ಆದರೆ ದೇಹಕ್ಕೆ ಯಾವ ಪ್ರಮಾಣದಲ್ಲಿ ಯಾವ ಆಹಾರ ಬೇಕು ಎನ್ನುವುದರ ಅನುಸಾರ ನಾವು ತಿನ್ನಬೇಕು. ಇಲ್ಲದಿದ್ದರೆ ಅದರಿಂದ ಆರೋಗ್ಯದ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಲ್ಲಂಗಡಿ ಹಣ್ಣಿನ ವಿಚಾರದಲ್ಲಿ ಕೂಡ ಇದೇ ಆಗುತ್ತದೆ. ಹೆಚ್ಚಾಗಿ ಕಲ್ಲಂಗಡಿ ಹಣ್ಣು ತಿನ್ನಲು ಹೋದರೆ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
. ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣತೆ ಸಮಸ್ಯೆಯ ಜೊತೆಗೆ ಲೂಸ್ ಮೋಷನ್ ಕೂಡ ಉಂಟಾಗಬಹುದು. ಏಕೆಂದರೆ ಕಲ್ಲಂಗಡಿ ಹಣ್ಣಿನಲ್ಲಿ ಸಾರ್ಬಿಟಲ್ ಎನ್ನುವ ಸಿಹಿ ಅಂಶವಿದ್ದು, ಇದು ಈ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ.
. ಯಾರು ಹೆಚ್ಚಾಗಿ ಆಲ್ಕೋಹಾಲ್ ಸೇವಿಸುತ್ತಾರೆ ಅವರು ಕಲ್ಲಂಗಡಿ ಹಣ್ಣು ಪದೇ ಪದೇ ತಿನ್ನುವುದರಿಂದ ಈ ರೀತಿ ಆಗುತ್ತದೆ ಎಂದು ಹೇಳುತ್ತಾರೆ.
. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಲೈಕೋಪಿನ್ ಇರುವುದರಿಂದ ಅದು ನಮ್ಮ ಲಿವರ್ ಮೇಲೆ ನಕಾರಾತ್ಮಕ ಪ್ರಭಾವ ಉಂಟು ಮಾಡಿ, ಲಿವರ್ ಉರಿಯುತಕ್ಕೆ ಕಾರಣವಾಗುತ್ತದೆ.
. ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ನೀರು ಸಿಕ್ಕಂತೆ ಆಗುತ್ತದೆ. ಈ ರೀತಿ ಆದರೆ ಅದನ್ನು ಓವರ್ ಹೈಡ್ರೇಷನ್ ಎಂದು ಕರೆಯುತ್ತಾರೆ. ಇದರಿಂದ ನಮ್ಮ ದೇಹದಿಂದ ಹೆಚ್ಚಿನ ಪ್ರಮಾಣದ ಸೋಡಿಯಂ ಪ್ರಮಾಣ ನಷ್ಟವಾಗುವ ಸಾಧ್ಯತೆ ಇರುತ್ತದೆ.
. ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಪೊಟ್ಯಾಶಿಯಂ ಸಿಗುವುದರಿಂದ ಹೃದಯದ ಬಡಿತ ಏರುಪೇರು ಆಗುವುದು ಸಹಜ. ಈ ಸಂದರ್ಭದಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಬರಬಹುದಾದ ಚಾನ್ಸ್ ಜಾಸ್ತಿ ಇರುತ್ತದೆ.