ಸನ್ ಟ್ಯಾನ್ ಹೋಗಲಾಡಿಸಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳೇ ಸಾಕು.

ಹೊರಗಡೆ ಟ್ರಿಪ್ ಹೋದರೆ, ಬೀಚ್ ಗೆ ಹೋದರೆ ಅಷ್ಟೇ ಏಕೆ ಈ ಬಿಸಿಲಿನಲ್ಲಿ ಬೈಕ್ನಲ್ಲಿ ಓಡಾಡಿದರೂ ಸಾಕು ಟ್ಯಾನ್ ಆಗಿ ಬಿಡುತ್ತದೆ. ಮುಖ ಟ್ಯಾನ್ ಆದರೆ ಮುಖದ ಹೊಳಪು ಕಡಿಮೆಯಾಗುವುದು. ಮುಖ ಆಕರ್ಷಕವಾಗಿ ಕಾಣುವುದಿಲ್ಲ, ಸನ್ ಟ್ಯಾನ್ಗೆ ಏನೂ ಮಾಡದೇ ಇದದ್ರೂ ಕೆಲವು ದಿನಗಳಲ್ಲಿ ತನ್ನಿಂದ ತಾನೇ ಹೋಗುತ್ತೆ. ಆದರೆ ಅಷ್ಟು ದಿನ ತ್ವಚೆ ಚೆನ್ನಾಗಿ ಕಾಣಿಸಲ್ಲ. 

ಆದ್ದರಿಂದ ಹೊರಗಡೆ ಬಿಸಿಲಿನಲ್ಲಿ ಸುತ್ತಾಡಿದರೆ ಅಂದೇ ಮಲಗುವ ಮುನ್ನ ಈ ರೀತಿ ಮಾಡಿದರೆ ಸಾಕು ಸನ್ ಟ್ಯಾನ್ ಚಿಂತೆಯೇ ಇರಲ್ಲ. ಸನ್ ಟ್ಯಾನ್ ಹೋಗಲಾಡಿಸಲು ಇವುಗಳು ತುಂಬಾನೇ ಸಹಕಾರಿ. ಇಲ್ಲಿದೆ ನೋಡಿ.

ಆಲೂಗಡ್ಡೆ: 
ಆಲೂಗಡ್ಡೆಯನ್ನು ಕತ್ತರಿಸಿ, ಅದರಿಂದ ಟ್ಯಾನ್ ಆಗಿರುವ ಭಾಗದಲ್ಲಿ ವೃತ್ತಾಕಾರವಾಗಿ ಉಜ್ಜಿ, ಈ ರೀತಿ 5 ನಿಮಿಷ ಮಾಡಿ, ಆಲೂಗಡ್ಡೆಯ ರಸ ಒಣಗಲು ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ, ಸನ್ ಟ್ಯಾನ್ ಹೋಗಿರುತ್ತದೆ. ಅಲೂಗಡ್ಡೆಯಲ್ಲಿ ಕ್ಯಾಟ್ಚೋಲೆಸೆ ಎಂಬ ಆ್ಯಂಟಿ ಆಕ್ಸಿಡೆಂಡ್ ಇದೆ, ಇದು ತ್ವಚೆಯನ್ನು ಬೆಳ್ಳಗಾಗಿಸುತ್ತದೆ ಹೀಗಾಗಿ ಸನ್ಟ್ಯಾನ್ ಸುಲಭವಾಗಿ ಹೋಗಲಾಡಿಸಬಹುದು. 

ಪೈನಾಪಲ್ ತಿರುಳು:
ಪೈನಾಪಲ್ ತಿರುಳು ತೆಗೆದು ಅದಕ್ಕೆ ಸ್ವಲ್ಪ ಜೇನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚ 20 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆದರೆ ಸನ್ಟ್ಯಾನ್ ಹೋಗುವುದು. ಈ ಮಾಸ್ಕ್ ತ್ವಚೆಗೆ ತುಂಬಾನೇ ಒಳ್ಳೆಯದು. 

ನಿಂಬೆಹಣ್ಣು: 
ನಿಂಬೆಹಣ್ಣು ಕತ್ತರಿಸಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿ ನಂತರ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಸನ್ ಟ್ಯಾನ್ ಕಡಿಮೆಯಾಗುವುದು.

ನಿಂಬೆಹಣ್ಣಿನಿಂದ ಈ ಮಾಸ್ಕ್ ತಯಾರಿಸಿ ಬಳಸಬಹುದು:
ನಿಂಬೆರಸ, ಸೌತೆಕಾಯಿ ಮತ್ತು ರೋಸ್ ವಾಟರ್ ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ. ನಂತರ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ಸೌತೆಕಾಯಿಯು ಚರ್ಮಕ್ಕೆ ತಂಪನ್ನು ನೀಡುವುದು, ಅದೇ ರೋಸ್ ವಾಟರ್ ಚರ್ಮದ ಕಾಂತಿ ಹೆಚ್ಚಿಸುವುದು. ನಿಂಬೆ ರಸ ಮುಖದ ಕಲೆಯನ್ನು ಹೋಗಲಾಡಿಸುತ್ತದೆ. ಈ ಮಾಸ್ಕ್ ಮುಖಕ್ಕೆ ಹಚ್ಚಿ ಮುಖ ತೊಳೆಯಿರಿ, ಇದರಿಂದ ಸನ್ ಟ್ಯಾನ್ ದೂರಾಗುವುದು.

ಲಿಂಬೆ ಮತ್ತು ಸಕ್ಕರೆ ಸ್ಕ್ರಬ್ ಮಾಡಿದರೂ ಸನ್ಟ್ಯಾನ್ ದೂರಾಗುವುದು:
ನಿಂಬೆರಸ ಮತ್ತು ಸಕ್ಕರೆ ಮಿಕ್ಸ್ ಮಾಡಿದರಿಂದ ಮುಖಕ್ಕೆ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ಬ್ಲ್ಯಾಕ್ ಹೆಡ್ಸ್ ದೂರಾಗುತ್ತೆ, ಸನ್ಟ್ಯಾನ್ ಕೂಡ ದೂರಾಗುವುದು. 

ಲೋಳೆಸರ: 
ಮನೆಯಲ್ಲಿ ಲೋಳೆಸರವಿದ್ದರೆ ಅದನ್ನು ಮುಖಕ್ಕೆ ಹಚ್ಚಿದರೆ ಒಳ್ಳೆಯದು ಇದನ್ನು ಪ್ರತಿದಿನ ಮುಖಕ್ಕೆ ಹಚ್ಚಿ, ತ್ವಚೆ ತಂಪು ಮುಖ ಕ್ಲಿಯರ್ ಆಗಿರುತ್ತದೆ 

ಕಡಲೆಹಿಟ್ಟು, ಟೊಮೆಟೋ ಜ್ಯೂಸ್ ಮತ್ತುಲೋಳೆಸರ:
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ, ನಂತರ ಮುಖಕ್ಕೆ ಹಚ್ಚಿ, ಕೈಯಗಳಿಗೆ, ಬೆನ್ನುಗಳಿಗೆ ಹಚ್ಚಿ. ಇವುಗಳನ್ನು ಬಳಸುವುದರಿಂದ ಸನ್ಟ್ಯಾನ್ ದೂರಾಗುವುದು. ಇವುಗಳನ್ನು ತ್ವಚೆಗೆ ಬಳಸುವುದರಿಂದ ತ್ವಚೆಗೆ ತುಂಬಾನೇ ಒಳ್ಳೆಯದು. ಈ ಮಿಶ್ರನ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಡಿ. ಈ ರೀತಿ ವಾರದಲ್ಲಿ 3 ಬಾರಿ ಮಾಡಿ, ಈ ಸನ್ ಟ್ಯಾನ್, ಪಿಗ್ಮೆಂಟೇಷನ್ ಸಮಸ್ಯೆ ಇರಲ್ಲ.

ಸನ್ಟ್ಯಾನ್ ತಡೆಗಟ್ಟಲು ಏನು ಮಾಡಬೇಕು? 

. ಹೊರಗಡೆ ಹೋಗುವಾಗ ಕೊಡೆ ಹಿಡಿಯಿರಿ 

. ಬಿಸಿಲಿಗೆ ಹೋಗುವಾಗ ಸನ್ಸ್ಕ್ರೀನ್ ಲೋಷನ್ ಬಳಸಿ, ಇದು ಸನ್ಟ್ಯಾನ್ ಆಗುವುದನ್ನು ತಡೆಗಟ್ಟುತ್ತದೆ 

. ಬೈಕ್, ಸ್ಕೂಟಿಯಲ್ಲಿ ಓಡಾಡುವಾಗ ಮುಖವನ್ನು ಸ್ಕಾರ್ಪ್ ಬಳಸಿ ಮುಚ್ಚಿ, ಹೀಗೆ ಮಾಡಿದರೆ ಸನ್ಟ್ಯಾನ್ ಆಗುವುದು ತಡೆಗಟ್ಟಬಹುದು.