ಆದರೆ ಈ ಫುಡ್ಗಳು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಅದಕ್ಕಾಗಿ ಇದನ್ನು ನಾವು ಮನೆಯಲ್ಲೇ ಮಾಡಬಹುದು. ಪಿಜ್ಹಾವನ್ನು ಮಾಡಲು ಸಿಂಪಲ್ ರೆಸಿಪಿ ಜೊತೆಗೆ ಒಂದಿಷ್ಟು ವಸ್ತು ಇದ್ದರೆ ರುಚಿ ರುಚಿಯಾಗಿ ಮನೆಯಲ್ಲಿ ಮಾಡಬಹುದು.
ಪಿಜ್ಹಾ ಮಾಡಲು ಓವನ್ ಅಗತ್ಯವಿಲ್ಲ. ಹಾಗಾದ್ರೆ ಪಿಜ್ಹಾ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಈ ಪಿಜ್ಹಾ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಿಜ್ಹಾ ಮಾಡಲು ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು - 250 ಗ್ರಾಮ್
ಬೇಕಿಂಗ್ ಪೌಡರ್ - 1 ಚಮಚ
ಬೆಣ್ಣೆ - ಗೋಲಿ ಗಾತ್ರ
ಸಕ್ಕರೆ - 2 ಚಮಚ
ಸೋಡಾ
ಮೊಸರು- ಸ್ವಲ್ಪ
ಕಾಳು ಮೆಣಸಿನ ಪುಡಿ - ಚಿಟಿಕೆಯಷ್ಟು
ಸ್ವೀಟ್ ಕಾರ್ನ್ - 4 ಚಮಚ
ಟೊಮೆಟೊ- ಸ್ವಲ್ಪ
ಕ್ಯಾಪ್ಸಿಕಂ- - ಸ್ವಲ್ಪ
ಈರುಳ್ಳಿ- 1
ಚೀಸ್ ಸಾಸ್
ಉಪ್ಪು
ಎಣ್ಣೆ
ಪಿಜ್ಹಾ ಮಾಡುವುದು ಹೇಗೆ:
ಪಿಜ್ಹಾಗೆ ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಮೊದಲು ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ತೆಗೆದುಕೊಂಡು ಅದಕ್ಕೆ ಬೇಕಿಂಗ್ ಪೌಡರ್ ಹಾಗೂ ಸೋಡಾ, ಸಕ್ಕರೆ,ಬೆಣ್ಣೆ, ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ.
ಜಾಮೂನ್ ಮಾಡಲು ಬೇಕಾಗುವ ಹದದಂತೆ ಹಿಟ್ಟು ಮಾಡಿಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ಅರ್ಧ ಗಂಟೆ ಮುಚ್ಚಿಡಿ. ಈಗ ಒಂದು ಪಾತ್ರೆಗೆ ಈರುಳ್ಳಿ, ಟೊಮೆಟೊ, ಜೋಳ, ಕ್ಯಾಪ್ಸಿಕಂ, ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ, ಇದರಲ್ಲಿ ಜೋಳವನ್ನು ಸ್ವಲ್ಪ ಬೇಯಿಸಿಕೊಂಡಿರಬೇಕು. ಇದು ಮಿಕ್ಸ ಆದ ಬಳಿಕ ಹಿಟ್ಟು ತೆಗೆದುಕೊಳ್ಳಿ. ಮೈದಾ ಹಿಟ್ಟು ತೆಗೆದುಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ರೊಟ್ಟಿಯಂತೆ ದಪ್ಪವಾಗಿ ಲಟ್ಟಿಸಿಕೊಳ್ಳಿ. ಈಗ ಒಲೆ ಮಾಲೆ ಒಂದು ಬಾಣಲೆ ಅಥವಾ ತವಾ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಲಟ್ಟಿಸಿಕೊಂಡ ಹಿಟ್ಟನ್ನು ಅದಕ್ಕೆ ಹಾಕಿಕೊಳ್ಳಿ. 2 ನಿಮಿಷ ಬೇಯಿಸಿಕೊಳ್ಳಿ, ಎರಡೂ ಕಡೆ ಬೇಯಿಸಿಕೊಂಡು ಅದಕ್ಕೆ ಸಾಸ್ ಅನ್ನು ಹಾಕಿ. ಇದಕ್ಕೆ ಟೊಮೆಟೋ ಸಾಸ್ ಸಹ ಬಳಸಬಹುದು.
ಬಳಿಕ ಇದರ ಮೇಲೆ ಚೀಸ್ ಅನ್ನು ಉದ್ದ ಉದ್ದವಾದ ಕಡ್ಡಿಯಂತೆ ಕತ್ತರಿಸಿಕೊಂಡು ಹಾಕಿ. ಬಳಿಕ ಅದರ ಮೇಲೆ ಮಿಕ್ಸ್ ಮಾಡಿಕೊಂಡ ಮಸಾಲೆಗಳನ್ನು ಹಾಕಿಕೊಳ್ಳಿ. ಹಾಕಿದ ಬಳಿಕ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4 ನಿಮಿಷ ಕಾಯಿಸಿಕೊಳ್ಳಿ. ಬಳಿಕ ಮುಚ್ಚಳ ತೆಗೆದು ನೋಡಿಕೊಳ್ಳಿ. ಹಿಟ್ಟು ಬೆಂದಿದಿಯೇ ನೋಡಿಕೊಳ್ಳಿ. ಇದರ ಮೇಲೆ ನಿಮಗೆ ಯಾವ ಮಸಾಲೆಯಾದರು ಹಾಕಿ ಸವಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪಿಜ್ಹಾ ರೆಡಿಯಾಗಿರುತ್ತದೆ. ಈ ಪಿಜ್ಹಾ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇಷ್ಟಪಡುತ್ತಾರೆ. ಕೆಲವೊಂದು ವಸ್ತು ನಿಮ್ಮಲ್ಲಿ ಇಲ್ಲದಿದ್ದರೂ ಈ ಪಿಜ್ಹಾ ಮಾಡಬಹುದು. ಸರಿಯಾಗಿ ಹಿಟ್ಟು ರೆಡಿ ಮಾಡಿಕೊಂರೆ ಹಾಗೂ ಸಾಸ್ ಬಳಸಿದರೆ ಸಾಕು ನೀವು ಎಂತಹ ರುಚಿಕರ ಪಿಜ್ಹಾ ಬೇಕಾದರು ಮಾಡಿಕೊಳ್ಳಬಹುದು.