ಮನೆಯಲ್ಲಿ ಋಣಾತ್ಮಕ ಶಕ್ತಿ ಹೊರಹಾಕಿ ಧನಾತ್ಮಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು?

ವಾಸ್ತು ಪ್ರಕಾರ ಮನೆಯಲ್ಲಿ ನೆಮ್ಮದಿ, ಸಂತೋಷದಿಂದ ಇರಬೇಕೆಂದರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರಬೇಕು, ಋಣಾತ್ಮಕ ಶಕ್ತಿ ಇರಬಾರದು. ಮನೆಯಲ್ಲಿ ಋಣಾತ್ಮಕ ಶಕ್ತಿ ಇದ್ದರೆ ಅದರಿಂದ ಮನೆಯಲ್ಲಿ ಜಗಳ, ಆರೋಗ್ಯ ಸಮಸ್ಯೆ ಇವೆಲ್ಲಾ ಉಂಟಾಗುವುದು. ವಾಸ್ತು ಪ್ರಕಾರ, ನಕಾರಾತ್ಮಕ ಶಕ್ತಿಯನ್ನು ಓಡಿಸುವುದು ಹೇಗೆ? ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ನೋಡೋಣ ಬನ್ನಿ:

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಸೂಚಿಸುವ ಲಕ್ಷಣಗಳು. 

ಮನೆಯಲ್ಲಿ ಜಗಳ, ನೆಮ್ಮದಿ ಇಲ್ಲದಿರುವುದು.

ಎಷ್ಟೇ ಕಷ್ಟಪಟ್ಟರೂ ಗುರಿ ಸಾಧಿಸಲು ಸಾಧ್ಯವಾಗದಿರುವುದು .

ಯಾವುದೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲ್ಲ.

ಕೆಟ್ಟ ಆಲೋಚನೆಗಳು ಬರುವುದು. 

ಅವಕಾಶಗಳು ಕೈ ತಪ್ಪುವುದು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಹೊರಹಾಕುವುದು ಹೇಗೆ?

ಮನೆಯ ಕಿಟಕಿ ಹಾಗೂ ಬಾಗಿಲುಗನ್ನು ನೀರಿಗೆ ನಿಂಬೆರಸ ಹಾಗೂ ಉಪ್ಪಿ, ವೈಟ್ ವಿನೆಗರ್ ಹಾಕಿ ತೊಳೆಯಿರಿ. 

ಮನೆಯನ್ನು ಒರೆಸುವಾಗ ಸ್ವಲ್ಪ ಉಪ್ಪು ಹಾಕಿ ಒರೆಸಿ. 

ಒಂದು ಲೋಟದಲ್ಲಿ ಕಲ್ಲುಪ್ಪು ಹಾಕಿ ಬಾತ್ರೂಂ ಹಾಗೂ ಟಾಯ್ಲೆಟ್ನಲ್ಲಿ ಇಡಿ. 

ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಒಳ್ಳೆಯದು? 

ಮನೆಯಲ್ಲಿ ಪಿರಮಿಡ್ ಯಂತ್ರ, ದೇವರ ಮೂರ್ತಿಗಳಿದ್ದರೆ ಒಳ್ಳೆಯದು. ಇವುಗಳನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.

ಮನೆಯಲ್ಲಿ ಘಂಟೆ, ಶಂಖದ ಶಬ್ದ ಹೊರಡಿಸಿದರೆ ಒಳ್ಳೆಯದು. ಈ ರೀತಿಯ ಶಬ್ದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ. 

ಮಂತ್ರಗಳನ್ನು ಜೋರಾಗಿ ಪಠಿಸಿ, ನೀವು ಟಿವಿಯಲ್ಲಿ ಅಥವಾ ಮೊಬೈಲ್ನಲ್ಲಿಯೂ ಮಂತ್ರಗಳನ್ನು ಹಾಕಬಹುದು, ಮನೆಯೊಳಗಡೆ ಮಂತ್ರ ಮೊಳಗಬೇಕು. ಈ ಮಂತ್ರಗಳು ನಿಮ್ಮಲ್ಲಿ ಹಾಗೂ ಮನೆಯಲ್ಲಿಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುವುದು.

ಏನು ಮಾಡಬಾರದು?

* ಪೂಜಾ ಕೋಣೆಯಲ್ಲಿ ದೇವರ ಚಿತ್ರ ಅಥವಾ ವಿಗ್ರಹ ಒಡೆದಿದ್ದರೆ ಅದನ್ನು ಅಲ್ಲಿ ಇಡಬಾರದು.

* ಗೋಡೆಗಳಲ್ಲಿ ಯಾವುದೇ ಬಿರುಕುಗಳು ಅಥವಾ ತೇವಗಳು ಇರಬಾರದು. 

* ಇದನ್ನು ಹೊರತುಪಡಿಸಿ, ಮನೆಯಲ್ಲಿ ಎಲ್ಲಿಯೂ ಜೇಡರ ಬಲೆಗಳು ಇರಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗಲು ಕಾರಣವಾಗುತ್ತದೆ. 

* ಮನೆಯಲ್ಲಿ ನೀರು ಪೋಲಾಗದಂತೆ ಜಾಗ್ರತೆವರ್ಹಿಸಿ, ನೀರು ವ್ಯರ್ಥವಾದರೆ ಇದು ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡುತ್ತದೆ. 

* ಪೊರಕೆ, ಮಾಪ್ ಮತ್ತು ಕಸದ ಬುಟ್ಟಿಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಡಬಾರದು. 

* ಮನೆಯ ಮುಂದುಗಡೆ ಒಣಗಿದ ಗಿಡ ಅಥವಾ ಮರಗಳು ಇರಬಾರದು, ಇದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಿ. 

* ನೀವು ಮನೆಯಲ್ಲಿ ಹೂವುಗಳ ಪುಷ್ಪಗುಚ್ಛವನ್ನು ಇರಿಸಿದರೆ, ನಂತರ ಅವುಗಳನ್ನು ಪ್ರತಿದಿನ ಬದಲಾಯಿಸುವುದು ಮುಖ್ಯ ಎಂದು ಗಮನಿಸಿ. 

* ಒಣಗಿದ ಹೂವುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಹೂಗುಚ್ಛದಲ್ಲಿ ಆಕರ್ಷಕ ಹೂವುಗಳನ್ನು ಹಾಕಿಡಿ.

* ಒಡೆದ ಗಡಿಯಾರ, ಒಡೆದ ಕನ್ನಡಿ ಇತ್ಯಾದಿಗಳನ್ನು ಮನೆಯಲ್ಲಿ ಇಡಬೇಡಿ. ಅವುಗಳನ್ನು ಮನೆಯಿಂದ ಹೊರಹಾಕಬೇಕು.

ಏನು ಮಾಡಬೇಕು? 
ಮನೆಯ ಈಶಾನ್ಯ ಮೂಲೆಯಲ್ಲಿ ನೀರು ತುಂಬಿದ ಪಾತ್ರೆಯನ್ನು ಇಡುವುದರಿಂದ ಶುಭ ಫಲಗಳು ಹೆಚ್ಚುತ್ತವೆ. ಧನಾತ್ಮಕ ಶಕ್ತಿಯ ಹರಿವಿಗೆ, ಕಟ್ಟಡದ ಈಶಾನ್ಯ ದಿಕ್ಕಿನಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿರಬೇಕು. ಮನೆಯಲ್ಲಿರುವ ಫ್ಯಾನ್, ಕೂಲರ್ ಇತ್ಯಾದಿ ಘೋರ ಶಬ್ದವನ್ನು ಉಂಟುಮಾಡುವ ವಿದ್ಯುತ್ ಉಪಕರಣಗಳನ್ನು ಕಾಲಕಾಲಕ್ಕೆ ರಿಪೇರಿ ಮಾಡಿ. ಬಾಗಿಲು, ಗೇಟ್ ಮುಚ್ಚುವಾಗ, ತೆರೆಯುವಾಗ ಶಬ್ದ ಮಾಡದಿರಲು ಎಣ್ಣೆ ಹಚ್ಚುತ್ತಿರಿ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರಲು, ಪ್ರತಿದಿನ ಅದನ್ನು ಉಪ್ಪು ನೀರಿನಿಂದ ಒರೆಸುವುದು ಉತ್ತಮ. ನಿಮ್ಮ ವೃತ್ತಿ ಮತ್ತು ಅದೃಷ್ಟವನ್ನು ಹೆಚ್ಚಿಸಲು, ನಿಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೆಡಿ. ಮನೆಯ ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ, ಕುಬೇರ ಅಥವಾ ಗಣೇಶನ ಚಿತ್ರವನ್ನು ಇಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ.