ಬೇಸಿಗೆಯಲ್ಲಿ ಕೇವಲ ಕಲ್ಲಂಗಡಿ ಹಣ್ಣಲ್ಲ, ಅದರ ಸಿಪ್ಪೆನೂ ಕೂಡ ಆರೋಗ್ಯಕ್ಕೆ ಒಳ್ಳೇದು

ಬೇಸಿಗೆಯಲ್ಲಿ ನಾವು ನೀರಿನಾಂಶ ಹೆಚ್ಚಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುತ್ತೇವೆ. ಅದರಲ್ಲೂ ಬಿಸಿಲ ಧಗೆಗೆ ಕಲ್ಲಂಗಡಿ ಹಣ್ಣು ಅತ್ಯಂತ ಪ್ರಯೋಜನಕಾರಿ ಮತ್ತು ರುಚಿಕರವಾದ ಹಣ್ಣು. ಇದರ ಸಿಪ್ಪೆಯನ್ನು ನೀವು ಎಸೆಯುತ್ತಿದ್ರೆ ಈ ಮಾಹಿತಿಯನ್ನು ಓದಿ.

ಕಲ್ಲಂಗಡಿ ಹಣ್ಣಿನ ಸಿಪ್ಪೆ ಚರ್ಮದ ಆರೈಕೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಪ್ಪೆಯಿಂದ ಮುಖವನ್ನು ನಿಧಾನವಾಗಿ ಉಜ್ಜಿಕೊಂಡರೆ ಕೂಡಾ ಅನೇಕ ಲಾಭಗಳಿವೆ.

ಕಲ್ಲಂಗಡಿ ಸಿಪ್ಪೆಯ ರಸ ತೆಗೆದು ಅದಕ್ಕೆ ರೋಸ್ ವಾಟರ್ ಬೆರೆಸಿ ಕೂಡಾ ಮುಖಕ್ಕೆ ಹಚ್ಚಿದ್ರೆ ಅನೇಕ ಉತ್ತಮ ಪರಿಣಾಮಗಳನ್ನು ನೋಡಬಹುದು. ಡಾರ್ಕ್ ಸರ್ಕಲ್ ಸಮಸ್ಯೆ ಎದುರಿಸುತ್ತಿರುವವರು ಕೂಡಾ ಇದರ ಪ್ರಯೋಜನ ಪಡೆದುಕೊಳ್ಳುತ್ತೀರಿ.

ಎಷ್ಟೋ ಸಲ ಅನೇಕ ಹಣ್ಣಿನ ಸಿಪ್ಪೆ ಅಗತ್ಯಕ್ಕೆ ಬರಲ್ಲ ಎಂದು ಬಿಸಾಡುತ್ತೇವೆ. ಆದರೆ ಅದರಲ್ಲೇ ಆರೋಗ್ಯಕ್ಕೆ ಪೂರಕವಾದ ಅನೇಕ ಅಂಶಗಳಿರುತ್ತದೆ. ಕಲ್ಲಂಗಡಿ ಸಿಪ್ಪೆಯನ್ನು ಕತ್ತರಿಸಿ ಪುಡಿ ಮಾಡಿ ಪೇಸ್ಟ್ ಮಾಡಿಕೊಂಡರೆ ಮೊಡವೆಗಳನ್ನು ಮತ್ತು ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

ಬಿಸಿಲಿನ ಬೇಗೆಗೆ ಬೇಗನೆ ಟ್ಯಾನ್ ಆಗುವವರು ಕೂಡಾ ಈ ಕಲ್ಲಂಗಡಿ ಸಿಪ್ಪೆಯ ಪೇಸ್ಟ್ ನ್ನು ಹಚ್ಚಿಕೊಳ್ಳಬಹುದು. ಆದರೆ ಚರ್ಮಕ್ಕನುಗುಣವಾಗಿ ಸಲಹೆ ಪಡೆದು ಇದನ್ನು ಬಳಸಿದರೆ ಉತ್ತಮ.