ಮನೆಯಲ್ಲಿ ಮಾಡರ್ನ್ ಕಿಚನ್ ಕಾನ್ಸಪ್ಟ್ ಬದಲಾಗುತ್ತಿದೆ. ನಾನ್‌ಸ್ಟಿಕ್ ತವಾ ಎಲ್ಲಾ ದೂರ ಎಸೆದು ಜನ ಮತ್ತೆ ತಾಮ್ರ ಪಾತ್ರೆಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಪಿಂಗಾಣಿ ಪಾತ್ರೆಗಳು ಕೂಡ ಹೌದು. ತೆಂಗಿನಕಾಯಿ ಚಿಪ್ಪಿನ ಸೌಟ್‌ಗಳಿಂದ ಅಲಂಕೃತವಾಗುತ್ತಿದೆ. ಇದೇ ಈಗೀನ ಮಾಡರ್ನ್ ಕಿಚನ್‌ನ ಹೊಸ ಸ್ಟೆಲ್, ಆದರೆ ತುಂಬಾ ಆರೋಗ್ಯಕರವಾದ ಕಿಚನ್ ಸೆಟ್‌ಅಪ್.
ಈಗ ಈ ಉಪ್ಪಿನಕಾಯಿ, ಉಪ್ಪು ಮುಂತಾದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಇಡಲಾಗುವುದು, ಆದರೆ ಹಿಂದೆಯೆಲ್ಲಾ ಪಿಂಗಾಣಿ ಪಾತ್ರೆಗಳಲ್ಲಿ ಇಡಲಾಗಿತ್ತು. ಇದೀಗ ಮತ್ತೆ ಪಿಂಗಾಣಿ ಪಾತ್ರೆಗಳು ಅಡುಗೆ ಮನೆಯಲ್ಲಿ ಶಬ್ದ ಮಾಡುತ್ತಿದೆ. ಈ ಪಿಂಗಾಣಿ ಪಾತ್ರೆಗಳನ್ನು ಬಳಸುವುದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ:
ಆರೋಗ್ಯಕ್ಕೆ ಒಳ್ಲೆಯದು:
ನಾನ್‌ಸ್ಟಿಕ್ ಪಾತ್ರೆಗಳಂತೆ ಅಲ್ಲ, ಈ ಪಿಂಗಾಣಿ ಪಾತ್ರೆಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದರಲ್ಲಿ ಆಹಾರ ಹಾಕಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಲ್ಲಿ ಯಾವುದೇ ರಾಸಾಯನಿಕಗಳು ಇರಲ್ಲ, ಹಾಗಾಗಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತುಂಬಾ ಸಮಯ ಬಾಳಿಕೆ ಬರುತ್ತದೆ:
ಪಿಂಗಾಣಿ ಪಾತ್ರೆಗಳು ಎಷ್ಟೇ ವರ್ಷಗಳಾದರೂ ಅದರ ಹೊಳಪು ಹಾಗೇ ಇರುತ್ತದೆ, ಅಲ್ಲದೆ ತೊಳೆಯುವಾಗ ಸ್ವಲ್ಪ ಜೋಪಾನ ಮಾಡಬೇಕು ಅಷ್ಟೇ.. ಉಳಿದಂತೆ ಈ ಪಾತ್ರೆಗಳು ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತದೆ.
ಆಹಾರ ಅಂಟುವುದಿಲ್ಲ:
ಇದರಲ್ಲಿ ಎಣ್ಣೆ ಹಾಕಿ ಮಾಡಬೇಕು, ಅಲ್ಲದೆ ಇದರಲ್ಲಿ ಆಹಾರಗಳು ತಳ ಹಿಡಿಯುವುದಿಲ್ಲ,ಹೀಗಾಗಿ ಇದನ್ನು ಕ್ಲೀನ್ ಮಾಡುವುದು ಕೂಡ ಸುಲಭವಾಗಿದೆ.
ಆಹಾರ ಬೇಯಿಸಲು, ಆಹಾರ ಸೇವಿಸಲು ಬಳಸಬಹುದು:
ಈ ಪಿಂಗಾಣಿ ಪಾತ್ರೆ ಅಡುಗೆ ಮಾಡಲು ಸಿಗುತ್ತದೆ ಅಲ್ಲದೆ ಪ್ಲೇಟ್, ಲೋಟ ಎಲ್ಲವೂ ಸಿಗುತ್ತದೆ, ಹಾಗಾಗಿ ಪಿಂಗಾಣಿ ತಟ್ಟೆಗಳನ್ನು ಬಳಸಬಹುದು. ಇವುಗಳು ನೋಡಲು ಕೂಡ ಆಕರ್ಷಕವಾಗಿರುತ್ತದೆ.
ಈ ಪಾತ್ರೆಗಳು ರಾಸಾಯನಿಕಗಳಿಂದ ಮುಕ್ತವಾಗುವುದು:
ಕಬ್ಬಿಣದ ಪಾತ್ರೆ, ಸ್ಟೀಲ್ ಪಾತ್ರೆಯಾದರೂ ತುಕ್ಕು ಹಿಡಿಯುತ್ತೆ, ಆದರೆ ಈ ಪಾತ್ರೆಗಳಿಗೆ ಏನೂ ಆಗುವುದಿಲ್ಲ, ಇದು ಹುಳಿ ಆಹಾರ ವಸ್ತುಗಳಿಗೆ ರಿಯಾಕ್ಟ್ ಆಗುವುದಿಲ್ಲ, ಹಾಗಾಗಿ ಈ ಪಾತ್ರೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅಲ್ಲದೆ ಈ ಪಾತ್ರೆಯಲ್ಲಿ ಆಹಾರ ಬೇಯಿಸುವುದರಿಂದ ಆಹಾರ ರುಚಿಯಾಗಿರುತ್ತದೆ.
ಪಿಂಗಾಣಿ ಪಾತ್ರೆ ಬಳಕೆಯ ಪ್ರಯೋಜನಗಳು:
ಇದರಲ್ಲಿ ರಾಸಾಯನಿಕ ಅಂಶಗಳಿರಲಿಲ್ಲ: ಇದರಲ್ಲಿ ಪಿಎಫ್‌ಒಎ, ಪಿಟಿಎಫ್‌ಇ, ಪಾದರಸ, ಪಿಎಫ್‌ಎಎಸ್, ಈ ಬಗೆಯ ರಾಸಾಯನಿಕಗಳಿರಲ್ಲ. ಹಾಗಾಗಿ ಆಹಾರ ಶೇ. 100ರಷ್ಟು ಕೆಮಿಕಲ್ ಫ್ರೀ.
ಆಹಾರ ಬೇಗನೆ ಬೇಯುತ್ತದೆ:
ಪಿಂಗಾಣಿ ಪಾತ್ರೆಗಳು ಬೇಗನೆ ಬಿಸಿಯಾಗುತ್ತದೆ, ಹಾಗಾಗಿ ಇದರಲ್ಲಿ ಆಹಾರ ಬೇಗನೆ ಬೇಯುತ್ತದೆ. ಹಾಗಾಗಿ ಇಂಧನ ಕಡಿಮೆ ಸಾಕು, ಸೌದೆಯಾದರೂ, ಗ್ಯಾಸ್ ಆದರೂ ಕಡಿಮೆ ಬಳಕೆಯಾಗುವುದು.
ಶಾಖವನ್ನು ತಡೆಯುತ್ತದೆ:
ಇತರ ಪಾತ್ರೆಗೆ ಹೋಲಿಸಿದರೆ ಇದು ಹೆಚ್ಚು ಶಾಖವನ್ನು ತಡೆಯುವ ಸಾಮಾರ್ಥ್ಯ ಹೊಂದಿದೆ. ಹಾಗಾಗಿ ಇದರಲ್ಲಿ ಮಾಂಸಾಹಾರ ಮಾಡಬಹುದು, ಮಾಂಸಾಹಾರ ಬೇಯಿಸಲು ಉಷ್ಣಾಂಶ ಹೆಚ್ಚಾಗುವುದು.
ಆಹಾರ ವಸ್ತುಗಳನ್ನು ಇಡಲು ಇದನ್ನು ಬಳಸಬಹುದು:
ಕಿಚನ್ ಲುಕ್ ಕೂಡ ಆಕರ್ಷಕವಾಗಿರುತ್ತದೆ. ಆಹಾರ ಬೇಯಿಸುವ ಆಹಾರ ಸೇವಿಸುವ ಪಾತ್ರೆಗಳು ಪಿಂಗಾಣಿ ಪಾತ್ರೆಯಾಗಿದ್ದರೆ ಕಿಚನ್ ಸ್ಪೆಷಲ್ ಆಗಿ ಕಾಣಿಸುವುದು.
ಸ್ವಚ್ಛಗೊಳಿಸಲು ಸುಲಭ:
ಈ ಪಾತ್ರೆಯಲ್ಲಿ ಆಹಾರ ಅಂಟುವುದಿಲ್ಲ, ತಳ ಹಿಡಿಯುವುದಿಲ್ ಹಾಗಾಗಿ ಸ್ವಚ್ಛಗೊಳಿಸಲು ತುಂಬಾನೇ ಶುಭ. ಹೆಚ್ಚು ನೀರು ವ್ಯರ್ಥವಾಗಲ್ಲ, ಅಲ್ಲದೆ ತೊಳೆಯುವುದು ಕೂಡ ಸುಲಭ.