ಕರಾವಳಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಧಗಧಗ ಸೆಕೆಗೆ ಏನಾದರೂ ತಂಪು ಆಹಾರ ಸೇವಿಸಲು ಆಸೆಯಾಗುತ್ತದೆ. ವಾತಾವರಣ ಹೀಗಿರುವಾಗ ದೇಹವನ್ನು ತಂಪಾಗಿರಿಸುವುದು, ಸೀಸನಲ್ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮುಖ್ಯವಾದದ್ದು ತಾಳೆ ಹಣ್ಣು. ಇದನ್ನು ಸೇವಿಸುವುದರಿಂದ ಅನೇಕ ರೀತಿಯ ಲಾಭಗಳಿವೆ.
ತಾಳೆ ಹಣ್ಣನ್ನು ಐಸ್ ಆ್ಯಪಲ್, ಕರಾವಳಿಯಲ್ಲಿ ಈರೋಲ್ ಎಂಬ ಹೆಸರಿನಲ್ಲಿ ಇದನ್ನು ಕರೆಯುತ್ತಾರೆ. ಕಡಿಮೆ ಖರ್ಚು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಈ ಹಣ್ಣು ಕಣ್ಣಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಬಿ, ಪೊಟ್ಯಾಷಿಯಂ, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಮತ್ತು ಕಡಿಮೆ ಕ್ಯಾಲೋರಿಯನ್ನು ಇದು ಹೊಂದಿದೆ.
ತಾಳೆ ಹಣ್ಣಿನ ಪ್ರಯೋಜನವೆಂದರೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಕಡಿಮೆ ಕ್ಯಾಲೋರಿ ಗುಣವನ್ನು ಹೊಂದಿರುವುದರಿಂದ ತೂಕ ಇಳಿಸಲು ಕೂಡಾ ಪ್ರಯೋಜನಕಾರಿ. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯವನ್ನು ಕೂಡಾ ಇದು ಕಾಪಾಡುತ್ತದೆ. ಡಿಹೈಡ್ರೇಷನ್ ಸಮಸ್ಯೆಗೆ ಕೂಡಾ ಮುಕ್ತಿ ನೀಡುತ್ತದೆ. ಈ ರೀತಿ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಿರುವ ಈ ಹಣ್ಣನ್ನು ಬೇಸಿಗೆ ಕಾಲದಲ್ಲಿ ಸೇವಿಸಿ. ದೇಹವನ್ನು ತಂಪಾಗಿರಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳಬಹುದು.