ಲೈಂಗಿಕ ಕ್ರಿಯೆಯ ಬಗ್ಗೆ ಅನೇಕರು ಮಡಿವಂತಿಕೆ ಹೊಂದಿದ್ದಾರೆ. ಆ ಬಗ್ಗೆ ಮಾತನಾಡಿದರೆ ಸಾಕು ಮಾರು ದೂರ ಹೋಗಿ ನಿಲ್ಲುತ್ತಾರೆ. ಇನ್ನು ಅನೇಕರು ಸಂಭೋಗದಿಂದ ಅಪಾಯ ಎನ್ನುವ ತಪ್ಪು ಕಲ್ಪನೆಯನ್ನೂ ಹೊಂದಿದ್ದಾರೆ.
ಆದರೆ ಲೈಂಗಿಕ ಕ್ರಿಯೆಯಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಲಾಭಗಳಿವೆ ಎನ್ನುತ್ತಾರೆ ತಜ್ಞರು. ಈಗಾಗಲೇ ಆ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಹಾಗಾದರೆ ಸಂಭೋಗದ ಕುರಿತು ತಜ್ಞರು ಏನನ್ನುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು:
ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೃದಯದ ಬಗ್ಗೆ ಕಾಳಜಿ ವಹಿಸಬೇಕು ಎಂದರೆ ಅನೇಕರು ಕುರುಕಲು ತಿಂಡಿಯನ್ನು ತ್ಯಜಿಸಿರುತ್ತಾರೆ. ಹಣ್ಣು ಹಂಪಲು ಸೇವನೆ ಮಾಡುತ್ತಾರೆ. ಅಚ್ಚರಿ ಎಂದರೆ, ವಾರದಲ್ಲಿ ಕನಿಷ್ಠ ಎರಡು ಬಾರಿ ಸಂಭೋಗ ಮಾಡಿದರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ:
ಯಾವುದೇ ರೋಗಾಣುಗಳು ದೇಹ ಪ್ರವೇಶಿಸದೇ ಇರಲು ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಲೈಂಗಿಕ ಕ್ರಿಯೆಯಿಂದ ಮನುಷ್ಯನ ದೇಹದಲ್ಲಿ ಈ ಶಕ್ತಿ ಹೆಚ್ಚಲಿದೆಯಂತೆ. ಇದರಿಂದ ಆಗ್ಗಾಗ ಕಾಡುವ ಜ್ವರ, ನೆಗಡಿ ಸಮಸ್ಯೆಗಳು ದೂರವಾಗಲಿವೆ.
ಒತ್ತಡ ಕಡಿಮೆ ಆಗುತ್ತೆ:
ಅನೇಕರು ಕೆಲಸದ ಒತ್ತಡ, ಕುಟುಂಬದ ಒತ್ತಡ ಹೀಗೆ ಅನೇಕ ಒತ್ತಡಗಳಿಂದ ಬಳಲುತ್ತಿರುತ್ತಾರೆ. ಈ ಒತ್ತಡ ಕಡಿಮೆ ಮಾಡಲು ಅನೇಕರು ಧ್ಯಾನ ಮಾಡುತ್ತಾರೆ. ಕೆಲವರು ಸಂಗೀತವನ್ನು ಆಲಿಸುತ್ತಾರೆ. ಒತ್ತಡ ಕಡಿಮೆ ಮಾಡಲು ಸಂಭೋಗ ಕೂಡ ಒಳ್ಳೆಯ ಮದ್ದಂತೆ. ವಾರಕ್ಕೆ ಎರಡು-ಮೂರು ಬಾರಿ ಮೈಥುನ ನಡೆಸುವುದರಿಂದ ವ್ಯಕ್ತಿ ಯಾವಾಗಲೂ ಉಲ್ಲಸಿತನಾಗಿರುತ್ತಾನೆ ಎನ್ನುತ್ತದೆ ಅಧ್ಯಯನ. ತಲೆನೋವು ಕಾಣಿಸಿಕೊಂಡ ಸಂದರ್ಭಗಳಲ್ಲಿ ಗಂಡ-ಹೆಂಡತಿ ಬೆರೆತರೆ ತಲೆನೋವು ತಕ್ಕ ಮಟ್ಟಿಗೆ ನಿವಾರಣೆ ಆಗಲಿದೆಯಂತೆ.
ಆಯುಷ್ಯ ವೃದ್ಧಿ:
ಸಂಭೋಗದ ವೇಳೆ ಪರಾಕಾಷ್ಠೆ ತಲುಪುತ್ತಾರೆ. ಆಗ ಡಿಹೈಡ್ರೊಪಿಯಾಂಡ್ರೊಸ್ಟೊರೊನ್ ಎನ್ನುವ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಚರ್ಮದ ಅಂಗಾಗಗಳು ಉತ್ತಮವಾಗುತ್ತವೆ. ಹಾಗಾಗಿ ವಾರಕ್ಕೆ ಕನಿಷ್ಠ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸುವವರು ದೀರ್ಘಾಯುಷಿಗಳಾಗುತ್ತಾರಂತೆ, ಉತ್ತಮ ನಿದ್ರೆಕೆಲವರಿಗೆ ನಿದ್ರೆ ಬರಲು ಹೆಚ್ಚಿನ ಸಮಯ ಹಿಡಿಯುತ್ತದೆ. ಲೈಂಗಿಕ ಕ್ರಿಯೆ ಮಾಡುವುದರಿಂದ ಬೇಗ ನಿದ್ರೆ ಬರಲಿದೆ. ಅಷ್ಟೇ ಅಲ್ಲ, ನಿದ್ರೆಯ ಗುಣಮಟ್ಟ ಕೂಡ ಹೆಚ್ಚಲಿದೆ. ಇನ್ನು ಸಂಭೋಗ ಮಾಡುವಾಗ ಪ್ರತಿ ವ್ಯಕ್ತಿ ಸಾಕಷ್ಟು ಶಕ್ತಿ ವ್ಯಯಿಸುತ್ತಾನೆ. ಇದು ದೇಹ ಫಿಟ್ ಆಗಿಟ್ಟುಕೊಳ್ಳಲು ಸಹಕಾರಿ ಎನ್ನುತ್ತಾರೆ ವೈದ್ಯರು.