ಯಾವುದೇ ಮಸಾಲೆ ಬಳಸದೇ ಬ್ಯಾಚುಲರ್ ಪಲ್ಯ ಮಾಡಿ ನೋಡಿ.

ಒಮ್ಮೊಮ್ಮೆ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡಪ್ಪ ಅನ್ನಿಸುತ್ತದೆ. ಯಾಕಂದ್ರೆ ನಗರ ಪ್ರದೇಶದಲ್ಲಿ ಇದ್ರೆ ಪಿಜಿ ಅಥವಾ ಹೋಟೆಲ್ ಆಹಾರವನ್ನೇ ನಿತ್ಯವೂ ಸೇವಿಸಬೇಕು. ಅತಿಯಾದ ಖಾರಾ, ಅತಿಯಾದ ಮಸಾಲೆ ಹಾಕಿನೇ ಅಡುಗೆ ಮಾಡುತ್ತಾರೆ. ಇದರಿಂದ ಸಾಕಷ್ಟು ಯುವಕರು ಕೂಡ ಆರೋಗ್ಯ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. 

ಹಾಗಾಗಿ ನೀವೇ ಒಂದು ಸಣ್ಣ ರೂಮ್ ಮಾಡ್ಕೊಂದು ಇದ್ರೆ ನೀವೇ ನಿಮ್ಮ ಕೈಯಾರ ಅಡುಗೆ ಮಾಡ್ಕೊಂಡು ತಿನ್ನಬಹುದು. ಸಾಕಷ್ಟು ಸರಳವಾದ ರೆಸಿಪಿಗಳು ಇರೋದ್ರಿಂದ ಇದಕ್ಕೆ ಹೆಚ್ಚು ಸಮಯವೂ ಬೇಕಾಗಲ್ಲ. ಹಾಗಾದ್ರೆ ಬನ್ನಿ ಸುಲಭವಾಗಿ ಕೇವಲ ಎರಡು ನಿಮಿಷಗಳಲ್ಲಿ ಥಟ್ ಅಂತ ಮಾಡಬಹುದಾದ ಬ್ಯಾಚುಲರ್ ಪಲ್ಯ ರೆಸಿಪಿ ನೋಡೋಣ!

ಮಸಾಲೆ ಹಾಕದೆ ತಯಾರಿಸಿ ಫ್ಲವರ್ ಪಲ್ಯ! 

ಈಗಂತೂ ಕಲರ್ ಹಾಕಿದ ಗೋಬಿ ಮಂಚೂರಿ ತಿನ್ನುವ ಹಾಗಿಲ್ಲ. ಆದರೆ ನೀವು ಹೂಕೋಸು ಬಳಸಿ ಗರಿಗರಿಯಾಗಿ ಅಥವಾ ಸಾಫ್ಟ್ ಆಗಿ ಇರುವ ಪಲ್ಯ ರೆಡಿ ಮಾಡ್ಕೊಂಡು ತಿನ್ನಬಹುದು. ಇದು ಮಾಡೋದಕ್ಕೆ ಕೇವಲ ಎರಡು ನಿಮಿಷ, ಕೆಲವೇ ಕೆಲವು ವಸ್ತುಗಳು ಸಾಕು. 

ಮಸಾಲೆ ಇಲ್ಲದ ಹೂಕೋಸ್ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು! 

ಹೂಕೋಸ್ – ಒಂದು

ಈರುಳ್ಳಿ - ಒಂದು ಮಾಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ) 

ಎಣ್ಣೆ- ಹೂಕೋಸ್ ಬೇಯಿಸಲು

ಒಗ್ಗರಣೆಗೆ 

ಒಂದು ಟೇಬಲ್ ಸ್ಪೂನ್ ನಷ್ಟು ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಸಾಸಿವೆ

ಅರಿಶಿಣ ಚಿಟಿಕೆಯಷ್ಟು

ಅಚ್ಚಖಾರದ ಪುಡಿ - ನಿಮಗೆ ಅಗತ್ಯ ಇರುವ ಖಾರ 

ಉಪ್ಪು - ರುಚಿಗೆ ತಕ್ಕಷ್ಟು ಮಸಾಲೆ. 

ಹೂಕೋಸ್ ಪಲ್ಯ ಮಾಡುವ ವಿಧಾನ!

ಮೊದಲಿಗೆ ಹೂಕೋಸ್ ಅನ್ನು ಬಿಡಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ನೆನೆಸಿಡಿ. ಯಾವುದೇ ಕ್ರಿಮಿಕೀಟಗಳು ಇದ್ದರೂ ಹೊರಟು ಹೋಗುತ್ತೆ. ಈಗ ಒಂದು ಬಾಣಲೆಗೆ 2 ರಿಂದ 3 ದೊಡ್ಡ ಚಮಚ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದ ಹಾಗೆ, ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಕಿ ಉರಿದುಕೊಳ್ಳಿ. ಈ ಒಗ್ಗರಣೆ ವಸ್ತುಗಳು ಸ್ವಲ್ಪ ಬಣ್ಣ ಬದಲಾಯಿಸಿದ ನಂತರ ಅಥವಾ ಸಾಸಿವೆ ಚಟಪಟ ಅಂದ ತಕ್ಷಣ ಬಾಣಲೆಗೆ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ.

ಅಗತ್ಯ ಇದ್ದಲ್ಲಿ ಕರಿಬೇವನ್ನು ಸೇರಿಸಿಕೊಳ್ಳಬಹುದು. ಈರುಳ್ಳಿ ಬಣ್ಣ ಬದಲಾದ ನಂತರ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿದುಕೊಂಡು, ಅದಕ್ಕೆ ಈಗ ತೊಳೆದು ಇಟ್ಟುಕೊಂಡ ಫೋಕೋಸ್ ಅಥವಾ ಗೋಬಿ ಹಾಕಿ. ಎರಡು ನಿಮಿಷ ಹಾಗೆಯೇ ಬಿಟ್ಟು ನಂತರ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ. ಗೋಬಿ ಬೇಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ನೀವು ಬಾಣಲೆ ಮುಚ್ಚಿಟ್ಟರೆ ಬೇಗ ಬೇಯಿಸಿಕೊಳ್ಳಬಹುದು. 

ಗೋಬಿ ಬೇಯುವ ಹಂತದಲ್ಲಿ ಅದಕ್ಕೆ ಚಿಟಿಕೆ ಅರಿಶಿಣ ಹಾಗೂ ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಅಚ್ಚಖಾರದ ಪುಡಿಯನ್ನು ಸೇರಿಸಿ. ಈಗ ಚೆನ್ನಾಗಿ ಫ್ರೈ ಮಾಡಿ. ನೀರನ್ನು ಹಾಕಿಕೊಳ್ಳದೆ ಎಣ್ಣೆಯಲ್ಲಿಯೇ ಫ್ರೈ ಮಾಡಿದರೆ ಈ ಪಲ್ಯದ ರುಚಿ ಹೆಚ್ಚು. ಇಷ್ಟು ಮಾಡಿದ್ರೆ ರುಚಿಕರವಾದ ಗೋಬಿ ಅಥವಾ ಹೂಕೋಸ್ ಪಲ್ಯ ಸವಿಯಲು ಸಿದ್ಧ. ಬಿಸಿ ಬಿಸಿ ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಸವಿಯಲು ಅದ್ಭುತವಾದ ಕಾಂಬಿನೇಷನ್ ಇದಾಗಿದೆ. ಅಂದಹಾಗೆ ನೀವು ಲಂಚ್ ಬಾಕ್ಸ್ ಗೆ ಸೈಡ್ ಡಿಶ್ ಆಗಿಯೂ ಕೂಡ ಇದನ್ನು ಸೇವಿಸಬಹುದು.