ಗರ್ಭಾವಸ್ಥೆಯಲ್ಲಿ ಬೀಳುವ ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟುವುದು ಹೇಗೆ? ಇದಕ್ಕೆ ಚಿಕಿತ್ಸೆಯೇನು?

ಸ್ಟ್ರೆಚ್ ಮಾರ್ಕ್ಸ್ ತಾಯ್ತನದ ಹೆಮ್ಮೆಯ ಗುರುತು, ಇದರ ಬಗ್ಗೆ ಮುಜುಗರ ಬೇಡ, ಆದರೆ ಗರ್ಭಾವಸ್ಥೆಯಲ್ಲಿ ಸ್ವಲ್ಪ ಕೇರ್ ತೆಗೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ತಡೆಗಟ್ಟಬಹುದು. ಏಕೆಂದರೆ ಶೇ. 90ರಷ್ಟು ಬೀಳುವುದೇ ಹೊಟ್ಟೆ, ತೊಡೆ, ಹಿಂಬದಿ, ಸ್ತನದಲ್ಲಿ ಬೀಳುವುದು. 

ಸ್ಟ್ರೆಚ್ ಮಾರ್ಕ್ಸ್ಗೆ ಕಾರಣಗಳೇನು, ಇದಕ್ಕೆ ಚಿಕಿತ್ಸೆಯೇನು, ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಸ್ಟ್ರೆಚ್ ಮಾರ್ಕ್ಸ್ಗೆ ಕಾರಣಗಳೇನು? 

ದೇಹದಲ್ಲಾಗುವ ಬದಲಾವಣೆ: 
ಗರ್ಭಿಣಿಯಾದಾಗ ದೇಹದಾಕರದಲ್ಲಿ ವ್ಯತ್ಯಾಸ ಉಂಟಾಗುವುದು, ದೇಹ ದಪ್ಪಗಾಗುವುದು ಆಗ ತ್ವಚೆ ಸ್ಟ್ರೆಚ್ ಆಗುತ್ತೆ ಅಂದರೆ ತ್ವಚೆ ಹರಿಯುತ್ತದೆ ಇದರಿಂದ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. 

ಹಾರ್ಮೋನ್ಗಳಲ್ಲಿನ ಬದಲಾವಣೆ: 
ಗರ್ಭಾವಸ್ಥೆಯಲ್ಲಿ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ. ಈ ಹಾರ್ಮೋನ್ಗಳು ತ್ವಚೆಯಲ್ಲಿರುವ ಅಧಿಕ ನೀರಿನಂಶ ಹೀರಿಕೊಳ್ಳುತ್ತದೆ. ಇದರಿಂದ ತ್ವಚೆ ಬಿಗಿದುಕೊಂಡು ತ್ವಚೆ ಹರಿದು ಸ್ಟ್ರೆಚ್ ಮಾರ್ಕ್ಸ್ ಉಂಟಾಗುವುದು.

ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದೆ: 
ಕೆಲವರಿಗೆ ಸ್ಟ್ರೆಚ್ ಮಾರ್ಕ್ಸ್ ಅನುವಂಶೀಯವಾಗಿ ಬರುವ ಸಾಧ್ಯತೆ ಇದೆ. ನಿಮ್ಮ ತಾಯಿಗೆ ಸ್ಟ್ರೆಚ್ ಮಾರ್ಕ್ಸ್ ಬಿದ್ದರೆ ನಿಮಗೂ ಬರುವ ಸಾಧ್ಯತೆ ಇದೆ.

ಸ್ಟ್ರೆಚ್ ಮಾರ್ಕ್ಸ್ನಿಂದ ಏನಾದರೂ ತೊಂದರೆ ಇದೆಯೇ? 
ಸ್ಟ್ರೆಚ್ ಮಾರ್ಕ್ಸ್ನಿಂದ ತುರಿಕೆ ಬರುವುದು ಸಹಜ, ಆದರೆ ಗರ್ಭಾವಸ್ಥೆಯಲ್ಲಿ ಮಾತ್ರ ಬರುತ್ತದೆ. ಹೆರಿಗೆಯಾದ ಬಳಿಕ ತುರಿಕೆ ಉಂಟಾಗುವುದಿಲ್ಲ. ಆದರೆ ಕೆಲವರಿಗೆ ಈ ಸ್ಟ್ರೆಚ್ ಮಾರ್ಕ್ಸ್ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ, ಆದರೆ ಸೂಕ್ತ ಸಮಯದಲ್ಲಿ ಇದರತ್ತ ಗಮನ ಹರಿಸಿದರೆ ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟಬಹುದು.

ಯಾವಾಗ ಸ್ಟ್ರೆಚ್ ಮಾರ್ಕ್ ಬೀಳುತ್ತದೆ:
ಎರಡನೇ ತ್ರೈಮಾಸಿಕದಿಂದ ಸ್ಟ್ರೆಚ್ಮಾರ್ಕ್ಸ್ ಬೀಳಲಾರಂಭಿಸುತ್ತದೆ, ಯಾವಾಗ ಹೊಟ್ಟೆ ಹೊರಗಡೆಗೆ ಕಾಣಲಾರಂಭಿಸುವುದೋ ಆಗ ಸ್ಟ್ರೆಚ್ ಮಾರ್ಕ್ಸ್ ಕೂಡ ಕಂಡು ಬರುತ್ತದೆ, ಸಾಮಾನ್ಯವಾಗಿ ಈ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆ 6ನೇ ಅಥವಾ 7ನೇ ತಿಂಗಳಿನಲ್ಲಿ ಕಂಡು ಬರುತ್ತದೆ.

ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟುವುದು ಹೇಗೆ? 

ಮೈ ತೂಕದ ಕಡೆ ಗಮನ ಕೊಡಿ:
ಗರ್ಭಿಣಿಯಾಗಿದ್ದಾಗ ಮೈ ತೂಕ ಹೆಚ್ಚುವುದು ಸಹಜ, ಆದರೆ ತುಂಬಾ ಮೈ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ, ಗರ್ಭಿಣಿಯರು ಮಾಡಬಹುದಾದ ವ್ಯಾಯಾಮ ಮಾಡಿ, ಜಂಕ್ ಫುಡ್ಸ್ ತಿನ್ನಬೇಡಿ, ಪೋಷಕಾಂಶವಿರುವ ಆಹಾರವನ್ನು ಸೇವಿಸಿ. 

ಸಾಕಷ್ಟು ನೀರು ಕುಡಿಯಿರಿ:
ಗರ್ಭಾವಸ್ಥೆಯಲ್ಲಿ ಸಾಕಷ್ಟು ನೀರು ಕುಡಿಯಿರಿ. ಜ್ಯೂಸ್ ತಗೆದುಕೊಳ್ಳಿ. ವಿಟಮಿನ್ ಅ, ವಿಟಮಿನ್ ಸಿ, ವಿಟಮಿನ್ ಇ, ಸತು ಈ ಪೋಷಕಾಂಶಗಳಿರುವ ಆಹಾರ ಸೇವಿಸಿ.

ಸ್ಟ್ರೆಚ್ ಮಾರ್ಕ್ಸ್ಗೆ ಚಿಕಿತ್ಸೆಯೇನು?
ಹೈಲುರಾನಿಕ್ ಆಮ್ಲ , ಟ್ರೋಫೋಲಾಸ್ಟಿನ್  ಮತ್ತು ಟ್ರೆಟಿನೋಯಿನ್ ಇವುಗಳು ಸ್ಟ್ರೆಚ್ಮಾರ್ಕ್ಸ್ ಹೋಗಲಾಡಿಸಲು ಸಹಾಯ ಮಾಡುತ್ತೆ. ಇವುಗಳನ್ನು ಹಚ್ಚಿದಾಗ ಸ್ಟ್ರೆಚ್ ಮಾರ್ಕ್ಸ್ ನಿಧಾನಕ್ಕೆ ಮಾಯವಾಗುವುದು. ಈ ಕ್ರೀಮ್ಗಳಿಂದ 6 ತಿಂಗಳು ಮಸಾಜ್ ಮಾಡಿದರೆ ಕಲೆ ಸ್ವಲ್ಪ ಕಡಿಮೆಯಾಗುವುದು.

ಲೋಷನ್ ಮತ್ತು ಎಣ್ಣೆ:
ವಿಟಮಿನ್ ಇ ಇರುವ ಕ್ರೀಮ್ ಅಥವಾ ಲೋಷನ್ ಹಚ್ಚುವುದರಿಂದ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು. ತ್ವಚೆಗೆ ಕೋಕಾ ಬಟರ್, ಬಯೋ ಆಯಿಲ್, ಆಲೀವ್ ಆಯಿಲ್ ಇವುಗಳನ್ನು ಹಚ್ಚುವುದರಿಂದ ನಿಧಾನಕ್ಕೆ ಸ್ಟ್ರೆಚ್ ಮಾರ್ಕ್ಸ್ ಕಲೆ ಕಡಿಮೆಯಾಗುವುದು. 

ವೈದ್ಯಕೀಯ ವಿಧಾನ:
ಸ್ಟ್ರೆಚ್ ಮಾರ್ಕ್ಸ್ ಕಲೆಯನ್ನು ಲೇಸರ್ ಥೆರಪಿ, ಮೈಕ್ರೋನೀಡಲ್ಲಿಂಗ್, ರೇಡಿಯೋ ಫ್ರೀಕೆನ್ಸಿ ಮುಂತಾದವುಗಳಿಂದ ಸ್ಟ್ರೆಚ್ ಮಾರ್ಕ್ಸ್ ಕಲೆ ಕಡಿಮೆಯಾಗುವುದು.

ಸ್ಟ್ರೆಚ್ ಮಾರ್ಕ್ಸ್ಗೆ ಆರಂಭದ ಚಿಕಿತ್ಸೆ:
ಸ್ಟ್ರೆಚ್ ಮಾರ್ಕ್ಸ್ ಬೀಳುವಾಗಲೇ ಅದರತ್ತ ಗಮನ ಹರಸಿದರೆ ತುಂಬಾ ಕಲೆ ಬೀಳುವುದು ತಡೆಗಟ್ಟಬಹುದು.

ಸ್ಟ್ರೆಚ್ ಮಾರ್ಕ್ಸ್ ಯಾವಾಗ ಹೋಗುತ್ತೆ?
ಸ್ಟ್ರೆಚ್ ಮಾರ್ಕ್ಸ್ ಸಂಪೂರ್ಣವಾಗಿ ಹೋಗಲ್ಲ, ಆದರೆ ಅದು ಎದ್ದು ಕಾಣುವುದನ್ನು ತಡೆಗಟ್ಟಬಹುದು. 

ಯಾರಿಗೆ ಸ್ಟ್ರೆಚ್ ಮಾರ್ಕ್ಸ್ ಬರುವ ಸಾಧ್ಯತೆ ಹೆಚ್ಚು?
ಗರ್ಭಾವಸ್ಥೆಯಲ್ಲಿ ಯಾರ ಮೈ ತೂಕ ತುಂಬಾ ಹೆಚ್ಚಾಗುವುದೋ ಅವರಿಗೆ ಸ್ಟ್ರೆಚ್ ಮಾರ್ಕ್ಸ್ ತುಂಬಾ ಬೀಳುವುದು. 

ತೆಂಗಿನೆಣ್ಣೆ ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟುವುದೇ? 
ತೆಂಗಿನೆಣ್ಣೆ ಉರಿಯೂತ, ತುರಿಕೆ ಕಡಿಮೆ ಮಾಡುವುದು,ಆದರೆ ಸ್ಟ್ರೆಚ್ ಮಾರ್ಕ್ಸ್ ಸಂಪೂರ್ಣ ಹೋಗುತ್ತೆ ಎಂಬವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. 

ಪ್ರಮುಖ ಅಂಶಗಳು:

 * ಸ್ಕಿನ್ ಸ್ಟ್ರೆಚ್ ಆದಾಗ ಸ್ಟ್ರೆಚ್ ಮಾರ್ಕ್ಸ್ ಉಂಟಾಗುವುದ 

* ಕೆಲವರಿಗೆ ಬೇಗನೆ ಸ್ಟ್ರೆಚ್ ಮಾರ್ಕ್ಸ್ ಕಂಡು ಬಂದರೆ ಇನ್ನು ಕೆಲವರಿಗೆ ಮೂರನೇ ತ್ರೈಮಾಸಿಕದಲ್ಲಿ ಕಂಡು ಬರಬಹುದು 

* ಪೋಷಕಾಂಶಗಳಿರುವ ಆಹಾರ ಸೇವನೆ, ವ್ಯಾಯಾಮ, ತ್ವಚೆ ಆರೈಕೆ ಮೂಲಕ ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟಬಹುದು 

* ವಿಟಮಿನ್ ಇ ಆಯಿಲ್, ಆಲೀವ್ ಆಯಿಲ್, ಬಯೋ ಆಯಿಲ್ ಇವುಗಳು ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಸಹಾಯ ಮಾಡುತ್ತೆ.