ಈ ಮಸಾಲೆ ಶೇಂಗಾ ಬೇಕರಿಯಲ್ಲಿ ಹಾಗೂ ಅಂಗಡಿಯಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತದೆ. ಇದರ ರುಚಿಗೆ ಫಿದಾ ಆಗದವರೇ ಇಲ್ಲ. ಹಾಗಾದ್ರೆ ಈ ಮಸಾಲೆಯುಕ್ತ ಶೇಂಗಾವನ್ನ ಮನೆಯಲ್ಲಿ ಮಾಡುವುದು ಹೇಗೆ?
ಮಸಾಲೆ ಶೇಂಗಾ ಮಾಡಲು ಬೇಕಾಗುವ ಪದಾರ್ಥಗಳು, ಮಸಾಲೆ ಶೇಂಗಾ ಮಾಡುವ ವಿಧಾನವೇನು ಎಂಬುದನ್ನು ನೋಡಿ.
ಬೇಕಾಗುವ ಪದಾರ್ಥಗಳು:
ಶೇಂಗಾ -250 ಗ್ರಾಮ್
ಎಣ್ಣೆ
ಕರಿಬೇವು
ಖಾರದ ಪುಡಿ
ಗರಂ ಮಸಾಲ
ಉಪ್ಪು
ಮಸಾಲೆ ಶೇಂಗಾ ಮಾಡುವುದು ಹೇಗೆ ?ಈಗ ರೆಡಿ ಮಾಡಿಕೊಂಡ ಖಾರವನ್ನು ಶೇಂಗಕ್ಕೆ ಹಾಕಿಕೊಂಡಿ ಚೆನ್ನಾಗಿ ಎಲ್ಲಾ ಶೇಂಗಾ ಖಾರದಲ್ಲಿ ಮುಳುಗುವಂತೆ ಕಲಸಿಕೊಳ್ಳಿ. ಕಲಸಿಕೊಂಡ ಬಳಿಕ ಖಾರ ಒಣಗಲು ಒಂದು 5 ನಿಮಿಷಗಳ ಕಾಲ ಬಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ನಿಮಿಷ ಬಿಟ್ಟು ಎಲ್ಲಾ ಶೇಂಗಾವನ್ನು ಅದಕ್ಕೆ ಹಾಕಿಕೊಳ್ಳಿ. ಉರಿ ಸಣ್ಣದಾಗಿರಲಿ. ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ 5 ರಿಂದ 8 ನಿಮಿಷದ ವರೆಗೂ ಚೆನ್ನಾಗಿ ಹುರಿದುಕೊಳ್ಳಿ.
ಬಳಿಕ ರೆಡಿಯಾದ ಶೇಂಗಾವನ್ನು ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಮಸಲಾ ಶೇಂಗಾ ಸವಿಯಲು ಸಿದ್ಧವಾಗುತ್ತದೆ. ನಿಮಗೆ ಎಷ್ಟು ಬೇಕೋ ಅಷ್ಟು ಖಾರ ಹಾಕಿಕೊಂಡು ಸವಿಯಬಹುದು. ಇದನ್ನು ಸಂಜೆಯ ಸ್ನ್ಯಾಕ್ಸ್ ವೇಳೆ ಸವಿಯಲು ರೆಡಿಯಾಗಿರುತ್ತದೆ. ಇದನ್ನು ಒಳ್ಳೆಯ ಸ್ಟೀಲ್ ಪಾತ್ರೆಯಲ್ಲಿ ಗಾಳಿಯಾಡದಂತೆ ಇಟ್ಟರೆ ಸುಮಾರು 1 ತಿಂಗಳ ಕಾಲ ಇಟ್ಟು ಸವಿಯಬಹುದು.