ಮಧುಮೇಹಿಗಳಿಗೆ ಓಟ್ಸ್ ತಿನ್ನುವುದು ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಓಟ್ಸ್ ರುಚಿಯಿಲ್ಲ ಎಂದು ತುಂಬಾ ಜನರು ಬಯಸುತ್ತಾರೆ. ಆದರೆ ಓಟ್ಸ್ ಬಳಸಿ ನೀವು ರುಚಿಯಾದ ಉಪ್ಪಿಟ್ಟು ಮಾಡಬಹುದು, ಇಲ್ಲಿ ನಾವು ಓಟ್ಸ್ ಉಪ್ಪಿಟ್ಟು ರೆಸಿಪಿ ನೀಡಿದ್ದೇವೆ, ಟ್ರೈ ಮಾಡಿ.
ಬೇಕಾಗುವ ಸಾಮಗ್ರಿ:
ಓಟ್ಸ್ 1ಕಪ್
ತರಕಾರಿ (ಬಟಾಣಿ, ಆಲೂಗಡ್ಡೆ, ಟೊಮೆಟೊ, ಬೀನ್ಸ್ ಹೀಗೆ ನಿಮಗೆ ಬೇಕಾದ ತರಕಾರಿ ಬಳಸಬಹುದು)
ಈರುಳ್ಳಿ 3
ಹಸಿ ಮೆಣಸು
ಎಣ್ಣೆ
2 ಚಮಚ
1/2 ಚಮಚ ಸಾಸಿವೆಯೆಣ್ಣೆ
1 ಚಮಚ ಉದ್ದಿನ ಬೇಳೆ
2 ಚಮಚ ಕಡ್ಲೆಬೇಳೆ
ಕರಿಬೇವು
ಮಾಡುವ ವಿಧಾನ:
ಪಾತ್ರೆ ಬಿಸಿ ಮಾಡಿ, ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಈರುಳ್ಳಿ, ಹಸಿ ಮೆಣಸು ಹಾಕಿ, ಬಳಿಕ ತರಕಾರಿ 3-4 ನಿಮಿಷ ಫ್ರೈ ಮಾಡಿ. ಓಟ್ಸ್ ಹಾಕಿ ನಂತರ ಉಪ್ಪು, ಅರಿಶಿಣ ಪುಡಿ , 1/4 ಕಪ್ ನೀರು, ನಂತರ 2 ನಿಮಿಷ ಬೇಯಿಸಿ ನಂತರ ಮುಚ್ಚಳ ತೆಗೆದು ಮತ್ತೆ 2 ನಿಮಿಷ ಬೇಯಿಸಿ, ಹೀಗೆ ಬೇಯಿಸುವಾಗ ಆಗಾಗ ಸೌಟ್‌ನಿಂದ ಆಡಿಸಿ. ಓಟ್ಸ್ ಉಪ್ಪಿಟ್ಟು ಪುಡಿ, ಪುಡಿಯಾಗಿರಬೇಕು, ಅಂಟು-ಅಂಟಾಗಿ ಇರಬಾರದು.
ಓಟ್ಸ್ ಪ್ರಯೋಜನ:
ಓಟ್ಸ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಏಕೆಂದರೆ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ ಇದರಲ್ಲಿ ನಾರಿನಂಶ ಹೆಚ್ಚಿರಲಿದೆ ಹಾಗಾಗಿ ಇದು ನಿಧಾನಕ್ಕೆ ಜೀರ್ಣವಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿಡಲು ಸಹಕಾರಿ. ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ ಜೀರ್ಣಕ್ರಿಯೆಗೆ ಸಹಕಾರಿ ಹಾಗಾಗಿ ಮಲಬದ್ಧತೆ ಸಮಸ್ಯೆಯೂ ಇರಲ್ಲ.
ಇತರ ಪ್ರಯೋಜನಗಳು:
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ ತೂಕ ನಿಯಂತ್ರಣಕ್ಕೆ ಸಹಕಾರಿ ತ್ವಚೆ ಆರೋಗ್ಯಕ್ಕೆ ಒಳ್ಳೆಯದು ಕರುಳಿನ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ತೂಕ ನಿಯಂತ್ರಣಕ್ಕೆ ಸಹಕಾರಿ.
ಓಟ್ಸ್ ತಿನ್ನುವಾಗ ಮಧುಮೇಹಿಗಳಿಗೆ ಈ ಅಂಶ ಗಮನಿಸಿದರೆ ತುಂಬಾ ಒಳ್ಳೆಯದು ಯಾವುದೇ ಆಹಾರದಲ್ಲಿ ಮಿತಿಯಲ್ಲಿ ಸೇವಿಸಬೇಕು. ಓಟ್ಸ್ ಕೂಡ ಮಿತಿಯಲ್ಲಿ ಸೇವಿಸಿ ಓಟ್ಸ್ ಜೊತೆಗೆ ಡ್ರೈ ಫ್ರೂಟ್ಸ್ ಸೇರಿಸಿ ಚಕ್ಕೆಪೌಡರ್ ಸೇರಿಸಿ ಜೇನು, ಬೆಲ್ಲ, ಸಕ್ಕರೆ ಸೇರಿಸಬೇಡಿ ನೀವು ಹಾಲಿನ ಬದಲಿಗೆ ಸೋಯಾ ಹಾಲು ಬಳಸಿ.
ಓಟ್ಸ್‌ನಲ್ಲಿರುವ ಪೋಷಕಾಂಶಗಳು ಕ್ಯಾಲೋರಿ: 307 ನೀರಿನಂಶ: 8.7ಗ್ರಾಂ ಪ್ರೊಟೀನ್ 10 ಗ್ರಾಂ ಕಾರ್ಬ್ಸ್ 5 ಗ್ರಾಂ ನಾರಿನಂಶ ಕೊಬ್ಬಿನಂಶ ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ಮ್ಯಾಂಗನೀಸ್ ರಂಜಕ ಸತು ವಿಟಮಿನ್ ಬಿ1 ಕಬ್ಬಿಣದಂಶ ಸೆಲೆನಿಯಂ ಮೆಗ್ನಿಷ್ಯಿಯಂ.
ಓಟ್ಸ್‌ನಿಂದ ಏನಾದರು ಅಡ್ಡಪರಿಣಾಮವಿದೆಯೇ?:
ಓಟ್ಸ್ ಸಾಮಾನ್ಯವಾಗಿ ಅಡ್ಡಪರಿಣಾಮ ಉಂಟು ಮಾಡಲ್ಲ, ಆದರೆ ಕೆಲವರಿಗೆ ಓಟ್ಸ್ ಅಲರ್ಜಿ ಕೂಡ ಆಗಬಹುದು. ಓಟ್ಸ್ ತಿಂದಾಗ ಈ ಲಕ್ಷಣಗಳು ಕಂಡು ಬಂದರೆ ನಿಮಗೆ ಅಲರ್ಜಿ ಇದೆ ಎಂದರ್ಥ ತ್ವಚೆಯಲ್ಲಿ ತುರಿಕೆ ಉಸಿರಾಟದಲ್ಲಿ ತೊಂದರೆ ರಕ್ತದೊತ್ತಡ ಕಡಿಮೆಯಾಗುವುದು ವಾಂತಿ ಬೇಧಿ ತಲೆ ಸುತ್ತು ತುರಿಕೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.