ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣುಗಳನ್ನು ತಿನ್ನಲ್ಲಿಕ್ಕೆ ಬಹಳ ಖುಷಿಯಾಗುತ್ತೆ. ಮಾವಿನ ಹಣ್ಣಿನಲ್ಲಿ ವಿವಿಧ ಖಾದ್ಯಗಳನ್ನ ನೆನಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ. ಆದರೆ ಈ ಮಾವಿನ ಹಣ್ಣನ್ನು ತಿಂದ ಮೇಲೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ ಆ ವಸ್ತುಗಳಾವುವು? ಅವುಗಳನ್ನು ಯಾಕೆ ತಿನ್ನಬಾರದು, ತಿಂದರೆ ಏನಾಗುವುದು ಎಂದು ವಿವರವಾಗಿ ನೀಡಿದ್ದೇವೆ.
ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು:
ಮಾವಿನಹಣ್ಣು ವಿಟಮಿನ್ ಸಿ, ವಿಟಮಿನ್ ಎ, ಫೋಲೇಟ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಮ್ಯಾಂಗನೀಸ್, ರಂಜಕ ಮತ್ತು ನಿಯಾಸಿನ್ ಗಳ ಸಮೃದ್ಧ ಮೂಲವಾಗಿದ್ದು, ಆರೋಗ್ಯದ ಜೊತೆಗೆ ಸಾಕಷ್ಟು ಸೌಂದರ್ಯ ಲಾಭಗಳನ್ನು ಹೊಂದಿದೆ.
ಒಂದು ಕಪ್ ಮಾವಿನಹಣ್ಣಿನಲ್ಲಿರುವ ಪೋಷಕಾಂಶಗಳು:
ಎನರ್ಜಿ- 99 ಕೆ.ಸಿ.ಎಲ್
ಪ್ರೋಟೀನ್- 1.35 ಗ್ರಾಂ
ಕಾರ್ಬೋಹೈಡ್ರೇಟ್- 24.7 ಗ್ರಾಂ
ಫೈಬರ್- 2.64 ಗ್ರಾಂ
ಕೊಬ್ಬು- 0.627 ಗ್ರಾಂ
ಸಕ್ಕರೆ- 22.5 ಗ್ರಾಂ
ಪ್ರೋಟೀನ್- 1.35 ಗ್ರಾಂ
ಕಾರ್ಬೋಹೈಡ್ರೇಟ್- 24.7 ಗ್ರಾಂ
ಫೈಬರ್- 2.64 ಗ್ರಾಂ
ಕೊಬ್ಬು- 0.627 ಗ್ರಾಂ
ಸಕ್ಕರೆ- 22.5 ಗ್ರಾಂ
ಮಾವಿನಹಣ್ಣು ತಿಂದ ನಂತರ ನೀವು ಸೇವಿಸಬಾರದ ಆಹಾರ ಪದಾರ್ಥಗಳು:
ಮಾವಿನಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು. ಇದು ಗ್ಯಾಸ್ಟಿಕ್, ಹೊಟ್ಟೆ ಉಬ್ಬರ, ದು, ಹೊಟ್ಟೆ ನೋವು ಮತ್ತು ಇತರ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಗಂಟಲುನೋವು, ಶೀತದಂತಹ ಸಮಸ್ಯೆಗಳೂ ಕಂಡುಬರುತ್ತವೆ. ಆದ್ದರಿಂದ, ಮಾವಿನಹಣ್ಣು ಸೇವಿಸಿದ ಅರ್ಧ ಅಥವಾ ಒಂದು ಗಂಟೆಯ ನಂತರ ಮಾತ್ರ ನೀರನ್ನು ಕುಡಿಯಬೇಕು.
ತಂಪು ಪಾನೀಯ:
ಮಾವಿನಹಣ್ಣಿನಲ್ಲಿ ಈಗಾಗಲೇ ಸಕ್ಕರೆ ಅಧಿಕವಾಗಿದ್ದು, ತಂಪು ಪಾನೀಯಗಳಲ್ಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಮಾವಿನಹಣ್ಣಿನ ನಂತರ ತಂಪು ಪಾನೀಯಗಳನ್ನು ಸೇವಿಸುವುದರಿಂದ ದಿಢೀರನೇ ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಾಗಬಹುದು. ಮುಖ್ಯವಾಗಿ ಮಧುಮೇಹ ರೋಗಿಗಳಿಗೆ ಇದು ತುಂಬಾ ಅಪಾಯಕಾರಿ. ಆದ್ದರಿಂದ ಮಾವಿನ ಹಣ್ಣು ತಿಂದ ಮೇಲೆ ತಂಪು ಪಾನೀಯಗಳನ್ನು ಎಂದಿಗೂ ಕುಡಿಯಲು ಹೋಗಬೇಡಿ.
ಮಸಾಲೆ ಆಹಾರ:
ಮಾವಿನಹಣ್ಣಿನ ನಂತರ ಹೆಚ್ಚು ಮಸಾಲೆಯುಕ್ತ ಆಹಾರ ಅಥವಾ ಮೆಣಸಿನಕಾಯಿಯನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ ಇದು ಮೊಡವೆ ಮತ್ತು ಅಲರ್ಜಿ ಸೇರಿದಂತೆ ನಿಮ್ಮ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಮಸಾಲೆಯುಕ್ತ ಆಹಾರಗಳಿಂದ ದೂರವಿರಿ.
ಹಾಗಲಕಾಯಿ ಮತ್ತು ಮಾವಿನಹಣ್ಣು ಅತ್ಯಂತ ಕೆಟ್ಟ ಸಂಯೋಜನೆಯಾಗಿದೆ. ಜೊತೆಗೆ ಮಾವಿನ ಹಣ್ಣು ತಿಂದಮೇಲೆಯೂ ಹಾಗಲಕಾಯಿ ತಿನ್ನಬಾರದು. ಏಕೆಂದರೆ ಇದು ವಾಕರಿಕೆ, ವಾಂತಿ ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಮಾವಿನ ಹಣ್ಣಿನಿಂದ ಹಾಗಲಕಾಯಿಯನ್ನು ಆದಷ್ಟು ದೂರವಿಡುವುದು ಉತ್ತಮ.