ಕಾಂಡೋಮ್ ಬಳಸುವಾಗ ಈ ತಪ್ಪುಗಳನ್ನು ಮಾಡಿದರೆ ಆಕೆ ಗರ್ಭ ಧರಿಸಬಹುದು. ಎಚ್ಚರ?

ಕಾಂಡೋಮ್ ಬಳಕೆ ಮಾಡುವಾಗ ಹುಡುಗರು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ಆಕೆ ಗರ್ಭ ಧರಿಸಬಹುದು. ಗರ್ಭನಿರೋಧಕಕ್ಕಾಗಿ ಕಾಂಡೋಮ್ ಬಳಸುವುದು ಸುರಕ್ಷಿತದ ಜೊತೆಗೆ ಆರೋಗ್ಯಕರ ಕೂಡ ಹೌದು. ಅದರ ಸುರಕ್ಷತೆಯ ವ್ಯಾಪ್ತಿ ನಿಮಗೆ ತಿಳಿದಿದೆಯೇ? ಕಾಂಡೋಮ್ ಧರಿಸಿದ ಹೊರತಾಗಿಯೂ ಕೆಲವೊಮ್ಮೆ ತಪ್ಪು ಉಂಟಾಗಬಹುದು.

ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್ ಗ್ಯಾರಂಟಿಯನ್ನು ಕಾಡೋಮ್ ಕಂಪಿನಗಳು ಕೂಡ ನೀಡುವುದಿಲ್ಲ. ಹೀಗಾಗಿ ಕಾಂಡೋಮ್ ಧರಿಸಿದರೆ ಮಕ್ಕಳು ಆಗುವುದೇ ಇಲ್ಲ ಎಂಬುದನ್ನು ನೂರಕ್ಕೆ ನೂರು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿ ನೀವು ಮಾಡುವ ತಪ್ಪುಗಳು ಕೂಡ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ.

ನೀವು ಕಾಂಡೋಮ್ ಅನ್ನು ತುಂಬಾ ಜಾಗರೂಕವಾಗಿ ಧರಿಸಬೇಕು. ನೀವು ಅವಸರದಲ್ಲಿ ಸರಿಯಾಗಿ ಧರಿಸಿಲ್ಲ ಎಂದು ನಿಮಗೆ ಅನಿಸಿದರೆ ಅದನ್ನು ತೆಗೆದುಹಾಕಿ ಮತ್ತು ಹೊಸ ಕಾಂಡೋಮ್ ಧರಿಸಿ. ಕಾಂಡೋಮ್ ಸರಾಗವಾಗಿ ನಿಮ್ಮ ಗುಪ್ತಾಂಗದಲ್ಲಿ ಕೂತಿದರೆ ಎಂದರೆ ನೀವು ಸೂಕ್ತವಾಗಿ ಧರಿಸಿದ್ದೀರಿ ಎಂದರ್ಥ. ಹೀಗಾಗಿ ಕಾಂಡೋಮ್ ಧರಿಸೋ ಮೊದಲು ಅಂಶಗಳನ್ನು ತಪ್ಪದೇ ಗಮನಿಸಿ.

ಮರುಬಳಕೆಯ ದುರುಪಯೋಗ:
ಕಾಂಡೋಮ್ ಅನ್ನು ತೊಳೆಯುವುದು ಮತ್ತು ಮರುಬಳಕೆ ಮಾಡುವುದು ತಪ್ಪು. ಆದ್ದರಿಂದ ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ.

ಗಾತ್ರಕ್ಕೆ ತಕ್ಕಂತೆ ಕಾಂಡೋಮ್ ಬಳಿಸಿ:
ಗುಪ್ತಾಂಗದ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರುತ್ತದೆ. ಹೀಗಾಗಿ ಈ ಗಾತ್ರಕ್ಕೆ ತಕ್ಕಂತೆ ಕಾಂಡೋಮ್ಗಳು ಲಭ್ಯವಿದೆ. ಆದ್ದರಿಂದ ನಿಮ್ಮ ನಿಖರವಾದ ಗಾತ್ರವನ್ನು ತಿಳಿದುಕೊಳ್ಳಿ ಮತ್ತು ಅದೇ ಗಾತ್ರದ ಕಾಂಡೋಮ್ ಬಳಸಿ. ಸಣ್ಣ ಗಾತ್ರಗಳನ್ನು ಧರಿಸುವುದರಿಂದ ಅವು ಸೆಕ್ಸ್ ಮಾಡುವಾಗ ಹರಿದು ಹೋಗಬಹುದು. ದೊಡ್ಡ ಗಾತ್ರದ ಕಾಂಡೋಮ್ ಬಳಿಸಿದರೆ ಜಾರಿ ಹೋಗಬಹುದು.

ಏಕಕಾಲದಲ್ಲಿ ಎರಡು ಧರಿಸಬೇಡಿ:
ಹೆಚ್ಚುವರಿ ರಕ್ಷಣೆಗಾಗಿ ಕೆಲವರು ಎರಡು ಕಾಂಡೋಮ್ಗಳನ್ನು ಧರಿಸುತ್ತಾರೆ. ಹಾಗೆ ಧರಿಸುವುದು ಸಂಪೂರ್ಣವಾಗಿ ತಪ್ಪು ಆಲೋಚನೆ. ಹಾಗೆ ಮಾಡುವುದರಿಂದ ಕಾಂಡೋಮ್ ಹರಿದುಹೋಗುವ ಅಥವಾ ಜಾರಿಬೀಳುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಅದನ್ನು ಮಾಡಬೇಡಿ.