ಇವುಗಳನ್ನು ತಿಂದ್ರೆ 50ರ ಹರೆಯದ ಮಹಿಳೆಯರು, 20ರ ಯುವತಿಯರಂತೆ ಸ್ಟ್ರಾಂಗ್ ಆಗ್ತಾರೆ!

ಸಾಮಾನ್ಯವಾಗಿ ಮಹಿಳೆಯರಿಗೆ 30 ವಯಸ್ಸು ಆಗುತ್ತಲೇ ಸಣ್ಣ ಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಮಕ್ಕಳಾದ ಮೇಲೆ ಮಹಿಳೆಯರ ಆರೋಗ್ಯದಲ್ಲಿ ಹಲವು ಏರುಪೇರು ಉಂಟಾಗುತ್ತದೆ. ವಯಸ್ಸು ಹೆಚ್ಚಾದಂತೆ ದೈಹಿಕ ಶಕ್ತಿಯೂ ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಗುಣಮಟ್ಟದ ಆಹಾರದ ಜೊತೆಯಲ್ಲಿ ಹಣ್ಣು ಹಂಪಲು ಸೇವಿಸಬೇಕು. 

ವಯಸ್ಸು ಹೆಚ್ಚಾದಂತೆ ಆರೋಗ್ಯದ ಕಡೆ ಗಮನ ನೀಡಬೇಕು. ಬಹುತೇಕರು ಕೆಲಸದ ಒತ್ತಡದಿಂದ ಕೆಟ್ಟ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಾರೆ. ಇಂತಹ ಜೀವನಶೈಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಲ್ಲಿ ವಯಸ್ಸಾದವರು ಇದ್ರೆ, ನೀವು ಬೆಳೆಯುವ ಮಕ್ಕಳು ಚೆನ್ನಾಗಿ ತಿನ್ನಬೇಕು ಎಂದು ಹೇಳುತ್ತಿರುತ್ತಾರೆ. ಆದ್ರೆ ತಾವೇ ಸರಿಯಾಗಿ ಆಹಾರ ಸೇವಿಸಲ್ಲ. 

ವಯಸ್ಸು 50 ದಾಟಿದ ನಂತರ ಮಹಿಳೆಯರು ನಾವು ಏನು ಸೇವಿಸುತ್ತಿದೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ದಿನನಿತ್ಯ ಊಟದ ಜೊತೆಯಲ್ಲಿ ಕೆಲವೊಂದು ವಿಶೇಷ, ಪ್ರೋಟಿನ್ ವುಳ್ಳ ಆಹಾರವನ್ನು ಸೇರಿಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಗಾಗಿ ಆರೋಗ್ಯಕರ ಆಹಾರ ತಿನ್ನಬೇಕು. 50 ವಯಸ್ಸು ದಾಟಿದ ಮಹಿಳೆಯರ ಆಹಾರದಲ್ಲಿ ಈ ಕೆಳಗಿನ ಪದಾರ್ಥ ಇರಬೇಕು.

ವಯಸ್ಸಾದಂತೆ ದಣಿವು, ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಬೇಸರ ಅಥವಾ ಉದಾಸೀನತೆ ಉಂಟಾಗುತ್ತದೆ. ಈ ಪದಾರ್ಥ ಅಥವಾ ಆಹಾರವನ್ನು ಹಂತ ಹಂತವಾಗಿ ನಿಯಮಿತವಾಗಿ ಸೇವನೆ ಮಾಡೋದರಿಂದ 50ರ ಹರೆಯದ ಮಹಿಳೆ, 20ರ ಯುವತಿಯಂತೆ ಸ್ಟ್ರಾಂಗ್ ಆಗ್ತಾರೆ.

1.ಅಗಸೆಬೀಜಗಳು:
ಮಹಿಳೆಯರ ಆರೋಗ್ಯಕ್ಕೆ ಅಗಸೆಬೀಜ ಸೇವನೆ ಒಳ್ಳೆಯದು. ಅಗಸೆಬೀಜಗಳಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ದೇಹದಲ್ಲಿನ ರಕ್ತದ ಕೊರತೆ ಸಮಸ್ಯೆಯನ್ನು ನಿವಾರಿಸುತ್ತದೆ. ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಇಳಿಕೆ ಮಾಡುವಲ್ಲಿ ಅಗಸೆಬೀಜಗಳು ಪ್ರಮುಖ ಪಾತ್ರವಹಿಸುತ್ತವೆ. ಇದೆಲ್ಲದರೊಂದಿಗೆ ಚರ್ಮದ ಕಾಂತಿ ಹೆಚ್ಚಿಸೋದರ ಜೊತೆಗೆ ಕೂದಲನ್ನು ರಕ್ಷಣೆ ಮಾಡುತ್ತವೆ. 

2.ಎಳ್ಳು:
ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಮೂಳೆಗಳನ್ನು ಸದೃಢಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಅಗಸೆಬೀಜದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ನಿಯಮಿತ ಎಳ್ಳು ಸೇವನೆ ಸಂಧಿವಾದಂತಹ ಸಮಸ್ಯೆಗಳನ್ನು ದೂರ ಮಾಡುತ್ತವೆ. 

3.ಮೆಂತ್ಯೆ:
50 ವರ್ಷ ಮೇಲ್ಪಟ್ಟ ಮಹಿಳೆಯರು ವಿಶೇಷವಾಗಿ ತಮ್ಮ ಆಹಾರದಲ್ಲಿ ಮೆಂತ್ಯೆ ಸೇರಿಸಿಕೊಳ್ಳಬೇಕು. ಮೆಂತ್ಯೆ ನಿಮ್ಮ ಇನ್ಸುಲಿನ್ ಪ್ರತಿರೋಧ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ತಿನ್ನೋದು ಉತ್ತಮ. ಅಡುಗೆಯಲ್ಲಿಯೂ ಮೆಂತ್ಯೆ ಬಳಸಬಹುದು.