ಜೀರಾ ಆಲೂಫ್ರೈ ಮಾಡಲು ಇಲ್ಲಿದೆ ನೋಡಿ ರೆಸಿಪಿ

ಜೀರಾ ಆಲೂಫ್ರೈಯನ್ನು ನೀವು ರೆಸ್ಟೋರೆಂಟ್ನ ರುಚಿಯಲ್ಲಿ ತಕ್ಕಂಗೆ ಮನೆಯಲ್ಲಿಯೇ ಸುಲಭದ ರೀತಿಯಲ್ಲಿ ಮಾಡಬಹುದು. ಇದಕ್ಕೆ ಜೀರಿಗೆ ಹಾಕಿ ಮಾಡುವುದರಿಂದ ಜೀರಿಗೆ ಜೊತೆ ಆಲೂಫ್ರೈ ತುಂಬಾನೇ ರುಚಿಯಾಗಿರುತ್ತದೆ. ಈ ಆಲೂಫ್ರೈ ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಸಾಮಗ್ರಿ:

ಆಲೂಗಡ್ಡೆ 5-6 (ಬೇಯಿಸಿ ದಪ್ಪವಾಗಿ ಕತ್ತರಿಸಿ) 

ಜೀರಿಗೆ ಒಂದೂವರೆ ಚಮಚ 

ಇಂಗು 1/2 ಚಮಚ 

ಶುಂಠಿ ಚಿಕ್ಕದಾಗಿ ಕತ್ತರಿಸಿದ್ದು 1 ಚಮಚ 

ಹಸಿಮೆಣಸು 2 

ಕೊತ್ತಂಬರಿ ಪುಡಿ ಒಂದೂವರೆ ಚಮಚ 

ಹಳದಿ 1/2 ಚಮಚ

ಖಾರದ ಪುಡಿ 1 ಚಮಚ 

ಮಾವಿನಕಾಯಿ ಪುಡಿ 1 ಚಮಚ (ಬದಲಿಗೆ ನಿಂಬೆರಸ ಬಳಸಿ) 

ಎಣ್ಣೆ 2 ಚಮಚ 

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಆಲೂಗಡ್ಡೆ ಬೇಯಿಸಿ ಕತ್ತರಿಸಿ ಈಗ ಪಾತ್ರೆಯನ್ನು ಬಿಸಿ ಮಾಡಿ, ಅದಕ್ಕೆ 2 ಚಮಚ ಎಣ್ಣೆ ಹಾಕಿ, ಒಂದೂವರೆ ಚಮಚ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಹಸಿ ಮೆಣಸು ಹಾಕಿ, ತುರಿದ ಶುಂಠಿ ಹಾಕಿ ಅಥವಾ ತುರಿದ ಶುಂಠಿ ಇಲ್ಲದಿದ್ದರೆ ನೀವು ಶುಂಠಿ ಪೇಸ್ಟ್ ಕೂಡ ಸೇರಿಸಬಹುದು. ಅದರಿಂದ ಸುವಾಸನೆ ಬರುವಾಗ ಸ್ವಲ್ಪ ಇಂಗು ಹಾಕಿ (ಇಂಗು ಹಾಕದಿದ್ದರೆ ಕೂಡ ಒಕೆ) ನಂತರ ಜೀರಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಆಲೂಗಡ್ಡೆ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ನಂತರ ಸ್ವಲ್ಪ ಒಣ ಮಾವಿನಕಾಯಿ ಪುಡಿ ಅಥವಾ ನಿಂಬೆರಸ ಮಿಕ್ಸ್ ಮಾಡಿ. 

ಮತ್ತೊಂದು ರೀತಿಯಲ್ಲಿಯೂ ಇದನ್ನು ಮಾಡಬಹುದು ಆಲೂಗಡ್ಡೆಯನ್ನು ಮೊದಲೇ ಬೇಯಿಸದೆ ಮಸಾಲೆ ಜೊತೆಯೇ ಬೇಯಿಸಿ ಕೂಡ ಮಾಡಬಹುದು. ನೀವು ಮೊದಲು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಫ್ರೈ ಮಾಡಿ. ನಂತರ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ, ನೀರು ಸೇರಿಸಿ ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ, ನೀರು ಆವಿಯಾದಾಗ ಆಲೂ ಫ್ರೈ ಡ್ರೈಯಾಗುವುದು. ನಂತರ ನಿಂಬೆರಸ ಹಾಕಿದರೆ ಆಲೂಫ್ರೈ ರೆಡಿ.

ಈ ಆಲೂಫ್ರೈಯನ್ನು ನೀವು ಅನ್ನ ಪರೋಟಾ, ಚಪಾತಿ ಜೊತೆಗೆ ತಿನ್ನಲು ತುಂಬಾನೆ ರುಚಿಯಾಗಿರುತ್ತದೆ.