ಚಿಪ್ಸ್ ಅಂದ ಕೂಡಲೆ ನಮಗೆ ಬಾಳೆಹಣ್ಣಿನ, ಆಲೂಗಡ್ಡೆಯ ಬೇಕರಿ ಚಿಪ್ಸ್ಗಳು ನೆನಪಿಗೆ ಬರುತ್ತದೆ. ಇವುಗಳ ರುಚಿ ಏನೋ ಚೆನ್ನಾಗಿಯೇ ಇರುತ್ತದೆ. ಆದರೆ ಅದನ್ನು ಯಾವ ರೀತಿ ಮಾಡುತ್ತಾರೆ ಅನ್ನೋದೆ ದೊಡ್ಡ ಪ್ರಶ್ನೆ, ಹೀಗಾಗಿ ರಸ್ತೆ ಬದಿ ಕರಿದ ತಿಂಡಿಗಳಿಂದ ದೂರವಿರಲು ಮನಸ್ಸು ಯಾವಾಗಲು ಹೇಳುತ್ತಿರುತ್ತೆ.
ಆದರೆ ಈ ತಿಂಡಿಗಳನ್ನು ಮನೆಯಲ್ಲೇ ಮಾಡಿ ಸವಿಯಲು ಎಲ್ಲರಿಗೂ ಇಷ್ಟವಿರುತ್ತದೆ. ಆದರೆ ಮಾಡುವುದು ಹೇಗೆ ಎಂಬುದೇ ಹಲವರ ಪ್ರಶ್ನೆಯಾಗಿರುತ್ತೆ. ನಾವಿಂದು ಮೂರು ಆಲೂಗಡ್ಡೆ ಬಳಸಿ ಕಡ್ಡಿ ಆಕೃತಿಯ ಚಿಪ್ಸ್ ಮಾಡುವುದನ್ನು ಹೇಳಿ ಕೊಡುತ್ತೇವೆ.
ಆಲೂಗಡ್ಡೆ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ - 3
ಕಾರ್ನ್ ಫ್ಲೋರ್
ಅರಶಿಣ
ಇಂಗು
ಖಾರದ ಪುಡಿ
ಉಪ್ಪು
ಎಣ್ಣೆ
ಕರಿಬೇವು
ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆ:
ಮೊದಲು ಆಲುಗಡ್ಡೆಯ ಸಿಪ್ಪೆ ತೆಗದುಕೊಂಡು ನೀರಿನಲ್ಲಿ ಹಾಕಿಡಿ. ಬಳಿಕ ಸಣ್ಣ ಸಣ್ಣ ಕಡ್ಡಿಗಳಾಗಿ ತುರಿದುಕೊಳ್ಳಿ. ತುರಿದುಕೊಳ್ಳಲು ಕಟರ್ ಇಲ್ಲದಿದ್ದರೆ ಚಾಕುವಿನಿಂದ ಸಣ್ಣದಾಗಿ ಕತ್ತರಿಸಿಕೊಳ್ಳಿ. ಈರುಳ್ಳಿಯಂತೆ ತೆಳುವಾಗ ಸಣ್ಣದಾಗಿ ಉದ್ದುದ್ದ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಯಲು ಬಿಡಿ. ಬಳಿಕ ಚೆನ್ನಾಗಿ ಈ ಆಲೂಗಡ್ಡೆಯನ್ನು ತೊಳೆದುಕೊಳ್ಳಿ, ಮೂರು ಬಾರಿ ಹೊಸ ನೀರು ಹಾಕಿ ತೊಳೆದುಕೊಳ್ಳಿ. ನಂತರ ಅದನ್ನು ಬಟ್ಟೆ ಮೇಲೆ ಹರಡಿಕೊಂಡು ಚೆನ್ನಾಗಿ ಒಣಗಲು ಬಿಡಿ. ಆಲೂಗಡ್ಡೆಯಲ್ಲಿರುವ ನೀರಿನ ಅಂಶ ಹೋಗುವಷ್ಟು ಒಣಗಿಸಬೇಕು.
ಬಳಿಕ ಈ ಆಲೂಗಡ್ಡೆ ತೆಗೆದುಕೊಂಡು ಅದಕ್ಕೆ ಉಪ್ಪು, ಇಂಗು, ಅರಶಿಣ, ಖಾರದ ಪುಡಿ ಹಾಕಿಕೊಂಡಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆ ಎಷ್ಟು ಒಣಗಿರುತ್ತದೆಯೋ ಅಷ್ಟು ಕ್ರಿಸ್ಪಿಯಾಗಿ ಚಿಪ್ಸ್ ಬರುತ್ತದೆ.
ಇಷ್ಟಾದ ಬಳಿಕ ನೀವು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡ ಆಲೂಗಡ್ಡೆಯನ್ನು ಹಾಕಿಕೊಳ್ಳಿ. ಆಲೂಗಡ್ಡೆ ಬ್ರೌನ್ ಕಲರ್ಗೆ ಬರುವವರೆಗೂ ಚೆನ್ನಾಗಿ ಕಾಯಿಸಿಕೊಳ್ಳಿ. ಇದಕ್ಕೆ ಕೊನೆಯದಾಗಿ ಕರಿಬೇವು ಹಾಕಿಕೊಂಡಿ ಎಣ್ಣೆಯಿಂದ ಎತ್ತಿಟ್ಟುಕೊಳ್ಳಿ. ಎಣ್ಣೆ ಇಳಿಯುವವರೆಗೂ ಹೊರಗಡೆ ಇಟ್ಟು ಬಳಿಕ ಸವಿಯಲು ನೀಡಬಹುದು.
ಈ ಚಿಪ್ಸ್ ಅನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಇಟ್ಟರೆ ತಿಂಗಳುಗಳ ಕಾಲ ಇಟ್ಟು ಸವಿಯಬಹುದು.