ಹೃದಯದ ಆರೋಗ್ಯಕ್ಕೆ ಈ ಯೋಗದ ಭಂಗಿ ಅತ್ಯುತ್ತಮ!

ಯೋಗ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ನಾವು ಅರಿತ್ತಿದ್ದೇವೆ. ಅದರಲ್ಲೂ ಪ್ರತಿದಿನ ನಾವು ಯೋಗ ಮಾಡೋದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಯೋಗದಿಂದಾಗಿ ಸ್ವಾಸ್ತ್ಯ ಆರೋಗ್ಯ, ಮಾನಸಿಕ ಆರೋಗ್ಯದಿಂದ ಹಿಡಿದು ಒಟ್ಟಾರೆ ಆರೋಗ್ಯಕ್ಕೆ ಯೋಗವೇ ಪ್ರಮುಖ ಮಾರ್ಗ.

ಅದರಲ್ಲೂ ನಮ್ಮ ತೂಕ ಇಳಿಸುವಂತಹ ಪ್ರಯತ್ನಕ್ಕೆ ಯೋಗವು ಸಹಕಾರಿ ಜೊತೆಗೆ ಹೃದಯದ ಆರೋಗ್ಯದಲ್ಲಿ ಯೋಗ ಪ್ರಮುಖ ಪಾತ್ರ ವಹಿಸಲಿದೆ. ಯೋಗದಿಂದಾಗಿ ಹೆಚ್ಚು ಕಾಲ ನಿಮ್ಮ ಹೃದಯದ ಆರೋಗ್ಯ ಕಾಪಾಡಬಹುದಾಗಿದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಮತ್ತು ಹೃದ್ರೋಗದ ಅಪಾಯವನ್ನು ನಿಯಂತ್ರಿಸಲು ಯೋಗವನ್ನು ಪರಿಣಾಮಕಾರಿ ಸಾಧನವಾಗಿ ಬಳಸಬಹುದು. 

ಇನ್ನು ಯೋಗದ ನಾನಾ ಭಂಗಿಗಳು ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ. ಹಾಗಾದ್ರೆ ಯಾವ ಯೋಗದ ಆಸನವು ನಮ್ಮ ಹೃದಯದ ಆರೋಗ್ಯ ಕಾಪಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ನಾಗರ ಭಂಗಿ ಅಥವಾ ಭುಜಂಗಾಸನ:
ನಾಗರ ಭಂಗಿಯು ನಿಮ್ಮ ಹೃದಯ, ಶ್ವಾಸಕೋಶ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಈ ಯೋಗಾಸನವನ್ನು ಮಾಡುವುದರಿಂದ ಬೆನ್ನು ನೋವು ನಿವಾರಣೆಗೆ ಹಾಗೂ ರಕ್ತ ಪರಿಚಲನೆ ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಾಗರ ಭಂಗಿಯು ಮೂತ್ರಜನಕಾಂಗ ಮತ್ತು ಥೈರಾಯ್ಡ್ ಗ್ರಂಥಿಗಳಿಗೂ ಒಳ್ಳೆಯದು. ಇದರಿಂದ ರಕ್ತ ಪರಿಚಲನೆ ವೇಗ ಪಡೆದುಕೊಳ್ಳಲಿದೆ ಹೀಗಾಗಿ ನಿಮ್ಮ ಹೃದಯದ ಆರೋಗ್ಯ ಮತ್ತಷ್ಟು ಸುಧಾರಿಸಲಿದೆ.

ಚಕ್ರಾಸನ:
ಬೆನ್ನು, ಬೆನ್ನುಮೂಳೆಯ ಕಾಲಮ್, ಕಾಲು, ಕಿಬ್ಬೊಟ್ಟೆಯ ಸ್ನಾಯುಗಳು, ತೋಳುಗಳು, ಸೊಂಟದ ಸ್ನಾಯುಗಳು ಬಲವಾಗಬೇಕಾದರೆ ಚಕ್ರಾಸನ ಉತ್ತಮ. ಎದೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ, ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸುತ್ತದೆ, ಹೃದಯದ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತನಾಳಗಳಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ.

ತಾಡಾಸನ:
ಪರ್ವತಾಸನ ಅಥವಾ ತಾಡಾಸನ ಎಂದು ಕರೆಯಲ್ಪಡುವ ಈ ಭಂಗಿಯಲ್ಲಿ ಮೌಂಟೇನ್ ಭಂಗಿ ಅಥವಾ ತಾಡಾಸನವು ತೂಕ ನಿರ್ವಹಣೆ, ಒತ್ತಡ ಪರಿಹಾರವಾಗಲಿದೆ. ತಾಡಾಸನವು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಹೀಗಾಗಿ ಹೃದಯದ ಆರೋಗ್ಯಕ್ಕೂ ಇದು ಉತ್ತಮ . ಸೇತು ಬಂಧಾಸನ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸೇತುಬಂಧಾಸನ ಸಹಾಯ ಮಾಡಲಿದೆ. ದೇಹದಲ್ಲಿ ರಕ್ತ ಪರಿಚಲನೆಗೆ ಇದು ಸಹಾಯ ಮಾಡಲಿದೆ.

ಸೇತು ಬಂಧಾಸನ:
ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸೇತುಬಂಧಾಸನ ಸಹಾಯ ಮಾಡಲಿದೆ. ದೇಹದಲ್ಲಿ ರಕ್ತ ಪರಿಚಲನೆಗೆ ಇದು ಸಹಾಯ ಮಾಡಲಿದೆ. 

ಧನುರಾಸನ:
ಧನುರಾಸನ ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಜೀರ್ಣಕ್ರಿಯೆ, ಸುಧಾರಿತ ಭಂಗಿಯಾಗಿದೆ, ಈ ಭಂಗಿಯಲ್ಲಿ ಬೆನ್ನು ಬಾಗುವುದರಿಂದ ಬೆನ್ನು ಮೂಳೆ ಸಾಮರ್ಥ್ಯ ಹೆಚ್ಚಾಗಲಿದೆ. ಸ್ನಾಯುಗಳ ಆರೋಗ್ಯಕ್ಕೂ ಇದು ಉತ್ತಮ ಭಂಗಿಯಾಗಿದೆ.

ಶವಾಸನ:
ಶವಾಸನ ಅತ್ಯಂತ ಸುಲಭ ಆಸನ ಎನಿಸಬಹುದು. ಆದ್ರೆ ಈ ಶವಾಸನವು ನಿಮ್ಮ ದೇಹದ ಮೇಲೆ ನಿಮಗೆ ಹತೋಟಿ ತರಲು ಸಹಕಾರಿಯಾಗಿದೆ. ಹೀಗಾಗಿ ಯೋಗ ಅಭ್ಯಾಸದ ಕೊನೆಯಲ್ಲಿ ಶವಾಸನ ಮಾಡುವುದು ಉತ್ತಮ. ಇದು ನಿಮ್ಮ ಮಾನಸಿಕ ನೆಮ್ಮದಿ ಹಾಗೂ ದೈಹಿಕವಾಗಿ ರಕ್ತ ಪರಿಚಲನೆಗೆ ಸಹಕಾರಿಯಂತೆ. 

ತ್ರಿಕೋನಾಸನ:
ತ್ರಿಕೋನಸಾನವು ಹಕವು ಆರೋಗ್ಯಕರ ಅಂಶ ತನ್ನಲ್ಲಿಟ್ಟುಕೊಂಡಿದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕಾಲುಗಳು, ಸೊಂಟ, ಬೆನ್ನು, ಭುಜ ಮತ್ತು ಎದೆಯನ್ನು ಸ್ನಾಯುಗಳು ಬಲವಾಗಲು ಸಹಾಯ ಮಾಡಲಿದೆ.