ಇನ್ನು ನೀವು ವಿಟಮಿನ್ ಕೆ 2 ಬಗ್ಗೆ ಕೇಳಿದ್ದೀರಾ? ನಮ್ಮ ದೇಹಕ್ಕೆ ಅತ್ಯಂತ ಮುಖ್ಯವಾದ ವಿಟಮಿನ್ ಇದು. ಈ ವಿಟಮಿನ್ ಕೊರತೆಯಿಂದಾಗಿ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ವಿಟಮಿನ್ ಕೆ 2 ಕೊರತೆಯಾಗದಂತೆ ಯಾವ ಆಹಾರ ಸೇವಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಿಟಮಿನ್ ಕೆ 2 ಹೆಚ್ಚಾಗಿ ಮಾಂಸದಲ್ಲಿ ಕಂಡುಬರುವ ವಿಟಮಿನ್ ಹಾಗಂತ ಇದೇನು ಸಸ್ಯಹಾರಿ ಆಹಾರದಲ್ಲಿ ಕಂಡುಬರುವುದಿಲ್ಲ ಎಂದಿಲ್ಲ. ಸೊಪ್ಪು, ಹಣ್ಣಿನಲ್ಲಿ ವಿಟಮಿನ್ ಕೆ 2 ಸಿಗಲಿದೆ. ಆದರೆ ಮಾಂಸದಲ್ಲಿ ಅತೀ ಹೆಚ್ಚು ಪ್ರಮಾಣದ ವಿಟಮಿನ್ ಲಭ್ಯವಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನವೊಂದಕ್ಕೆ 120 ಎಂಸಿಜಿ ವಿಟಮಿನ್ ಕೆ ಅಗತ್ಯವಿರುತ್ತದೆ ಮತ್ತು ಮಹಿಳೆಗೆ ಪ್ರತಿದಿನ 90 ಎಂಸಿಜಿ ವಿಟಮಿನ್ ಕೆ ಬೇಕಾಗುತ್ತದೆ. ಪ್ರಮಾಣವು ಇದಕ್ಕಿಂತ ಕಡಿಮೆಯಿದ್ದರೆ, ಅದು ದೇಹದಲ್ಲಿ ಕೊರತೆಗೆ ಕಾರಣವಾಗಬಹುದು, ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.
ಮೂಳೆಗಳ ಬೆಳವಣಿಗೆ ಮೇಲೆ ವಿಟಮಿನ್ ಕೆ ಪ್ರಭಾವ:
ವಿಟಮಿನ್ ಕೆ 2 ಮುಖ್ಯವಾಗಿ ಮೂಳೆಗಳ ಬೆಳವಣಿಗೆಗೆ ಕಾರಣವಾಗಿದೆ. ಅಂದರೆ ಮೂಳೆಗಳ ಬೆಳವಣಿಗೆಗೆ ಬೇಕಾಗಿರುವ ಕ್ಯಾಲ್ಸಿಯಂ ಅನ್ನು ವಿಟಮಿನ್ ಕೆ ನೀಡಲಿದೆ. ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶ ವ್ಯರ್ಥವಾಗದಂತೆ ಮೂಳೆಗಳ ಬೆಳವಣಿಗೆಯಲ್ಲಿ ಸಹಾಯಕವಾಗುವಂತೆ ದೇಹದಲ್ಲೇ ಕ್ಯಾಲ್ಸಿಯಂ ಉಳಿಯುವಂತೆ ನೋಡಿಕೊಳ್ಳುವ ಕೆಲಸ ವಿಟಮಿನ್ ಕೆ 2 ಮಾಡಲಿದೆ. ಹೀಗಾಗಿ ಇದು ದೇಹಕ್ಕೆ ಬಹಳ ಮುಖ್ಯವಾದ ವಿಟಮಿನ್ ಎನಿಸಿದೆ. ಮಕ್ಕಳಿಗೆ ಈ ವಿಟಮಿನ್ ಇರುವ ಆಹಾರ ನೀಡುವುದರಿಂದ ಅವರಲ್ಲಿ ಮೂಳೆಗಳ ಬೆಳವಣಿಗೆ ಸಕಾಲದಲ್ಲಿ ಆಗಲು ಸಹಾಯವಾಗುತ್ತದೆ.
ಹಲ್ಲಿನ ಆರೋಗ್ಯಕ್ಕೆ ಪ್ರಯೋಜನಕಾರಿ:
ಮೇಲೆಯೇ ಹೇಳಿರುವಂತೆ ವಿಟಮಿನ್ ಕೆ 2 ಕ್ಯಾಲ್ಸಿಯಂನ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಮೂಳೆಗಳು ಮಾತ್ರವಲ್ಲ ಇದು ನಮ್ಮ ಹಲ್ಲುಗಳ ಆರೋಗ್ಯಕ್ಕೂ ಬಹಳ ಉತ್ತಮ. ಹಲ್ಲುಗಳ ಬೆಳವಣಿಗೆ, ಶಕ್ತಿಶಾಲಿ ಹಲ್ಲುಗಳ ಹೊಂದಲು ಕ್ಯಾಲ್ಸಿಯಂ ಸಹ ಅಗತ್ಯವಾಗಿರುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತದೆ:
ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುವುದರಿಂದ ಹೃದಯರಕ್ತನಾಳದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ವಿಟಮಿನ್ ಕೆ 2 ಇದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಅನ್ನು ಸಂಗ್ರಹಿಸಲು ಬಿಡದೆ ಇರುವುದು ನಮ್ಮ ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡಲಿದೆ.
ರಕ್ತ ಹೆಪ್ಪುಗಟ್ಟುವಿಕೆಗೆ ವಿಟಮಿನ್ ಸಹಕಾರಿ:
ನಮ್ಮ ದೇಹಕ್ಕೆ ಸಣ್ಣ ಪುಟ್ಟ ಗಾಯಗಳಾದಾಗ ರಕ್ತ ಹೊರಬರುತ್ತದೆ, ಒಂದು ವೇಳೆ ನಿಮಗೆ ಗಾಯವಾದಾಗ ತಕ್ಷಣ ರಕ್ತ ಹೆಪ್ಪುಗಟ್ಟಬೇಕಾದರೆ ನಿಮ್ಮಲ್ಲಿ ವಿಟಮಿನ್ ಕೆ 2 ಅಗತ್ಯವಾಗಿ ಬೇಕಾಗುತ್ತದೆ. ಈ ವಿಟಮಿನ್ ಕೊರತೆಯಾಗಿದ್ದರೆ ನಿಮ್ಮ ದೇಹಕ್ಕೆ ಗಾಯವಾದಾಗ ರಕ್ತ ಹೆಪ್ಪುಗಟ್ಟುವುದು ತಡವಾಗುತ್ತದೆ.
ಈ ವಿಟಮಿನ್ ಕೆ 2 ಯಾವ ಆಹಾರದಲ್ಲಿ ಹೆಚ್ಚಾಗಿರುತ್ತದೆ.
ಎಲೆಕೋಸು
ಪಾಲಕ್
ಬ್ರೋಕೋಲಿ
ಹರುವೆ ಸೊಪ್ಪು
ಬ್ರಸೆಲ್ಸ್
ಮೊಗ್ಗುಗಳು
ಈರುಳ್ಳಿ
ಕೊತ್ತಂಬರಿ
ಸೊಪ್ಪು
ಸಬ್ಬಸಿಗೆ ಸೊಪ್ಪು
ಬೀನ್ಸ್
ಮೊಟ್ಟೆ
ಮಾಂಸ
ಮೀನು