ಕಲ್ಲಂಗಡಿ ಹಣ್ಣು ಸೇವಿಸುವಾಗ ಎಚ್ಚರವಿರಲಿ. ಅದಕ್ಕೆ ರಾಸಾಯನಿಕ ಹಾಕ್ತಾರೆ!

ಇತ್ತೀಚಿಗೆ ನಾವು ಸೇವಿಸುತ್ತಿರುವ ಬಹುತೇಕ ಎಲ್ಲಾ ಹಣ್ಣುಗಳಲ್ಲಿ ರಾಸಾಯನಿಕಯುಕ್ತವಾಗಿರುತ್ತೆ. ಇದಕ್ಕೆ ಹಲವು ಘಟನೆಗಳು ಸಾಕ್ಷಿಯಾಗಿವೆ. ಅದರಲ್ಲೂ ಹತ್ತಾರು ವಿಡಿಯೋಗಳು ಆಹಾರ ಪ್ರಿಯರದಲ್ಲಿ ಆತಂಕಕ್ಕೂ ಕಾರಣವಾಗುತ್ತವೆ.

ಹೀಗೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತರಕಾರಿಗಳು, ಹಣ್ಣುಗಳು, ಸಿಹಿ ತಿಂಡಿಗಳು ಹೀಗೆ ಹತ್ತಾರು ಪದಾರ್ಥಗಳು ರಾಸಾಯನಿಕದಿಂದಲೋ ಅಥವಾ ಬಳಕೆ ಯೋಗ್ಯವಲ್ಲದ ರೀತಿ ಅದನ್ನು ತಯಾರು ಮಾಡಿರುತ್ತಾರೆ. ಅದರಲ್ಲೂ ಹಣ್ಣುಗಳು ಬೇಗ ಹಾಳಾಗಬಾರದು ಎಂದು ಹಾಗೂ ಅದರ ಬಣ್ಣ ಹೆಚ್ಚಾಗಲಿ ಅಂತಲೋ ಅವುಗಳಿಗೆ ರಾಸಾಯನಿಕ ಸಿಂಪಡಿಸುವುದು ನಡೆಯುತ್ತಲೇ ಇರುತ್ತದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ನಾವು ಮಾರುಕಟ್ಟೆಗೆ ಹೋದಾಗ ಅಲ್ಲಿ ನೋಡಬಹುದು. ಈಗ ಮಾವಿನ ಸೀಸನ್ ಆಗಿದ್ದು, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಮಾವಿನಹಣ್ಣುಗಳು ಈ ರಾಸಾಯನಿಕಗಳ ಬಳಸಿಯೇ ಹಣ್ಣು ಮಾಡಿರುತ್ತಾರೆ. ಇತ್ತ ಈಗ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಕಲ್ಲಂಗಡಿ ಹಣ್ಣಿಗೆ ಹೇಗೆ ರಾಸಾಯನಿಕ ಬೆರೆಸುತ್ತಾರೆ ಎಂಬುದನ್ನು ನೋಡಿ ಜನ ಶಾಕ್ ಆಗಿದ್ದಾರೆ. 

ಹೌದು ಕಲ್ಲಂಗಡಿ ಹೆಚ್ಚು ಕೆಂಪಾಗಿ ಕಾಣಿಸಲೆಂದು ಅವರು ರಾಸಾಯನಿಕವನ್ನು ಇಂಜೆಕ್ಟ್ ಮಾಡಲಾಗುತ್ತದೆ. ಈ ಕುರಿತಂತೆ ಊರ್ವಶಿ ಅಗರ್ವಾಲ್ ಎಂಬುವರು ಈ ವಿಡಿಯೋ ಹಂಚಿಕೊಂಡಿದ್ದು ಹೇಗೆ ಕಲ್ಲಂಗಡಿ ಹಣ್ಣಿನಲ್ಲಿ ಮೋಸ ಮಾಡುತ್ತಾರೆ ಎಂದು ಹೇಳಿದ್ದಾರೆ. 

ನಾವು ಮಾರುಕಟ್ಟೆಯಲ್ಲಿ ಯಾವ ರೀತಿಯ ಕಲ್ಲಂಗಡಿ ಖರೀದಿಸಬೇಕು.? ಯಾವುದನ್ನು ಖರೀದಿಸಬಾರದು? ಕಲ್ಲಂಗಡಿಗೆ ಹೇಗೆ ರಾಸಾಯಾನಿಕ ಸಿಂಪಡಿಸುತ್ತಾರೆ.? ಇದಕ್ಕೆ ಕಾರಣವೇನು ಎಂಬುದನ್ನು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನ ಸಹ ಶಾಕ್ಗೆ ಒಳಗಾಗಿದ್ದಾರೆ.

ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸಾರ್ವಜನಿಕರಿಗೆ ಈ ವಂಚನೆಯಿಂದ ಎಚ್ಚರವಹಿಸುವಂತೆ ಸಲಹೆ ನೀಡಿದೆ. ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣುಗಳಿಗೆ ಎರಿಥ್ರೋಸಿನ್ ಎಂಬ ರಾಸಾಯನಿಕ ಬೆರೆಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದು ಸಿಹಿತಿಂಡಿಗಳು, ಮಿಠಾಯಿಗಳು ಮತ್ತು ಪಾನೀಯಗಳಿಗೆ ಸೇರಿಸಲಾದ ಕೆಂಪು ಬಣ್ಣವಾಗಿದೆ. ಈ ಅಪಾಯಕಾರಿ ರಾಸಾಯನಿಕ ಬಣ್ಣವನ್ನು ಯಾವುದೇ ಹಣ್ಣುಗಳಿಗೆ ಸೇರಿಸುವುದನ್ನು ಸರ್ಕಾರ ನಿಷೇಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ,ಎಫ್ಎಸ್ಎಸ್ಎಐ ಕಲಬೆರಕೆ ಅಥವಾ ನಕಲಿ ಕಲ್ಲಂಗಡಿಗಳನ್ನು ಗುರುತಿಸಲು ಕೆಲವು ನಿಖರವಾದ ವಿಧಾನಗಳನ್ನು ಸೂಚಿಸಿದೆ.

ಕಲ್ಲಂಗಡಿಗೆ ಕೆಂಪು ರಾಸಾಯನಿಕ ಮಿಶ್ರಣ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಕಲ್ಲಂಗಡಿ ಬಣ್ಣವನ್ನು ಸರಿಯಾಗಿ ನೋಡಿ. ಕಲ್ಲಂಗಡಿ ಸುತ್ತಲೂ ಒಂದೇ ಬಣ್ಣವಿದ್ದರೆ ಅದರಲ್ಲಿ ಮಿಶ್ರಣವಾಗಿರುವ ಸಾಧ್ಯತೆ ಹೆಚ್ಚು, ಒಂದು ವೇಳೆ ಕಲ್ಲಂಗಡಿಯ ಒಂದು ಭಾಗದಲ್ಲಿ ತಿಳಿ ಹಸಿರು ಬಣ್ಣಕ್ಕೆ ತಿರುಗಿದ್ದರೆ ಅದು ನೈಸರ್ಗಿಕ ಕಲ್ಲಂಗಡಿ ಎನ್ನಲಾಗಿದೆ. ಏಕೆಂದರೆ ಕಲ್ಲಂಗಡಿ ಬೆಳೆಯುವಾಗ ಅದು ಸಂಪೂರ್ಣ ಹೊಲದಲ್ಲಿ ಬೆಳೆದರೆ ಅದರ ಒಂದು ಭಾಗ ನೆಲಕ್ಕೆ ತಾಗಿ ಅಲ್ಲಿ ಬಣ್ಣ ತಿಳಿ ಹಸಿರಾಗುತ್ತದೆ. ಆದರೆ ರಾಸಾಯನಿಕ ಹಾಕಿದ್ದರೆ ಬಣ್ಣ ಸಂಪೂರ್ಣ ಒಂದೇ ರೀತಿ ಇರುತ್ತದೆ.

ಒಂದು ವೇಳೆ ನೀವು ಕಲ್ಲಂಗಡಿ ಖರೀದಿಸಿ ಮನೆಗೆ ತಂದು ಅದರು ಕುರಿತು ಅನುಮಾನ ಮೂಡಿದರೆ ಸ್ವಲ್ಪ ಕಲ್ಲಂಗಡಿ ಹಣ್ಣು ಕತ್ತರಿಸಿ ಒಂದು ಗ್ಲಾಸ್ ನೀರಿನಲ್ಲಿ ಹಾಕಿ. ಅದು ಬಣ್ಣ ಬಿಟ್ಟು ನೀರು ಕೆಂಪಾದರೆ ಅದರಲ್ಲಿ ರಾಸಾಯನಿಕ ಮಿಶ್ರಣಗೊಂಡಿದೆ ಎಂದರ್ಥ. ಒಂದು ವೇಳೆ ನೀರು ಹಾಗೆಯೇ ಇದ್ದರೆ ಅದರಲ್ಲಿ ಬಣ್ಣವಿಲ್ಲ ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ. ಅಥವಾ ನೀವು ಒಂದು ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಕಲ್ಲಂಗಡಿ ಪೀಸ್ ಅನ್ನು ಚೆನ್ನಾಗಿ ಒರಸಿ ನೋಡಿ. ಹತ್ತಿಗೆ ಬಣ್ಣ ಹಿಡಿದರೆ ಅದರಲ್ಲಿ ರಾಸಾಯನಿಕವಿದೆ ಎಂದು ತಿಳಿದುಕೊಳ್ಳಿ.