ಮಾವಿನ ಕಾಯಿ ಪುಡಿ ಅಥವಾ ಆಮ್ ಚೂರ್ ಮಾಡಿಟ್ಟರೆ ವರ್ಷ ಪೂರ್ತಿ ಬಳಸಬಹುದು, ಸಾರಿಗೆ ಸ್ವಲ್ಪ ಹುಳಿ ಬೇಕೆಂದಾಗ ಇದನ್ನು ಬಳಸಬಹುದು. ಇನ್ನು ಇದರ ವಿಶೇಷತೆಯೆಂದರೆ ಹುಣಸೆಹಣ್ಣಿಗಿಂತ ಹೆಚ್ಚು ರುಚಿ ಕೊಡುತ್ತೆ. ತರಕಾರಿ ಸಾರಿಗೆ ಬಳಸಬಹುದು.
ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿ ಎಂದರೆ ಮಾವಿನಕಾಯಿ ಮಾತ್ರ
ಮೊದಲಿಗೆ ಮಾವಿನ ಕಾಯಿಯನ್ನು ತೊಳೆದು ಶುದ್ಧ ಬಟ್ಟೆಯಿಂದ ಒರೆಸಿ, ನಂತರ ಸಿಪ್ಪೆ ಸುಲಿದು, ತೆಳುವಾಗ ಕೆತ್ತಿ, ಪೀಲರ್ ಬೇಕಾದರೂ ಬಳಸಬಹುದು. ತುಂಬಾ ತೆಳುವಾಗಿ ಕೆತ್ತಬೇಕು, ತಿರುಳು ತೆಳುವಾಗಿ ತೆಗೆಯುವುದು ತುಂಬಾ ಸುಲಭ ಕೂಡ ಹೌದು.
ಈಗ ಆ ಮಾವಿನಕಾಯಿ ತುಂಡುಗಳನ್ನು ಬಟ್ಟೆ ಅಥವಾ ಸ್ಟೀಲ್ ಪ್ಲೇಟ್, ದೊಡ್ಡ ತಟ್ಟೆಯಲ್ಲಿ ಒಣಗಿಸಲು ಇಡಿ. ಅದರ ಮೇಲೆ ತೆಳು ಬಟ್ಟೆಯಿಂದ ಮುಚ್ಚಬೇಕು, ಈ ರೀತಿ ಎರಡು ದಿನ ಒಣಗಿಸಬೇಕು, ಬಿಸಿಲು ಕಡಿಮೆಯಿದ್ದರೆ ನೀವು 3-4 ದಿನ ಒಣಗಿಸಬೇಕು ನಂತರ ಅದರ ಮೇಲ್ಭಾಗ ಬಟ್ಟೆ ಮುಚ್ಚದೆ ಬಿಸಿಲಿನಲ್ಲ 4-5 ಗಂಟೆ ಒಣಗಿಸಿ. ಮಾವಿನಕಾಯಿ ತಿರುಳು ಚೆನ್ನಾಗಿ ಒಣಗಿಸಬೇಕು ಅದಾದ ಬಳಿಕ ಬಿಸಿಲಿನಿಂದ ತೆಗೆದು ಸ್ವಲ್ಪ ತಣ್ಣಗಾಗಲು ಇಡಬೇಕು ನಂತರ ಬ್ಲೆಂಡರ್ನಲ್ಲಿ ಹಾಕಿ ಪುಡಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಹಾಕಿ, ಮುಂದಿನ ವರ್ಷದವರೆಗೆ ಬಳಸಬಹುದು.
ಮಾವಿನಕಾಯಿ ಪುಡಿ ಬಳಸುವುದರಿಂದ ಈ ಪ್ರಯೋಜನ ಪಡೆಯಬಹುದು:
ಇದು ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡುತ್ತದೆ.
ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.
ಕ್ಯಾನ್ಸರ್ ಕಣಗಳ ಉತ್ಪತ್ತಿ ತಡೆಗಟ್ಟುತ್ತದೆ.
ಯೂರಿಕ್ ಆಮ್ಲ ಉತ್ಪತ್ತಿ ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು:
ಮಧುಮೇಹಿಗಳಿಗೆ ಒಳ್ಳೆಯದು:
ಈ ಆಮ್ಚೂರ್ ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿ ಎಂದು 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ನೀವು ಮಧುಮೇಹದ ಔಷಧಿ ಜೊತೆಗೆ ಇಂಥ ಆಹಾರ ಸೇವನೆ ಮಾಡಿದರೆ ಒಳ್ಳೆಯದು.
ಈ ಆಮ್ಚೂರ್ ಹೇಗೆ ಬಳಸಬಹುದು?
ಇದನ್ನು ಸಾರು, ಸೂಪ್, ರಸಂ, ಚಟ್ನಿ, ಉಪ್ಪಿನಕಾಯಿ, ವೆಜೆಟೇಬಲ್ ಸಲಾಡ್ ಮಾಡುವಾಗ ಸೇರಿಸಬಹುದು ನಿಂಬೆರಸಕ್ಕೆ ಬದಲಾಗಿ ಇದನ್ನು ಬಳಸಬಹುದು.
ಮಾವಿನಕಾಯಿ ಪುಡಿ ಮಾಡಿದ ಹಾಳಾಗದಂತೆ ಇಡಲು ಈ ರೀತಿ ಸಂರಕ್ಷಣೆ ಮಾಡಿ:
ಮಾವಿನ ಪುಡಿ ಮಾಡಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು: ನೀವು ಬಳಸಲು ಬೇಕಾದ ಪುಡಿಯನ್ನು ಸ್ವಲ್ಪ ಚಿಕ್ಕ ಡಬ್ಬದಲ್ಲಿ ಹಾಕಿಡಿ. ಇದನ್ನು ಚಕ್ಕೆ, ಲವಂಗ, ಏಲಕ್ಕಿ ಜೊತೆ ಹಾಕಿಡಬೇಡಿ. ಇದು ರುಚಿಯನ್ನು ಹಾಳು ಮಾಡುತ್ತದೆ. ನೀವು ಗರ್ಭಿಣಿಯಾಗಿದ್ದರೆ, ಎದೆ ಹಾಲುಣಿಸುತ್ತಿದ್ದರೆ ನೀವು ವೈದ್ಯರ ಸಲಹೆ ಪಡೆದು ಬಳಿಕ ಇದನ್ನು ಬಳಸಿ. ಇನ್ನು ಏನಾದರೂ ಔಷಧ ತೆಗೆದುಕೊಳ್ಳುತ್ತಿದ್ದರೆ ನೀವು ವೈದ್ಯರ ಸಲಹೆ ಪಡೆಯಿರಿ.
ಈ ಮಾವಿನಕಾಯಿ ಪುಡಿಯನ್ನು ಬಳಸುವುದರಿಂದ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು, ಅಸಿಡಿಟಿ, ಹೊಟ್ಟೆ ಉಬ್ಬವುದು ಈ ಬಗೆಯ ಸಮಸ್ಯೆ ಕಂಡು ಬರಲ್ಲ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಈ ಮಾವಿನಕಾಯಿ ಪುಡಿ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.