ಮನೆಯಲ್ಲಿ ಬೆಳ್ಳಿ ಆನೆ ಏಕಿಡುತ್ತಾರೆ? ಇಡುವಾಗ ಯಾವ ನಿಯಮ ಪಾಲಿಸಬೇಕು ನೋಡಿ.!

ವಾಸ್ತು ಶಾಸ್ತ್ರದಲ್ಲಿ ಮನೆಯ ದೋಷಗಳನ್ನು ನಿವಾರಿಸಲು ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಅನೇಕ ಮಾರ್ಗಗಳಿವೆ. ಧರ್ಮಗ್ರಂಥಗಳಲ್ಲಿ, ಆನೆಯನ್ನು ಧರ್ಮ ಮತ್ತು ತಾಳ್ಮೆಯ ಅಂಶವೆಂದು ವಿವರಿಸಲಾಗಿದೆ ಮತ್ತು ಲಕ್ಷ್ಮಿ ದೇವಿಯೊಂದಿಗಿನ ಅದರ ನೇರ ಸಂಬಂಧವನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿಯೂ ಸಹ ಆನೆಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳನ್ನು ಅದನ್ನು ಅದೃಷ್ಟ ಮತ್ತು ಧರ್ಮದ ಸಂಕೇತವೆಂದು ಪರಿಗಣಿಸಲಾಗಿದೆ.

ಮಾ ಲಕ್ಷ್ಮಿಯ ಪೋಸ್ಟರ್ಗಳಲ್ಲಿ ನೀವು ನೋಡಿರಬಹುದು ಲಕ್ಷ್ಮಿಯ ಎರಡೂ ಬದಿಗಳಲ್ಲಿ ಸೊಂಡಿಲುಗಳನ್ನ ಮೇಲಕ್ಕೆತ್ತಿದ ಜೋಡಿ ಆನೆಗಳು ಕಂಡುಬರುತ್ತವೆ. ವಾಸ್ತವವಾಗಿ, ಆನೆಯ ಮೇಲೆ ಕುಳಿತಿರುವ ಲಕ್ಷ್ಮಿಯನ್ನು ಧರ್ಮ ಲಕ್ಷ್ಮಿ ಎಂದು ಕರೆಯಲಾಗುತ್ತದೆ ಮತ್ತು ಅಂತಹ ಲಕ್ಷ್ಮಿ ಎಲ್ಲಿ ನೆಲೆಸುತ್ತಾಳೆಯೋ ಅಲ್ಲಿ ಧರ್ಮ ಮತ್ತು ಸಂಪತ್ತು ಎರಡೂ ನೆಲೆಸುತ್ತವೆ ಎಂದು ನಂಬಲಾಗಿದೆ.

ಎರಡನೆಯದಾಗಿ ಮಂಗಳಕರ ಸಂಕೇತವಾದ ಗಣಪತಿಯು ಆನೆಗೆ ನೇರ ಸಂಬಂಧವನ್ನು ಹೊಂದಿದ್ದು, ಶುಭ ಮತ್ತು ಲಕ್ಷ್ಮಿ ಒಟ್ಟಿಗೆ ಬಂದರೆ ಮನೆಯ ಅದೃಷ್ಟವು ಒಲಿಯುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಆನೆಯು ಬಹಳ ಬುದ್ಧಿವಂತ ಜೀವಿಯಾಗಿದೆ, ಅದರ ದೀರ್ಘಾಯುಷ್ಯ, ದೊಡ್ಡ ಕಿವಿಗಳು ಮತ್ತು ತಾಳ್ಮೆಯು ಆನೆಗೆ ಗಾಂಭೀರ್ಯ ತಂದುಕೊಡುತ್ತದೆ. ಆನೆಯು ಶಕ್ತಿ, ದೀರ್ಘಾಯುಷ್ಯ, ನಿಷ್ಠೆ, ಬುದ್ಧಿವಂತಿಕೆ ಮತ್ತು ತಾಳ್ಮೆಗೆ ಜೀವಂತ ಪುರಾವೆಯಾಗಿದೆ. 

ವಾಸ್ತು ಶಾಸ್ತ್ರದಲ್ಲಿ ಬೆಳ್ಳಿ ಮತ್ತು ಹಿತ್ತಾಳೆ ಆನೆಗಳನ್ನು ಮನೆಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಬೆಳ್ಳಿಯ ಆನೆಯ ಪ್ರತಿಮೆಯನ್ನು ಇಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ವಾಸ್ತುದಲ್ಲಿ ಹೇಳಲಾಗಿದೆ. ಇದು ಗಣಪತಿ ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದವನ್ನು ನೀಡಲಿದೆ ಎಂದು ನಂಬಿಕೆ ಇದೆ. 

ಮನೆಯ ಉತ್ತರ ದಿಕ್ಕಿನಲ್ಲಿ ಒಂದು ಜೋಡಿ ಆನೆಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿ ಮತ್ತು ಆರ್ಥಿಕ ಲಾಭವನ್ನು ತರುತ್ತದೆ ಎಂದು ಹೇಳಲಾಗಿದೆ. ಜಾತಕದಲ್ಲಿ ರಾಹುವು ಐದನೇ ಅಥವಾ ಹನ್ನೆರಡನೇ ಸ್ಥಾನದಲ್ಲಿದ್ದರೆ ಆನೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ರಾಹುವಿಗೆ ಶಾಂತಿ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಮನೆಯಲ್ಲಿ ಒಂದು ಜೋಡಿ ಬೆಳ್ಳಿ ಆನೆಗಳನ್ನು ಇಟ್ಟುಕೊಳ್ಳುವುದು ಸಂಪತ್ತಿನ ಹೊಸ ಮೂಲಗಳನ್ನು ತೆರೆಯುತ್ತದೆ ಮತ್ತು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಆನೆಯ ವಿಗ್ರಹವನ್ನು ಮಕ್ಕಳು ಓದುವ ಕೊಠಡಿಯಲ್ಲಿಟ್ಟರೆ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ಹೊಂದುತ್ತಾರೆ ಮತ್ತು ಮೆದುಳು ಏಕಾಗ್ರತೆಯನ್ನು ಪಡೆಯುತ್ತಾರೆ ಜೊತೆಗೆ ಅವರ ಯಶಸ್ಸಿಗೆ ಇದೊಂದು ಕಾರಣವಾಗಲಿದೆ ಎಂದು ನಂಬಲಾಗಿದೆ.

ಒಂದು ಜೋಡಿ ಆನೆಗಳ ವಿಗ್ರಹವನ್ನು ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಇಟ್ಟರೆ ಸಂಪತ್ತಿನ ಹಾದಿಯು ಮನೆಯನ್ನು ತಲುಪುತ್ತದೆ ಎಂದು ವಾಸ್ತು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಆನೆಯ ವಿಗ್ರಹಗಳನ್ನು ಜೋಡಿಯಾಗಿ ಇರಿಸಿದರೆ, ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಮಧುರತೆ ಇರುತ್ತದೆ ಹಾಗೆ ಆನೆಯ ಬಲದಂತೆ ಪತಿ ಪತ್ನಿ ದಾಂಪತ್ಯ ಗಟ್ಟಿಯಾಗಿರುತ್ತದೆ ಎಂದು ನಂಬಲಾಗಿದೆ. 

ಬೆಳ್ಳಿ ಅಥವಾ ಹಿತ್ತಾಳೆಯ ಆನೆಯನ್ನು ಮನೆಯಲ್ಲಿ ಇಡುವುದು ಶುಭ, ಆದರೆ ಆನೆಯ ವಿಗ್ರಹವನ್ನು ಇರಿಸುವಾಗ, ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಆನೆಯ ವಿಗ್ರಹವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬಾರದು. ಆರ್ಥಿಕ ಲಾಭಕ್ಕಾಗಿ ನಿಮ್ಮ ಮನೆ ಅಥವಾ ಅಂಗಡಿಯಲ್ಲಿ ಆನೆಯ ಪ್ರತಿಮೆಯನ್ನು ಇಡುತ್ತಿದ್ದರೆ, ಆನೆಯ ಸೊಂಡಿಲು ಮೇಲಕ್ಕೆ ಎತ್ತಿರುವ ವಿಗ್ರಹವನ್ನೇ ಇಡಬೇಕು. ನೀವು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗಾಗಿ ಆನೆಯ ವಿಗ್ರಹವನ್ನು ಇಡುತ್ತಿದ್ದರೆ, ಆನೆಯ ಸೊಂಡಿಲು ಕೆಳಕ್ಕೆ ಇಳಿಮುಖವಾಗಿರುವ ವಿಗ್ರಹ ಇಡಬೇಕು. ಬೆಳ್ಳಿ ಆನೆಯನ್ನು ಖರೀದಿಸಲು ಸಾಧ್ಯವಾಗದಿದ್ದರೆ ಹಿತ್ತಾಳೆಯ ಆನೆಯ ಪ್ರತಿಮೆಯನ್ನು ಇಡಬಹುದು. ನಿಮಗೆ ಆನೆಯ ಬೆಳ್ಳಿ ಅಥವಾ ಹಿತ್ತಾಳೆಯ ವಿಗ್ರಹವನ್ನು ಇಡಲು ಸಾಧ್ಯವಾಗದಿದ್ದರೆ, ಕಲ್ಲಿನ ವಿಗ್ರಹವನ್ನು ಇಡಬಹುದು, ಆದರೆ ಪ್ಲಾಸ್ಟಿಕ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹವನ್ನು ಇಡಬೇಡಿ. ಒಂದು ಜೋಡಿ ಬೆಳ್ಳಿ ಆನೆಗಳನ್ನು ಇಟ್ಟುಕೊಳ್ಳುವಾಗ, ಅವುಗಳ ಮುಖಗಳು ಪರಸ್ಪರ ಎದುರಾಗಿರಬೇಕು ಮತ್ತು ವಿರುದ್ಧ ದಿಕ್ಕಿನಲ್ಲಿರಬಾರದು.