ನೀವು ಗಡಿಬಿಡಿಯಲ್ಲಿ ಚಿತ್ರಾನ್ನ ಮಾಡುವ ಬದಲು ಐದು ನಿಮಿಷದಲ್ಲಿ ಬೆಳ್ಳುಳ್ಳಿ ರೈಸ್ ರೆಡಿ ಮಾಡಿ.


ಬೆಳಗ್ಗೆ ಎದ್ದು ಇವತ್ತಿನ ತಿಂಡಿಗೆ ಏನು ಮಾಡಬೇಕು ಎಂದು ಮಹಿಳೆಯರು ಯೋಜಿಸುತ್ತಾರೆ. ಹೀಗಾಗಿ ಮಹಿಳೆಯರು ಹಿಂದಿನ ದಿನ ರಾತ್ರಿಯೇ ನಾಳೆ ಯಾವ ತಿಂಡಿ ಮಾಡಬೇಕು ಎಂಬುದನ್ನು ನಿರ್ಧರಿಸಿರುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಯೂ ನಡೆದಿರುತ್ತದೆ. ಆದರೆ ಬೆಳಗ್ಗೆ ಎದ್ದಾಗ ನೀವು ಅಂದುಕೊಂಡಿರುವ ತಿಂಡಿ ಮಾಡಲು ಆಗದಿದ್ದರೆ ನೀವು ಏನು ಮಾಡುತ್ತೀರಿ ಎಂದು ಈ ರೀತಿ ಹಲವು ಬಾರಿ ನಿಮಗೂ ಆಗಿರಬಹುದು. 

ಕೆಲವೊಮ್ಮೆ ನಿಮ್ಮ ತಯಾರಿಯಲ್ಲ ಹಾಳಾಗಬಹುದು. ಆದರೆ ತಿಂಡಿ ಮಾಡುವುದನ್ನು ನಿಲ್ಲಿಸಲು ಆಗಲ್ಲ. ಹಾಗಾದ್ರೆ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡುವುದು. ಯಾವ ತಿಂಡಿ ಮಾಡಬಹುದು? ಹೆಚ್ಚೆಂದರೆ ಗಡಿಬಿಡಿಯಲ್ಲಿ ನೀವು ಚಿತ್ರಾನ್ನ ಮಾಡಬಹುದು. ಆದರೆ ನಾವಿಂದು ಗಡಿಬಿಡಿಗೆ ಚಿತ್ರಾನ್ನಕ್ಕಿಂತ ಅದ್ಭುತ ರುಚಿಯ ಸುಲಭ ರೆಸಿಪಿ ಹೇಳುತ್ತೇವೆ ನೋಡಿ.

ಹೌದು ಬೆಳಗ್ಗೆಯ ತಿಂಡಿಗೆ ನೀವು ಬೆಳ್ಳುಳ್ಳಿ ರೈಸ್ ಮಾಡಿ. ಈ ಬೆಳ್ಳುಳ್ಳಿ ರೈಸ್ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಅದರಲ್ಲು ಜ್ವರ, ಶೀತ, ಕೆಮ್ಮು ಇದಕ್ಕೆಲ್ಲ ಬೆಳ್ಳುಳ್ಳಿ ಒಂತರ ಮನೆ ಮದ್ದು, ಹೀಗಾಗಿ ಆರೋಗ್ಯದ ದೃಷ್ಟಿಯಿಂದಲೂ ಈ ತಿಂಡಿ ಬಹಳ ಒಳ್ಳೆಯದು. 

ಹಾಗಾದ್ರೆ ಈ ಬೆಳ್ಳುಳ್ಳಿ ರೈಸ್ ಮಾಡುವುದು ಹೇಗೆ? ಬೆಳ್ಳುಳ್ಳಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿ:

ಅನ್ನ - ಅರ್ಧ ಬೌಲ್ 

ಮೆಣಸಿನಕಾಯಿ -3

ಸಾಸಿವೆ- 1 

ಚಮಚ ಜೀರಿಗೆ- 1 

ಚಮಚ ಬೆಳ್ಳುಳ್ಳಿ- 1 ದೊಡ್ಡದು 

ಅರಶಿಣ ಪುಡಿ- 1 ಚಮಚ

ಕರಿಬೇವು ಎಣ್ಣೆ

ತುಪ್ಪ 

ಉಪ್ಪು

ಬೆಳ್ಳುಳ್ಳಿ ರೈಸ್ ಮಾಡುವ ವಿಧಾನ: 

ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಇಲ್ಲವೆ ತುಪ್ಪ ಹಾಕಿ. ಅದಕ್ಕೆ ಸಾಸಿವೆ ಹಾಕಿ, ಬಳಿಕ ಬೆಳ್ಳಿಯನ್ನು ಗುದ್ದಿಕೊಂಡು ಹಾಕಿ. ಜೊತೆಗೆ ಒಣ ಮೆಣಸು ಹಾಕಿ ಇದೆಲ್ಲಾ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ. ಬಳಿಕ ಇದಕ್ಕೆ ಖಾರ ಜಾಸ್ತಿ ಬೇಕಿದ್ದರೆ ಮೆಣಸಿನ ಪುಡಿ ಬೇಕಾದರೆ ಸ್ವಲ್ಪ ಹಾಕಿ. ಇದಕ್ಕೆ ಅರಶಿಣ ಪುಡಿ ಸಹ ಹಾಕಿಕೊಳ್ಳಿ. ಬಳಿಕ ಹುಡಿ ಹುಡಿಯಾದ ಅನ್ನವನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅನ್ನ ಹಾಕಿದ ಮೇಲೆ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಬೆಳ್ಳುಳ್ಳಿ ರೈಸ್ ರೆಡಿಯಾಗುತ್ತದೆ. ಮೂರ್ನಾಲ್ಕು ವಸ್ತು ಬಳಸಿ ಈ ರೈಸ್ ಮಾಡಬಹುದು.

ಇದನ್ನು ಬೆಳಗ್ಗೆ ತಿಂಡಿಗೆ ಸಂಜೆ ಊಟಕ್ಕೂ ಮಾಡಬಹುದು ಅಷ್ಟೇ ಏಕೆ ಮಧ್ಯಾಹ್ನದ ಬಾಕ್ಸ್ಗೂ ಈ ರೈಸ್ ಸವಿಯಬಹುದು. ಬೆಳಗ್ಗೆ ಗಡಿಬಿಡಿಯಲ್ಲಿ ತಿಂಡಿ ಮಾಡಲು ಮುಂದಾಗುವುದಾದರೆ ಇದು ಒಳ್ಳೆಯ ಆಯ್ಕೆ, ಚಿತ್ರಾನ್ನ, ಪುಳಿಯೋಗರೆಗಿಂತಲೂ ರುಚಿ ಹೆಚ್ಚು ಜೊತೆಗೆ ಮಾಡೋದು ಸಹ ತುಂಬಾನೆ ಸುಲಭ. ಮನೆ ಮಂದಿಯಲ್ಲ ಕುಳಿತು ಈ ರೈಸ್ ಸವಿಯಬಹುದು. ಮಕ್ಕಳಿಗೂ ಇದರ ರುಚಿ ಇಷ್ಟವಾಗಲಿದೆ.