ಡಿಫರೆಂಟ್ ರುಚಿಯ ಬಗಾರ ರೈಸ್ ಮಾಡಿ ನೋಡಿ!

ನೀವು ರೈಸ್ ಮೂಲಕ ಎಷ್ಟೆಲ್ಲಾ ಖಾದ್ಯ ಮಾಡಿ ಸವಿಯುತ್ತೀರಿ. ಪಲಾವ್, ಬಿರಿಯಾನಿ, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಹೀಗೆ ಹತ್ತಾರು ಖಾದ್ಯವನ್ನ ರೈಸ್ನಿಂದ ಮಾಡಬಹುದು. ಜೊತೆಗೆ ಒಂದಿಷ್ಟು ಫಾಸ್ಟ್ ಫುಡ್ ಸಹ ರೈಸ್ನಿಂದ ಮಾಡಬಹುದು. ಇದರ ಜೊತೆ ನೀವೆಂದು ಕೇಳಿರದ ಒಂದಿಷ್ಟು ಖಾದ್ಯಗಳೂ ಸಹ ಇವೆ.

ಬಗಾರ ರೈಸ್ ರೆಸಿಪಿ ಹೆಸರು ಎಂದಾದ್ರು ಕೇಳಿದ್ದೀರಾ? ರೈಸ್ ನಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ಖಾದ್ಯ ಅಂದ್ರೆ ಅದು ಬಗಾರ ರೈಸ್, ಐಷಾರಾಮಿ ಹೋಟೆಲ್ಗಳು, ದೊಡ್ಡ ದೊಡ್ಡ ಮಾಲ್ನಲ್ಲಿ ಸಿಗುವ ಫುಡ್ ಸ್ಟಾಲ್ಗಳಲ್ಲಿ ಈ ಬಗಾರ ರೈಸ್ ನೋಡಲು ಸಿಗುತ್ತದೆ. ಒಂದಿಷ್ಟು ಮಂದಿ ಇದನ್ನು ಮನೆಯಲ್ಲೂ ಮಾಡಿ ಸವಿದಿರಬಹುದು.

ಇದರ ಹೆಸರು ಹೇಳುವಂತೆ ಬಗಾರ ರೈಸ್ ಅಂದರೆ ರೈಸ್ ಬಾತ್ ರೆಸಿಪಿ ಎಂದರ್ಥ. ಹೆಚ್ಚಾಗಿ ಇದನ್ನು ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅತ್ಯಂತ ಫೇಮಸ್ ಆಗಿರುವ ಖಾದ್ಯ ಈ ಬಗಾರ ರೈಸ್ ಆಗಿದೆ. ರೈಸ್ನಲ್ಲಿ ಏನಾದ್ರು ಡಿಫರೆಂಟ್ ಆಗಿ ನೀವೇನಾದ್ರು ಮಾಡಬೇಕು ಅಂದುಕೊಂಡಿದ್ರೆ ಈ ರೈಸ್ ಮಾಡಿನೋಡಿ. ಹಾಗಾದ್ರೆ ನಾವಿಂದು ಈ ಬಗಾರ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬಗಾರ ರೈಸ್ ಮಾಡುವುದು ಹೇಗೆ? ಮಾಡುವ ಪಾಕ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.


ಬೇಕಾಗುವ ವಸ್ತುಗಳು:
ಬಾಸುಮತಿ ಅಕ್ಕಿ- ಅರ್ಧ ಕೆ.ಜಿ ಪಲಾವ್ ಎಲೆ - 2 ಒಂಕಾಳು- 1 ಲವಂಗ-5 ಚಕ್ರ ಮೊಗ್ಗು - 1 ದಾಲ್ಚಿನ್ನಿ - 2 ಪೀಸ್ ಏಲಕ್ಕಿ - 3 ಕರಿಮೆಣಸು - 1/4 ಟೀಸ್ಪೂನ್ ಈರುಳ್ಳಿ-2 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs ಹಸಿರು ಮೆಣಸಿನಕಾಯಿ - 6 ಕೊತ್ತಂಬರಿ ಸೊಪ್ಪು ಪುದೀನ ಎಲೆಗಳು - 2 ಟೀಸ್ಪೂನ್ ಟೊಮೆಟೊ - 1 ತುಪ್ಪ - 1 tbs ಅಡುಗೆ ಎಣ್ಣೆ ರುಚಿಗೆ ಉಪ್ಪು ಬಗಾರ ರೈಸ್ ಮಾಡುವ ವಿಧಾನ

ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿಕೊಳ್ಳಿ. ಬಳಿಕ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಜೀರಿಗೆ, ಲವಂಗ, ಚಕ್ರಮೊಗ್ಗು ಹಾಕಿಕೊಳ್ಳಿ. ಬಳಿಕ ಎರಡು ಈರುಳ್ಳಿ ಸ್ಲೈಸ್ ಮಾಡಿ ಅದಕ್ಕೆ ಹಾಕಿ. ಬಳಿಕ ಹಸಿ ಮೆಣಸಿನಕಾಯಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಸಹ ಹಾಕಿಕೊಂಡಿ ಫ್ರೈ ಮಾಡಿ, 2 ನಿಮಿಷದ ಬಳಿಕ ಟೊಮೆಟೋ ಹಾಕಿಕೊಳ್ಳಿ. 30 ಸೆಕೆಂಡ್ ಫ್ರೈ ಆದ ಬಳಿಕ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿಕೊಳ್ಳಿ. ಬಳಿಕ ಉಪ್ಪು ಹಾಕಿಕೊಂಡು ಮುಚ್ಚಳ ಮುಚ್ಚಿ ಕುದಿಯಲು ಬಿಡಿ.

ಇನ್ನೊಂದೆಡೆ ಒಂದು ಬೌಲ್ನಲ್ಲಿ ಅಕ್ಕಿಯನ್ನು ನೆನೆಯಲು ಇಟ್ಟುಕೊಳ್ಳಿ. ಇದೇ ಅಕ್ಕಿಯನ್ನು ಕುದಿಯುತ್ತಿರುವ ನೀರಿಗೆ ಹಾಕಿಕೊಳ್ಳಿ. ಒಂದು ಗ್ಲಾಸ್ ನೀರಿಗೆ ಎರಡು ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ಕುದಿಯಲು ಬಿಡಿ. 15 ನಿಮಿಷದಲ್ಲಿ ಅನ್ನ ಚೆನ್ನಾಗಿ ಬೆಂದಿರುತ್ತದೆ. ಇದನ್ನು ನೀವು ಕುಕ್ಕರ್ನಲ್ಲೂ ಮಾಡಬಹುದು. ಕುಕ್ಕರ್ನಲ್ಲಾದರೆ 2 ಸೀಟಿ ಹೊಡಿಸಿಕೊಳ್ಳಿ. ಇನ್ನೊಂದೆಡೆ ಇದನ್ನು ಸಾಮಾನ್ಯ ಅಕ್ಕಿ ಬಳಸಿಯೂ ನೀವು ಮಾಡಬಹುದು. ಇಷ್ಟಾದರೆ ನಿಮ್ಮ ಮುಂದೆ ಬಗಾರ ರೈಸ್ ಸವಿಯಲು ಸಿದ್ದವಾಗಿರುತ್ತದೆ. ತುಪ್ಪು ಹಾಗೂ ಬಿರಿಯಾನಿ ಮಸಾಲಗಳ ಹಾಕಿರುವುದರಿಂದ ಇದರ ರುಚಿಯೂ ಸಹ ಬೊಂಬಾಟ್ ಆಗಿರಲಿದೆ.