ಮನೆಯಲ್ಲಿ ಬಾಗಿಲು ಎಷ್ಟು ಮುಖ್ಯವೋ ಅಷ್ಟೇ ಕಿಟಕಿಗಳೂ ಮುಖ್ಯ. ಮನೆಯೊಳಗಡೆ ಗಾಳಿ-ಬೆಳಕು ಸರಿಯಾಗಿ ಬರಬೇಕೇಂದರೆ ಕಿಟಕಿಗಳನ್ನು ಸರಿಯಾಗಿ ಇಡುವುದು ತುಂಬಾನೇ ಅವಶ್ಯಕ. ಇಲ್ಲದಿದ್ದರೆ ಮನೆ ಕತ್ತಲಾಗಿರುತ್ತದೆ, ಆದ್ದರಿಂದ ಎಷ್ಟೇ ಚಿಕ್ಕ ಮನೆಯಾಗಿರಲಿ ಕಿಟಕಿ ಇರಲೇಬೇಕು.
ವಾಸ್ತು ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲು ಕಿಟಕಿಯನ್ನು ಎಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಲಾಗಿದೆ. ಮನೆ ಕಟ್ಟಿಸುತ್ತಿದ್ದರೆ ವಾಸ್ತು ಬಗ್ಗೆ ನಂಬಿಕೆಯಿದ್ದರೆ ಇಲ್ಲಿದೆನೋಡಿ ಕೆಲ ವಾಸ್ತು ಟಿಪ್ಸ್:
ಕಿಟಕಿಗಳು ಬಾಗಿಲುಗಳ ಎದುರು ಇರಬಾರದು:
ವಾಸ್ತು ಪ್ರಕಾರ, ಕಿಟಕಿಗಳು ಯಾವಾಗಲೂ ಬಾಗಿಲುಗಳಿಗೆ ವಿರುದ್ಧವಾಗಿರಬಾರದು ಎಂದು ಹೇಳಲಾಗುವುದು, ಬಾಗಿಲುಗಳು ಈ ರೀತಿ ಇರುವುದರಿಂದ ಮನೆಯೊಳಗಡೆ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಹೀಗಾಗಿ ಮನೆಗೆ ಬಾಗಿಲು ಇಡುವಾಗ ಅದರ ಎದುರಿಗೆ ಕಿಟಕಿಗಳು ಇರಬಾರದು. ಇದು ವೈಜ್ಞಾನಿಕವಾಗಿಯೂ ಸರಿ ಪಾಯಿಂಟ್. ಬಾಗಿಲಿನ ಮೂಲಕ ಮನೆಯೊಳಗಡೆ ಬೆಳಕು ಇರುತ್ತದೆ, ಇನ್ನು ಅದೇ ಬೆಳಕು ಬರುವ ಕಡೆ ಕಿಟಕಿ ಇದ್ದು ಏನು ಪ್ರಯೋಜನ ಅಲ್ವಾ?
ನೀವು ಅಡುಗೆ ಮನೆಯಲ್ಲಿ ಕಿಟಕಿ ಎಲ್ಲಿಡಬೇಕು?:
ಅಡುಗೆ ಮನೆಯಲ್ಲಿ ಕಿಟಕಿ ದಿಕ್ಕು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಗ್ಯಾಸ್ ಇಡುವ ಎದುರುಗಡೆ ಕಿಟಕಿ ಇದ್ದರೆ ಒಳ್ಳೆಯದು. ಇನ್ನು ಅಡುಗೆ ಮನೆಯ ಕಿಟಕಿಯನ್ನು ಬೆಳಗ್ಗೆ ಮತ್ತು ಸಂಜೆ ತೆರೆಯಬೇಕು, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉತ್ತಮವಾಗಿರುತ್ತದೆ. .
ಮನೆಯಲ್ಲಿ ಬಾಗಿಲುಗಳ ಸಂಖ್ಯೆಯಂತೆಯೇ ಕಿಟಕಿಗಳಿಗೂ ವಾಸ್ತು ಪ್ರಕಾರ ಸಂಖ್ಯೆ ಎಷ್ಟಿರಬೇಕು?
ವಾಸ್ತು ಪ್ರಕಾರ, ಕಿಟಕಿಗಳಲ್ಲಿ ಸಮ ಸಂಖ್ಯೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ, ಮನೆಯು 2, 4, 6, 8 ನಂತಹ ಒಂದೇ ಸಂಖ್ಯೆಯ ಕಿಟಕಿಗಳಿದ್ದರೆ ಒಳ್ಳೆಯದು. ಮನೆಯಲ್ಲಿ ಕಿಟಕಿ ಸಮ ಸಂಖ್ಯೆಯಲ್ಲಿ ಇದ್ದರೆ ನಿಮ್ಮಲ್ಲಿ ಸೌಹಾರ್ದತೆ ಹೆಚ್ಚಾಗುವುದು. ಮನೆಯಲ್ಲಿ ಬೆಸ ಸಂಖ್ಯೆಯ ಕಿಟಕಿಗಳು ಇರಬಾರದು.
ಮನೆಯಲ್ಲಿ ಕಿಟಕಿ ಈ ದಿಕ್ಕಿನಲ್ಲಿರಲಿ:
ನಿಮ್ಮ ಮನೆಯಲ್ಲಿ ಹೆಚ್ಚಿನ ಸಂಖ್ಯೆಯ ಕಿಟಕಿಗಳಿದ್ದರೆ ಅವುಗಳಲ್ಲಿ ಹೆಚ್ಚಿನ ಕಿಟಕಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಹೆಚ್ಚಿರಬೇಕು. ಕಿಟಕಿಗಳು ಈ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದು ಎಂದು ಹೇಳಲಾಗುವುದು. ಕಿಟಕಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು, ಇದರಿಂದ ಮನೆಯಲ್ಲಿ ಸಮಸ್ಯೆ ಹೆಚ್ಚಾಗುವುದು ಎಂದು ಹೇಳಲಾಗುವುದು.
ಕಿಟಕಿಗಳ ಗಾತ್ರ:
ನಿಮ್ಮ ಮನೆಯ ಎಲ್ಲಾ ಕಿಟಕಿಗಳು ಯಾವುದೇ ಬದಲಾವಣೆಗಳಿಲ್ಲದೆ ಒಂದೇ ಗಾತ್ರದಲ್ಲಿರಬೇಕು. ಕೋಣೆಯು ಪಶ್ಚಿಮ ದಿಕ್ಕಿನಲ್ಲಿ ಕಿಟಕಿಗಳನ್ನು ಹೊಂದಿದ್ದರೆ, ಪ್ರವೇಶದ್ವಾರವು ಉತ್ತರ ದಿಕ್ಕಿನಲ್ಲಿರಬೇಕು. ಮನೆಯಲ್ಲಿರುವ ಎಲ್ಲಾ ಕಿಟಕಿಗಳ ಗಾತ್ರವು ಅಗಲದಲ್ಲಿ ಬದಲಾಗಬಹುದು ಆದರೆ ಎತ್ತರದಲ್ಲಿ ಅಲ್ಲ ಎಂಬುದನ್ನು ಗಮನಿಸಬೇಕು.
ಅಂತಹ ಪರದೆಗಳನ್ನು ಕಿಟಕಿಯಲ್ಲಿ ಇರಿಸಿ:
ದಕ್ಷಿಣಕ್ಕೆ ಎದುರಾಗಿರುವ ಕಿಟಕಿಗಳನ್ನು ಭಾರೀ ಪರದೆಗಳಿಂದ ಮುಚ್ಚಬೇಕು ಆದ್ದರಿಂದ ಸೂರ್ಯನ ಬೆಳಕು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುವುದಿಲ್ಲ. ಸೂರ್ಯನ ಬೆಳಕು ಈ ದಿಕ್ಕಿನಿಂದ ಮನೆಯೊಳಗೆ ಪ್ರವೇಶಿಸಿದರೆ ಮನೆಯಲ್ಲಿ ಸದಸ್ಯರಿಗೆ ರೋಗ ಹೆಚ್ಚಾಗುವುದು ಎಂದು ಹೇಳಲಾಗುವುದು. ಉತ್ತರ ದಿಕ್ಕಿನ ಕಿಟಕಿಯಲ್ಲಿ ನೀಲಿ ಪರದೆಗಳನ್ನು ಮತ್ತು ಪೂರ್ವ ಮತ್ತು ಪಶ್ಚಿಮದಲ್ಲಿ ತಿಳಿ ಬಣ್ಣದ ಪರದೆಗಳನ್ನು ಇರಿಸಿ. ಮನೆಯ ಕಿಟಕಿಯ ಪರದೆ ಬಣ್ಣ ಆಕರ್ಷಕವಾಗಿರಬೇಕು.
ಡೈನಿಂಗ್ ಹಾಲ್ನಲ್ಲಿ ಕಿಟಕಿಗಳು ಹೇಗಿರಬೇಕು:
ವಾಸ್ತು ಪ್ರಕಾರ, ಊಟದ ಪ್ರದೇಶದಲ್ಲಿ ಕಿಟಕಿಗಳು ಸ್ವಲ್ಪ ದೊಡ್ಡದಾಗಿರಬೇಕು ಮತ್ತು ಅವು ಊಟದ ಪ್ರದೇಶದ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ತೆರೆಯಬೇಕು. ಕಿಟಕಿಗಳಿಗೆ ಈ ದಿಕ್ಕಿನಲ್ಲಿದ್ದರೆ ಸಮೃದ್ಧಿ, ಪ್ರಗತಿ ಮತ್ತು ಆರೋಗ್ಯ ಹೆಚ್ಚಾಗುವುದು ಎಂದು ನಂಬಲಾಗುವುದು.