ಕಾಂಡೋಮ್ ಬಗ್ಗೆ ಮುಕ್ತವಾಗಿ ಯಾರೂ ಮಾತಾಡೋದಿಲ್ಲ. ಕ್ಲೋಸ್ಡ್ ಸರ್ಕಲ್ ಗಳಲ್ಲಿ ಮಾತ್ರ ಆಡುವ ಜೋಕ್ ಗಳಲ್ಲಿ, ಗಂಡ ಹೆಂಡತಿ ಅಥವಾ ಕಪಲ್ ನಡುವಿನ ಮಾತುಗಳಲ್ಲಿ ಆಗಾಗ ಕಾಂಡೋಮ್ ಬಗೆಗಿನ ಮಾತು ಕೇಳಿಬರುತ್ತದೆ. ಆದರೆ ಅವು ಯಾವುವೂ ಅದರ ಬಳಕೆಯ ಬಗ್ಗೆ ತಿಳಿವಳಿಕೆ ಮೂಡಿಸೋ ಹಾಗಿರೋದಿಲ್ಲ. ಅಷ್ಟೇ ಅಲ್ಲ, ಮೆಡಿಕಲ್ ಶಾಪ್ನಲ್ಲಿ ತಮಗೆ ಬೇಕಾದ ಕಾಂಡೋಮ್ ಬಗ್ಗೆ ಮುಕ್ತವಾಗಿ ಕೇಳಲು ನಾಚಿಕೆ ಪಟ್ಟು ಏನೋ ಒಂದು ಕಾಂಡೋಮ್ ಖರೀದಿಸಿ ಅದನ್ನು ಬಳಸಲಾಗದೇ ಒದ್ದಾಡೋದುಂಟು.
ಆನ್ಲೈನ್ನಲ್ಲಿ ಸ್ವಲ್ಪ ಚೆಕ್ ಮಾಡಿದರೂ ಆ ಬಗ್ಗೆ ಡೀಟೇಲ್ಸ್ ಸಿಗಬಹುದು, ಆದರೆ ಅಷ್ಟು ವ್ಯವಧಾನ ಹೆಚ್ಚಿನವರಿಗೆ ಇರೋದಿಲ್ಲ. ಇದರಿಂದ ಆ ಟೈಮ್ನಲ್ಲಿ ಒದ್ದಾಟ, ಏನೋ ಮಾಡಲು ಹೋಗಿ ಮತ್ತೇನೋ ಆಗಿ ಆಗಬಾರದ್ದು ಆಗೋಗಿ ಒಂದಿಷ್ಟು ಸಮಸ್ಯೆ ಉಂಟಾಗುತ್ತದೆ. ಕಾಂಡೋಮ್ ಗರ್ಭ ಕಟ್ಟೋದನ್ನು ತಡೆಯುವ ಸುರಕ್ಷಿತ ವಿಧಾನ, ಲೈಂಗಿಕ ರೋಗಗಳಿಂದ ಕಾಪಾಡುವ ವಿಧಾನ ಆಗಿರೋ ಕಾರಣ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಅತ್ಯಗತ್ಯ.
ಕಾಂಡೋಮ್ ಬಳಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಕಾಂಡೋಮ್ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಒಳ್ಳೆ ಕಂಪನಿಯ ಕಾಂಡೋಮ್ ಖರೀದಿ ಮಾಡಬೇಕು. ಕಾಂಡೋಮ್ ಬಳಕೆಯಿಂದ ಅಲರ್ಜಿ ಕಾಣಿಸಿಕೊಂಡರೆ ತಕ್ಷಣ ಬ್ರ್ಯಾಂಡ್ ಬದಲಾಯಿಸುವುದು ಒಳ್ಳೆಯದು. ಬಳಸುವ ಮುನ್ನ ಕಾಂಡೋಮ್ ಮೇಲಿರುವ ಸೀಲ್ ಹಾಗೂ ದಿನಾಂಕವನ್ನು ಪರಿಶೀಲಿಸಿಕೊಳ್ಳಿ. ಎಕ್ಸ್ ಪೈರ್ ಆಗಿರುವ ಕಾಂಡೋಮ್ ಬಳಸಬೇಡಿ.
ಜೇಬಿನಲ್ಲಿ, ಕಾರಿನಲ್ಲಿ ಹಾಗೂ ಪರ್ಸ್ ನಲ್ಲಿ ತುಂಬಾ ಸಮಯ ಇಡಬೇಡಿ. ತಣ್ಣಗಿನ ಅಥವಾ ಒಣ ಪ್ರದೇಶದಲ್ಲಿ ಕಾಂಡೋಮ್ ಇಡಬೇಕು. ಒಂದು ಕಾಂಡೋಮ್ ಒಂದೇ ಬಾರಿ ಬಳಸಿ. ಕಾಂಡೋಮ್ ಪ್ಯಾಕೆಟ್ಟನ್ನು ಮೂಗಿನ ಹತ್ತಿರ ತೆರೆಯಬೇಡಿ.
ಕಾಂಡೋಮ್ ಅನ್ನು ತೊಳೆಯುವುದು ಮತ್ತು ಮರುಬಳಕೆ ಮಾಡುವುದು ತಪ್ಪು. ಆದ್ದರಿಂದ ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ. ಗುಪ್ತಾಂಗದ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರುತ್ತದೆ. ಹೀಗಾಗಿ ಈ ಗಾತ್ರಕ್ಕೆ ತಕ್ಕಂತೆ ಕಾಂಡೋಮ್ಗಳು ಲಭ್ಯವಿದೆ. ಆದ್ದರಿಂದ ನಿಮ್ಮ ನಿಖರವಾದ ಗಾತ್ರವನ್ನು ತಿಳಿದುಕೊಳ್ಳಿ ಮತ್ತು ಅದೇ ಗಾತ್ರದ ಕಾಂಡೋಮ್ ಬಳಸಿ.
ಸಣ್ಣ ಗಾತ್ರಗಳನ್ನು ಧರಿಸುವುದರಿಂದ ಅವು ಸೆಕ್ಸ್ ಮಾಡುವಾಗ ಹರಿದು ಹೋಗಬಹುದು. ದೊಡ್ಡ ಗಾತ್ರದ ಕಾಂಡೋಮ್ ಬಳಿಸಿದರೆ ಜಾರಿ ಹೋಗಬಹುದು. ಹೆಚ್ಚುವರಿ ರಕ್ಷಣೆಗಾಗಿ ಕೆಲವರು ಎರಡು ಕಾಂಡೋಮ್ಗಳನ್ನು ಧರಿಸುತ್ತಾರೆ. ಹಾಗೆ ಧರಿಸುವುದು ಸಂಪೂರ್ಣವಾಗಿ ತಪ್ಪು ಆಲೋಚನೆ. ಹಾಗೆ ಮಾಡುವುದರಿಂದ ಕಾಂಡೋಮ್ ಹರಿದುಹೋಗುವ ಅಥವಾ ಜಾರಿಬೀಳುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಅದನ್ನು ಮಾಡಬೇಡಿ.
ಹೆಚ್ಚಿನ ಕಾಂಡೋಮ್ ಗಳನ್ನು ಲ್ಯಾಟೆಕ್ಸ್ ನಿಂದ ಮಾಡಲಾಗುತ್ತದೆ. ಇದನ್ನು ರಬ್ಬರ್ ಮರದಿಂದ ಬರುವ ದ್ರವದಿಂದ ತಯಾರಿಸಲಾಗುವುದು. ಇದರಿಂದ ಕೆಲವೊಮ್ಮೆ ಅಲರ್ಜಿಯು ಕಾಣಿಸಿಕೊಳ್ಳುವುದು. ಆದರೆ ಹೀಗಾಗೋದು ತುಂಬಾ ಅಪರೂಪ. ಅಲರ್ಜಿಯ ಲಕ್ಷಣಗಳು ತುಂಬಾ ಭಿನ್ನವಾಗಿ ಇರಬಹುದು. ಇದು ತೀವ್ರ ಮಟ್ಟದ್ದಾಗಿರಬಹುದು, ಸೀನು, ಶೀತ, ತುರಿಕೆ, ಬೊಕ್ಕೆ ಬರ ಬಹುದು. ಇನ್ನು ತೀವ್ರವಾದ ಸೋಂಕಿನ ಲಕ್ಷಣಗಳೆಂದರೆ ಉಬ್ಬಸ, ಊತ, ನಿಶ್ಯಕ್ತಿ ಮತ್ತು ಲಘು ತಲೆನೋವು.
ಕೆಲವೊಂದು ಸಂದರ್ಭಧಲ್ಲಿ ಲ್ಯಾಟೆಕ್ಸ್ ಅಲರ್ಜಿಯಿಂದಾಗಿ ಅನಾಫಿಲ್ಯಾಕ್ಸಿಸ್ ಎನ್ನುವ ಪ್ರಾಣಹಾನಿ ಉಂಟು ಮಾಡುವ ಪರಿಸ್ಥಿತಿ ಉಂಟಾಗ ಬಹುದು. ಇಂತಹ ಕಾಂಡೋಮ್ ಗಳು ಲೈಂಗಿಕಕ್ರಿಯೆ ವೇಳೆ ಹರಿದು ಹೋಗುವಂತಹ ಸಾಧ್ಯತೆಯು ಅಧಿಕವಾಗಿರುವುದು ಮತ್ತು ಇವುಗಳು ಯೋನಿಯ ದ್ರವಕ್ಕೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಕಾಂಡೋಮ್ ಬಳಕೆ ಅಂದುಕೊಂಡಷ್ಟು ಸುಲಭವಲ್ಲ. ಈ ಬಗ್ಗೆ ತಿಳಿದುಕೊಂಡು ಮುಂದುವರಿಯೋದು ಅಗತ್ಯ.