ಒಂದು ಸುಂದರ ರಿಲೇಷನ್ಶಿಪ್ನಲ್ಲಿ ಪ್ರೀತಿ, ನಿಯತ್ತು, ಗೌರವ ಹಾಗೂ ಹೊಂದಾಣಿಕೆ ಇದ್ದರೆ ಚಂದ. ಆದರೆ ಹೊಂದಾಣಿಕೆಯು ಕೂಡ ಒಂದು ಮಿತಿಯಲ್ಲಿ ಇರಬೇಕು. ಇಲ್ಲದಿದ್ದರೆ ಉಸಿರು ಕಟ್ಟಿದಂತಾಗುವುದು.
ಸಂಬಂಧದಲ್ಲಿ ಯಾವ ರೀತಿಯ ಹೊಂದಾಣಿಕೆ ಉಸಿರು ಕಟ್ಟಿಸಿದ ಅನುಭವ ಉಂಟು ಮಾಡುವುದು ಎಂದು ನೋಡೋಣ ಈ ಲೇಖನದಲ್ಲಿ ನೋಡೋಣ ಬನ್ನಿ:
1. ಸ್ನೇಹಿತರ ಸಮಯ ಕಳೆಯುವುದು ಸಂಗಾತಿಗೆ ಇಷ್ಟವಾಗದಿರುವುದು:
ಅವರು ನಿಮ್ಮನ್ನು ಎಷ್ಟೇ ಪ್ರೀತಿಸಲು ಆದರೆ ಸ್ನೇಹಿತರ ಜೊತೆ ಬೆರೆಯಬಾರದು, ಸದಾ ನನ್ನ ಜೊತೆಯೇ ಇರಬೇಕೆಂದು ಬಯಸಿದರೆ ಅವರ ಆ ಸ್ವಭಾವ ಖಂಡಿತ ಕಿರಿಕಿರಿ ಉಂಟು ಮಾಡುತ್ತದೆ. ಸ್ನೇಹಿತರ ಜೊತೆ ಸಮಯ ಕಳೆಯಲು ಭಯಪಡುವಂಥ ಪರಿಸ್ಥಿತಿ ಉಂಟಾದರೆ ಉಸಿರು ಕಟ್ಟಿದಂತಾಗುವುದು. ಸಂಗಾತಿ ಜೊತೆ ಹೇಳಿಕೊಳ್ಳದ ವಿಷಯವನ್ನು ನಮ್ಮ ಸ್ನೇಹಿತರ ಹತ್ರ ಹಂಚಿಕೊಳ್ಳುತ್ತೇವೆ, ಎಲ್ಲಾ ಸಂಬಂಧಗಳಿಗಿಂತ ಸಕತ್ ಸ್ಪೆಷಲ್ ಸ್ನೇಹ ಸಂಬಂಧ. ಆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅವರ ಸ್ನೇಹಿತರನ್ನು ಭೇಟಿ ಮಾಡುತ್ತೇನೆ ಎಂದಾಗ ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.
2. ಕೆಲಸವನ್ನು ತ್ಯಾಗ ಮಾಡುವುದು:
ಇಂಥ ಸಂದರ್ಭ ಹೆಣ್ಮಕ್ಕಳಿಗೆ ಹೆಚ್ಚಾಗಿ ಬರುತ್ತದೆ. ಮದುವೆಯಾದ ಮೇಲೆ ತಮಗೆ ಇಷ್ಟವಿದ್ದರೂ ಗಂಡನಿಗೆ ಇಷ್ಟವಿಲ್ಲ ಎಂದು ಕೆಲಸ ಬಿಡುವ ಎಷ್ಟೋ ಹೆಣ್ಮಕ್ಕಳಿದ್ದಾರೆ. ಆದರೆ ಹೀಗೆ ಕೆಲಸವನ್ನು ಇವರಿಗೋಸ್ಕರ ತ್ಯಾಗ ಮಾಡಿದಾಗ ಮನಸ್ಸಿನ ಒಂದು ಮೂಲೆಯಲ್ಲಿ ಆ ಕೊರಗು ಇದ್ದೇ ಇರುತ್ತದೆ. ಆದ್ದರಿಂದ ಕೆಲಸಕ್ಕೆ ಹೋಗುವ ಇಚ್ಛೆ ಇರುವವರು ಇದರ ಬಗ್ಗೆ ಮದುವೆಗೆ ಮೊದಲೇ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
3. ಒಬ್ಬರೇ ಮನೆ ಕೆಲಸ ಮಾಡುವುದು:
ಒಬ್ಬರು ಹೊರಗಡೆ ದುಡಿಯುತ್ತಿದ್ದಾರೆ ಎಂದಾದರೆ ಮನೆ ಕೆಲಸವನ್ನು ಇಬ್ಬರೂ ಹಂಚಿಕೊಳ್ಳಬೇಕು. ಹೊರಗಡೆ ದುಡಿಯೋಕೆ ಹೋಗುವ ಮಹಿಳೆಗೆ ಸಂಗಾತಿ ಮನೆಯಲ್ಲಿ ಸಾಥ್ ನೀಡದಿದ್ದರೆ ಮನೆಯಲ್ಲಿ ಹಾಗೂ ಕೆಲಸದಲ್ಲಿನ ಕೆಲಸದ ಒತ್ತಡದಿಂದಾಗಿ ಅವರು ರೋಸಿ ಹೋಗುತ್ತಾರೆ. ಒಂದು ವೇಳೆ ನಿಮಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಒಂದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.
4. ತಮ್ಮ ಬಗ್ಗೆ ಗಮನ ನೀಡದಿರುವುದು:
ಹೆಣ್ಣಾಗಾಲಿ, ಗಂಡಾಗಲಿ ಸಂಗಾತಿಯ ಆರೈಕೆಯಲ್ಲಿ ತಮ್ಮ ಆರೈಕೆ ಮರೆಯಬಾರದು. ಅವರಿಗೆ ಇಷ್ಟವಿಲ್ಲವೆಂದು ನಮಗೆ ಇಷ್ಟವಾದ ಕೆಲ ವಿಷಯವನ್ನು ತ್ಯಜಿಸುವುದು ಮಾಡಬಾರದು. ನೀವು ಎಲ್ಲವನ್ನೂ ಅವರಿಗೋಸ್ಕರ ಮಾಡುವ ಬದಲಿಗೆ ಒಬ್ಬರಿಗೋಸ್ಕರ ಮಾಡಿ, ಆವಾಗ ನಿಮಗೆ ಖುಷಿಯಾಗುತ್ತೆ. ಉದಾಹರಣೆಗೆ ನಿಮಗೆ ಯಾವುದೋ ಒಂದು ಅಡುಗೆ ಇಷ್ಟವಿರುತ್ತೆ, ಅದು ನಿಮ್ಮ ಸಂಗತಿ ಇಷ್ಟವಿರಲ್ಲ ಅವರಿಗಾಗಿ ನೀವು ಆ ಆಹಾರವನ್ನು ಸೇವಿಸದೇ ಇರುವುದು. ಈ ರೀತಿಯ ಹೊಂದಾಣಿಕೆ ನಿಮ್ಮ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಅಸಮಧಾನ ಉಂಟು ಮಾಡುವುದು.
5. ನಿಮ್ಮ ಸಂಗಾತಿಯ ತಪ್ಪುಗಳನ್ನು ಸರಿಪಡಿಸದೆ ಇರುವುದು:
ನಿಮ್ಮ ಸಂಗಾತಿ ತಪ್ಪು ಮಾಡುತ್ತಿದ್ದಾರೆ ಎಂಬುವುದು ಗೊತ್ತಿದ್ದರೂ ಅದನ್ನು ತಪ್ಪು ಎಂದು ಹೇಳುವ ಧೈರ್ಯ ಮಾಡದೆ ಇರುವುದು ಅದು ಹೊಂದಾಣಿಕೆ ಅಲ್ಲ. ತಪ್ಪುಗಳನ್ನು ತಪ್ಪು ಅಂತ ಹೇಳಬೇಕು ಇಲ್ಲದಿದ್ದರೆ ಮುಂದೆ ನಿಮ್ಮ ಸಂಬಂಧವನ್ನು ಸಂಪೂರ್ಣ ಹಾಳು ಮಾಡಬಾರದು ಜಾಗ್ರತೆ.
6. ನಟನೆ:
ನಿಮ್ಮ ಹಾಗೂ ಸಂಗಾತಿಯ ಅನಿಸಿಕೆಗಳು, ಆಸಕ್ತಿಗಳು ಒಂದೇ ಆಗಿರಬೇಕು ಎಂದೇನಿಲ್ಲ, ಆದರೆ ಅವರ ಇಷ್ಟವೇ ನಿಮ್ಮ ಇಷ್ಟ ಎಂದು ನಟನೆ ಮಾಡಬಾರದು, ನಟನೆ ತುಂಬಾ ಸಮಯ ನೆಲಸಲ್ಲ, ನಾವು ಹೇಗಿದ್ದೆವೋ ಹಾಗೇ ಇರಬೇಕು, ನಮ್ಮ ಸಂಗಾತಿಯ ಎದುರುಗಡೆಗೆ ಮುಖವಾಡ ಹಾಕಿದರೆ ಒಂದಲ್ಲಾ ಒಂದು ದಿನ ಆ ಮುಖವಾಡ ಕಳುಚುತ್ತೆ, ಅವರಿಗೆ ನಿಮ್ಮ ಮೇಲೆ ತುಂಬಾನೇ ಬೇಸರವಾಗುವುದು.