ಮುಟ್ಟಿನ ಸಮಯದಲ್ಲಿ ಮಹಿಳೆಯರು ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಆದರೆ ಹೆಚ್ಚಿನ ಮಹಿಳೆಯರು ವ್ಯಾಯಾಮಗಳಿಂದ ದೂರ ಇರುತ್ತಾರೆ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಕುಂಠಿತ ಮಟ್ಟದಲ್ಲಿರುತ್ತದೆ.
ಮುಟ್ಟು ಎಂಬುದು ಮಹಿಳೆಯರಲ್ಲಿ ಕಂಡು ಬರುವ ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ಮೂರು-ನಾಲ್ಕು ದಿನಗಳ ಕಾಲ ಮಹಿಳೆಯರಲ್ಲಿ ಮುಟ್ಟು ಕಂಡು ಬರುತ್ತದೆ. ಈ ವೇಳೆ ಅನೇಕರು ನರಕಯಾತನೆ ಅನುಭವಿಸುತ್ತಾರೆ. ಏಕೆಂದರೆ ಋತುಚಕ್ರದ ವೇಳೆ ಕೆಲವರಲ್ಲಿ ಹೊಟ್ಟೆ ನೋವು, ಸೊಂಟ ನೋವು, ಕಾಲು ನೋವು, ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಕುಗ್ಗಿರುತ್ತಾರೆ.
ಆದರೆ ಮುಟ್ಟಿನ ವೇಳೆ ಇಂತಹ ನೋವು ಹೆಚ್ಚಾಗಲು ಒಂದು ಕಾರಣ ನಮ್ಮ ಆಧುನಿಕ ಜೀವನ ಶೈಲಿ. ಏಕೆಂದರೆ ಆಹಾರವೇ ಆರೋಗ್ಯ. ನಾವು ತಿನ್ನುವ ಆಹಾರಾಭ್ಯಾಸಗಳು ಋತುಚಕ್ರದ ವೇಳೆ ಬಾಧಿಸುತ್ತದೆ.
ಸಾಮಾನ್ಯವಾಗಿ ಮುಟ್ಟಿನ ನೋವು ಹೆಚ್ಚಾಗಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ಇದಕ್ಕೆ ಕಾರಣವಾಗುವ ಅಂಶಗಳಾವುವು ಎಂದರೆ.
ನಿದ್ರೆಯ ಕೊರತೆ:
ದೇಹದಲ್ಲಿ ಹಾರ್ಮೋನುಗಳು ಸಮತೋಲನದಿಂದ ಇರಬೇಕಿದ್ರೆ ಚೆನ್ನಾಗಿ ನಿದ್ರೆ ಮಾಡಬೇಕು. ಒಂದು ವೇಳೆ ಮಹಿಳೆಯರು ಚೆನ್ನಾಗಿ ನಿದ್ರಿಸದಿದ್ರೆ ಮುಟ್ಟಿನ ವೇಳೆ ನೋವು ಹೆಚ್ಚಾಗುತ್ತದೆ.
ಉಪ್ಪು-ಸಿಹಿ ಆಹಾರ:
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ ಉರಿಯೂತದ ಸಮಸ್ಯೆ ಕಾಡುತ್ತಿರುತ್ತದೆ. ಹಾಗೆಯೇ ಉಪ್ಪನ್ನು ಅಧಿಕವಾಗಿ ಸೇವಿಸುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಋತುಚಕ್ರದ ವೇಳೆ ಸಿಹಿ ಮತ್ತು ಉಪ್ಪಿನ ಆಹಾರಗಳಿಂದ ದೂರವಿರುವುದು ಉತ್ತಮ. ಇದು ಕೂಡ ನೋವನ್ನು ಹೆಚ್ಚಿಸುತ್ತದೆ.
ಮದ್ಯ ಪಾನ ಹಾಗೂ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದು ಮಹಿಳೆಯರಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಏಕೆಂದರೆ ಮದ್ಯಪಾನ-ಧೂಮಪಾನ ಮಾಡುವ ಮಹಿಳೆಯರಲ್ಲಿ ಮುಟ್ಟಿನ ವೇಳೆ ನೋವು ಹೆಚ್ಚಾಗಿರುತ್ತದೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಕಾಫಿ ಅಭ್ಯಾಸ:
ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಸಹ ಋತುಚಕ್ರದ ವೇಳೆ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಕಾಫಿಯಲ್ಲಿರುವ ಕೆಫೆನ್. ಅಂದರೆ ಕಾಫಿ ಕುಡಿದ್ರೆ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿರುತ್ತೇವೆ. ಇದರಿಂದ ರಕ್ತನಾಳ ಕಿರಿದಾಗಿ ಮುಟ್ಟಿನ ವೇಳೆ ನೋವು ಹೆಚ್ಚಾಗುತ್ತದೆ.
ವ್ಯಾಯಾಮ:
ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ. ಆದರೆ ಹೆಚ್ಚಿನ ಮಹಿಳೆಯರು ವ್ಯಾಯಾಮಗಳಿಂದ ದೂರ ಇರುತ್ತಾರೆ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಕುಂಠಿತ ಮಟ್ಟದಲ್ಲಿರುತ್ತದೆ. ಋತುಚಕ್ರದ ವೇಳೆ ಕೂಡ ಹೆಚ್ಚು ಮಲಗುವುದಿಂದ ನೋವಿನ ಸಮಸ್ಯೆ ಇನ್ನಷ್ಟು ಕಾಡುತ್ತದೆ.