ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಲು ಹೀಗೆ ಮಾಡಿ.

ಪಾಲಕರು ಮಕ್ಕಳ ಬೆಳವಣಿಗೆಯಲ್ಲಿ ಒಂದು ಬಹುಮುಖ್ಯ ಪಾತ್ರ. ಪಾಲಕರು ಮಾಡಿದ್ದನ್ನೇ ಮಕ್ಕಳು ಅಭ್ಯಾಸ ಮಾಡುತ್ತಾರೆ. ಹಾಗಾಗಿ ಪಾಲಕರು ಮಕ್ಕಳಿಗೆ ಒಳ್ಳೊಳ್ಳೆ ಹವ್ಯಾಸ ಕಲಿಸಬೇಕು. ಅದರಲ್ಲಿ ಪುಸ್ತಕ ಓದುವ ಅಭ್ಯಾಸವೂ ಒಂದು. ಪುಸ್ತಕ ಓದಿದರೆ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಬುದ್ದಿ ಚುರುಕು ಆಗುತ್ತದೆ. ಆದರೆ ಈಗಿನ ಮಕ್ಕಳಿಗೆ ಓದುವ ಆಸಕ್ತಿಯೇ ಇಲ್ಲ. ಏಕೆಂದರೆ ಈಗೀನ ಮಕ್ಕಳಿಗೆ ಬರೇ ಪೋನ್ ಇದ್ದರೆ ಸಾಕು. ಊಟ, ತಿಂಡಿ, ಶಾಲೆ ಏನು ಸಹ ಬೇಡ. 

ಹಿರಿಯರು ಹೇಳುವ ಮಾತನ್ನು ಸಹ ಕೇಳೊದಿಲ್ಲ. ಆದ್ದರಿಂದ ತಂದೆಯಾದವರು ಮಕ್ಕಳಿಗೆ ತಿಳಿಸಬೇಕು, ಬರೀ ಶಾಲೆ ಪುಸ್ತಕ ಓದುದಲ್ಲಾ ಇನ್ನೂ ಇತರ ಪುಸ್ತಕಗಳನ್ನು ಸಹ ಓದಬೇಕು. ಮಕ್ಕಳು ಓದಬೇಕಾದ ಅನೇಕ ಪುಸ್ತಕಗಳಿವೆ. ಅವುಗಳನ್ನು ಓದಿದ್ರೆ ಮಕ್ಕಳ ಬುದ್ದಿ ಚುರುಕಾಗುತ್ತದೆ.  ಪುಸ್ತಕ ಓದಲು ಮಕ್ಕಳನ್ನು ಹೇಗೆ ಪ್ರೋತ್ಸಾಹಿಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳು  ಏಕೆ ಪುಸ್ತಕ  ಓದಬೇಕು?: 
ಪುಸ್ತಕಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಾಯಕಾರಿ ಮತ್ತು ಅದರಿಂದ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಇದರಿಂದ ಶಿಸ್ತನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ಇತರ ಪುಸ್ತಕಗಳನ್ನು ಓದುವುದ್ರಿಂದ ಬರುವ ಲಾಭ  ಶಾಲೆ ಅಭ್ಯಾಸಕ್ಕೆ ನೆರವಾಗುತ್ತದೆ. ಮಕ್ಕಳು ಹೊಸ ಹವ್ಯಾಸ ಬೆಳೆಸಿಕೊಳ್ಳಲು ಇದು ಸಹಾಯಕವಾಗುತ್ತದೆ. 

ಮನೆಯಲ್ಲಿರಲಿ ಪುಸ್ತಕ:
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಮನೆಯಲ್ಲಿ ಪುಸ್ತಕಗಳ ದಾಸ್ತಾನು ಇರಬೇಕು. ಹೆಚ್ಚು ಪುಸ್ತಕಗಳಿಲ್ಲದಿದ್ದರೂ  ಮಗುವಿಗೆ ಬೇಕಾಗುವ ಪುಸ್ತಕವನ್ನು ಇಟ್ಟಿರಿ. ನಿಮ್ಮ ಮಗು ಪುಸ್ತಕಗಳನ್ನು ಓದುವಲ್ಲಿ ಆಸಕ್ತಿ ತೋರುತ್ತಿದೆ ಎಂದಾಗ ಮತ್ತಷ್ಟು ಪುಸ್ತಕವನ್ನು ಮನೆಗೆ ತನ್ನಿ. 

ಡಿಜಿಟಲ್ ಲೈಬ್ರರಿ:
ಮಕ್ಕಳು ಪುಸ್ತಕ ಓದಲು ಆಸಕ್ತಿ ಹೊಂದಿದ ನಂತರ  ಡಿಜಿಟಲ್ ಲೈಬ್ರರಿ ಉತ್ತಮವಾಗಿರುತ್ತದೆ. ಆದರೆ ಇನ್ನೂ ಅಭ್ಯಾಸ ಮಾಡ್ತಿದ್ದಾರೆ ಎಂದಾಗ ಡಿಜಿಟಲ್ ಲೈಬ್ರರಿ ಸುದ್ದಿಗೆ ಹೋಗ್ಬೇಡಿ. ಇದು ಮಕ್ಕಳ ಮನಸ್ಸಿನಲ್ಲಿ ಓದುವ ರುಚಿ ಕಡಿಮೆ ಮಾಡಬಹುದು. 

ಪಾಲಕರ ಹವ್ಯಾಸ ಪಾಲಿಸ್ತಾರೆ ಮಕ್ಕಳು:
ಪೋಷಕರು  ಬಾಲ್ಯದಲ್ಲಿ  ಪುಸ್ತಕಗಳನ್ನು ಓದದೇ ಇರಬಹುದು. ನೀವು ಪುಸ್ತಕ ಓದುತ್ತಿದ್ದರೆ ಮಕ್ಕಳಲ್ಲಿಯೂ ಓದಬೇಕೆಂಬ ಆಸಕ್ತಿ ಮೂಡುತ್ತದೆ. 

ವೇಗವಾಗಿ ಮಾತನಾಡಿ ಮತ್ತು ಓದಿ:
ನಿಮ್ಮ ಬಾಲ್ಯದಲ್ಲಿ ಹಿರಿಯರು ಗಟ್ಟಿಯಾಗಿ ಓದಲು ಹೇಳುತ್ತಿದ್ದರು. ಇದರಿಂದ ನೀವು ಚೆನ್ನಾಗಿ ನೆನಪಿಸಿಕೊಳ್ಳಬಹುದು. ನೀವು ಮಕ್ಕಳೊಂದಿಗೆ ಅದೇ ಕೆಲಸವನ್ನು ಮಾಡಬೇಕು. ಮಕ್ಕಳ ಜೊತೆ ಟಿವಿ ನೋಡುವ ಬದಲು ಪುಸ್ತಕಗಳನ್ನು ಓದಿ. ಆವಾಗ ಮಗು ಸ್ವತಃ ದೊಡ್ಡದಾಗಿ ಓದುತ್ತದೆ . 

ಮಕ್ಕಳು ಏನು ಇಷ್ಟಪಡುತ್ತಾರೆ?:
ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಕಲಿಸಲು ಬಯಸಿದ್ರೆ ಮೊದಲು ಅವರ ಆಸಕ್ತಿಯನ್ನು ಅರ್ಥಮಾಡಿಕೊಳ್ಳಿ. ಅವರ ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ನೀವು ಆಯ್ಕೆಗಳನ್ನು ನೀಡಬೇಕು. ಬೇರೆ ಬೇರೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ. ಅವರಿಗೆ ಇಷ್ಟವಾಗುವ ಪುಸ್ತಕ ಯಾವುದು ಎಂಬುದು ಆಗ ನಿಮ್ಮ ಅರಿವಿಗೆ ಬರುತ್ತದೆ. 

ಮಕ್ಕಳ ಮೇಲೆ ಕಣ್ಣಿರಲಿ:  
ಮಗುವು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರೆ ಮತ್ತು ವಿವಿಧ ರೀತಿಯ ವಿಷಯವನ್ನು ಓದಲು ಪ್ರಾರಂಭಿಸಿದರೆ  ನೀವು ಆ ವಿಷಯದ ಮೇಲೆ ನಿಗಾ ಇಡುವುದು ಸಹ ಮುಖ್ಯ. ಮಗು  ಏನು ಕಲಿಯುತ್ತಿದೆ ಎಂಬುದರ ಜ್ಞಾನ ನಿಮಗಿರಬೇಕು. 

ಪುಸ್ತಕ ಓದಿದ ನಂತರ  ಮಗುವಿನ ಜೊತೆ ಚರ್ಚೆ: 
ಮಗು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಹೊಂದಿದ್ದರೆ  ಪುಸ್ತಕಗಳನ್ನು ಓದಿದ ನಂತರ, ಮಕ್ಕಳು ಏನು ಯೋಚಿಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರ ಜೊತೆ ಅದರ ಬಗ್ಗೆ ಚರ್ಚೆ ಮಾಡಿ. ಆಗ ಮಗುವಿಗೆ ಆಸಕ್ತಿ ಹೆಚ್ಚಾಗುತ್ತದೆ.