚೆನ್ನಾಗಿರುವುದಿಲ್ಲ, ಅಂಥ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುವುದು.
ಈ ದಿನಗಳಲ್ಲಿ ಗರ್ಭಧರಿಸುವುದು ಒಳ್ಳೆಯದಲ್ಲ
ಮಂಗಳವಾರ:
ಗರ್ಭ ಸಂಸ್ಕಾರ ಪ್ರಕಾರ ಮಂಗಳವಾರ ದಂಪತಿ ಒಂದಾಗಬಾರದು, ಏಕೆಂದರೆ ಮಂಗಳವಾರ ಗರ್ಭಧಾರಣೆಗೆ ಶುಭ ದಿನವಲ್ಲ, ಏಕೆಂದರೆ ಮಂಗಳವಾರ ಮಂಗಳ ಗ್ರಹದ ಪ್ರಭಾವವಿರುತ್ತದೆ. ಈ ಸಮಯದಲ್ಲಿ ಗರ್ಭಧಾರಣೆಯಾದರೆ ಆ ಮಗುವಿನಲ್ಲಿ ಕ್ರೂರ ಗುಣವಿರುತ್ತದೆ ಎಂದು ಹೇಳಲಾಗುವುದು. ಚಿಕ್ಕ ಸಾಧನೆಗೂ ತುಂಬಾ ಕಷ್ಟಪಡಬೇಕಾಗುವುದು ಎಂದು ಹೇಳಲಾಗುವುದು.
ಶನಿವಾರ:
ಶನಿವಾರ ಗರ್ಭಧಾರಣೆಗೆ ಸೂಕ್ತವಲ್ಲ ಎಂದು ಹೇಳಲಾಗುವುದು, ಏಕೆಂದರೆ ಈ ದಿನ ಶನಿಗ್ರಹದ ಪ್ರಭಾವವಿರುತ್ತದೆ, ಇದರಿಂದ ಮಗು ತುಂಬಾ ದೈಹಿಕ ತೊಂದರೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅನುಭವಿಸುವುದು ಎಂದು ಹೇಳಲಾಗುವುದು.
ಭಾನುವಾರ:
ಗರ್ಭಧಾರಣೆಗೆ ಭಾನುವಾರ ಗಂಡ-ಹೆಂಡತಿ ಒಂದಾಗಬಾರದು ಎಂದು ಹೇಳಲಾಗುವುದು. ಈ ದಿನ ಸೂರ್ಯದೇವನ ಪೂಜೆಗಷ್ಟೇ ಮೀಸಲು ಎಂದು ಹೇಳಲಾಗುವುದು. ಈ ದಿನವನ್ನು ಸೂರ್ಯದೇವನ ಆರಾಧನೆಯಲ್ಲಿ ಕಳೆಯಬೇಕು. ಈ ದಿನ ಗರ್ಭದಾರಣೆಯಾದರೆ ಮಗುವಿನಲ್ಲಿ ತುಂಬಾ ಕೋಪ, ಉರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಅಲ್ಲದೆ ಆತ್ಮವಿಶ್ವಾಸದ ಕೊರತೆ ಇರುವುದು ಎಂದು
ಗರ್ಭಧಾರಣೆಗೆ ಯಾವ ದಿನ ಶುಭ:
ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಗರ್ಭಧಾರಣೆ ತುಂಬಾನೇ ಶುಭ ದಿನ ಎಂದು ಹೇಳಲಾಗುವುದು. ಇನ್ನು ಗ್ರಹಣ, ಅಮವಾಸ್ಯೆ ಈ ದಿನಗಳಲ್ಲಿ ಕೂಡ ಮಗುವಿಗಾಗಿ ಪ್ರಯತ್ನಿಸಬಾರದು ಎಂದು ಹೇಳಲಾಗುವುದು.
ಗರ್ಭ ಸಂಸ್ಕಾರದಲ್ಲಿ ಗಂಡ ಹೆಂಡತಿ ಒಂದಾಗುವುದರ ಬಗ್ಗೆ ಈ ರೀತಿ ಹೇಳಲಾಗಿದೆ:
* ಗಂಡ -ಹೆಂಡತಿ ಪರಸ್ಪರ ಒಪ್ಪಿಗೆ ಹಾಗೂ ಪ್ರೀತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು.
* ಮುಟ್ಟು, ಗರ್ಭಾವಸ್ಥೆ, ಕಾಯಿಲೆ ಇರುವಾಗ ಹಾಗೂ ತುಂಬಾ ಆಹಾರ ಸೇವಿಸಿದ ಮೇಲೆ ಒಂದಾಗಬಾರದು.
* ಊಟ ಮಾಡಿದ ಎರಡು ಗಂಟೆಯ ಮೂಲಕ ಲೈಂಗಿ ಕ್ರಿಯೆಯಲ್ಲಿ ತೊಡಗಬಹುದು.