ಲವ್ ಹುಟ್ಟೋದು ಹೇಗೆ ಗೊತ್ತಾ? ನೀವಂದುಕೊಂಡ ಹಾಗೆ ಅಲ್ವೇ ಅಲ್ಲ!

ಕೆಲವು ಹುಡುಗಿಯರಿಗೆ ಮದುವೆ ಆಗುವ ಹುಡುಗರು ಅಷ್ಟು ಹೈಟ್ ಇರಬೇಕು, ಇಷ್ಟು ಹೈಟ್ ಇರಬೇಕು ಎನ್ನುತ್ತಾರೆ. ಇನ್ನೂ ಕೆಲವು ಹುಡುಗರಿಗೆ ಅವನ ಕೈಲಿ ಅಷ್ಟು ಕಾಸಿರಬೇಕು, ಅವನ ಹೇರ್ಸ್ಟೈಲ್ ಹೇಗೆ ಇರಬೇಕು ಅಂತೆಲ್ಲ ಹುಡುಗೀರು ತಮ್ಮ ಎಕ್ಸ್ಪೆಕ್ಟೇಶನ್ಸ್ ಬಗ್ಗೆ ಹೇಳೋದನ್ನು ಕೇಳಿರಬಹುದು. 

ಕೆಲವರು ಈ ತರದವರನ್ನೇ ನೋಡಿ ಮದುವೆ ಆಗೋದೂ ಇರಬಹುದು. ಆದರೆ ಅವರ ಈ ಎಕ್ಸ್ಪೆಕ್ಟೇಶನ್ ರೀಚ್ ಆದ ಹುಡುಗ ಸಿಕ್ಕ ಅಂದ ಮಾತ್ರಕ್ಕೆ ಅವರ ಲೈಫು ಸಖತ್ ಆಗಿದೆ ಅಂತ ಹೇಳಲಿಕ್ಕಾಗದು. 

ಈ ಲೈಫಲ್ಲಿ ಯಾವ್ದು ನಮ್ಮ ಕೈಯಲ್ಲಿದೆ ಹೇಳಿ. ಈ ಲವ್ವಲ್ಲಿ ಬೀಳೋದೂ ಅಂಥಾ ಒಂದು ವಿಚಾರವೇ. ಲವ್ವಲ್ಲಿ ಬೀಳಲ್ಲ ಅಂತ ಶಪಥ ಮಾಡಿರೋದೂ ಬೀಳ್ತಾರೆ. ಮದುವೆ ಆಗಿದೆ, ಇನ್ನು ಲವ್ ಲೈಫ್ ಮುಗಿದು ಹೋಯ್ತು ಅಂತ ಸಮಾಧಾನದಲ್ಲಿರುವವರೂ ಲವ್ವಲ್ಲಿ ಬೀಳಬಹುದು. 

ನಾವು ಅಲ್ಲೇ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಯಾರಾದರೂ ನಮ್ಮ ಕಣ್ಣಿಗೆ ತುಂಬಾ ಆಕರ್ಷಕವಾಗಿ ಕಾಣಿಸಿ, ಅವರತ್ತ ನಮ್ಮ ಮನಸ್ಸು ಆಕರ್ಷಣೆಗೆ ಗುರಿಯಾಗಬಹುದು. ಇದು ಯಾವುದೇ ಸಂದರ್ಭದಲ್ಲೂ ಆಗಬಹುದು. ಯಾವುದೋ ವ್ಯಕ್ತಿತ್ವ, ನೋಟ ನಮ್ಮನ್ನು ಸೆಳೆದು ಬಿಡಬಹುದು. 

ಪ್ರೀತಿಯು ಮೆದುಳಿನಲ್ಲಿ ತುಂಬಾ ಸಂಕೀರ್ಣ ಪ್ರಕ್ರಿಯೆಯನ್ನು ಉಂಟು ಮಾಡುವುದು. ಇದರಲ್ಲಿ ಡೊಪಮೈನ್, ಆಕ್ಸಿಟೋಸಿನ್, ಸೆರಟೊನಿನ್ ನಂತಹ ಹಾರ್ಮೋನ್ ಗಳು ಕೂಡ ಒಳಗೊಂಡಿದೆ. ಈ ರಾಸಾಯನಿಕಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. 

ಡೊಪಮೈನ್ ಸಂತೋಷದ ಭಾವನೆ ಉಂಟು ಮಾಡುವುದು, ಆಕ್ಸಿಟೋಸಿನ್ ಭಾಂಧವ್ಯ ಮತ್ತು ನಂಬಿಕೆಯನ್ನು ಉಂಟು ಮಾಡುವುದು. ಅದೇ ಸೆರಟೊನಿನ್ ಮನಸ್ಥಿತಿ ಮತ್ತು ಸಾಮಾಜಿಕ ಭಾವನೆಗಳನ್ನು ನಿಯಂತ್ರಿಸುವುದು. ನಮಲ್ಲಿ ರೋಮ್ಯಾಂಟಿಕ್ ಭಾವನೆಯು ಉಂಟಾದ ವೇಳೆ ಈ ಹಾರ್ಮೋನ್ ಗಳು ಮೆದುಳಿನಲ್ಲಿ ಹರಿದು ನಾವು ಪ್ರೀತಿಸುತ್ತಿರುವ ವ್ಯಕ್ತಿ ಕಡೆಗಿನ ಭಾವನಾತ್ಮಕ ಬಾಂಧವ್ಯವನ್ನು ಇನ್ನಷ್ಟು ತೀವ್ರಗೊಳಿಸುವುದು. 

ಈ ನ್ಯೂರೋಕೆಮಿಕಲ್ ಪ್ರಕ್ರಿಯೆಯು ಯಾವುದಾದರೂ ಅಪರಿಚಿತ ವ್ಯಕ್ತಿಯ ಜತೆಗೆ ಅಥವಾ ತುಂಬಾ ದೀರ್ಘವಾಗಿ ಮಾತನಾಡುವ ಸಂದರ್ಭದಲ್ಲಿ ಬರಬಹುದು. ಇಂಥಾ ಪ್ರೀತಿ ಸಂಭವಿಸಿದ ವೇಳೆ ಮೆದುಳು ಡೊಪಮೈನ್ ಮತ್ತು ಆಕ್ಸಿಟೊಸಿನ್ ಬಿಡುಗಡೆ ಮಾಡುವುದು ಮತ್ತು ಇದರ ಪರಿಣಾಮವಾಗಿ ಆಕರ್ಷಣೆ ಮತ್ತು ಬೆಸುಗೆ ಉಂಟಾಗುವುದು.  

ಇಬ್ಬರ ನಡುವಿನ ಸಹಾನುಭೂತಿ ಮತ್ತು ನಂಬಿಕೆಯು ಮುಂದೆ ರೋಮ್ಯಾಂಟಿಕ್ ಆಗಿ ಪರಿವರ್ತನೆ ಆಗುವುದು. ನೀವು ಸಮಸ್ಯೆಗಳು ಮತ್ತು ಅಸುರಕ್ಷತೆ ಬಗ್ಗೆ ವಿಚಾರಗಳನ್ನು ಹಂಚಿಕೊಂಡ ವೇಳೆ ಅಲ್ಲಿ ಭಾವನಾತ್ಮಕ ಬಾಂಧವ್ಯ ಉಂಟಾಗುತ್ತದೆ. ಈ ಪ್ರಕ್ರಿಯೆಯು ದೃಢೀಕರಣ ಮತ್ತು ಸ್ವೀಕಾರಕ್ಕೆ ಅಡಿಗಲ್ಲು ಹಾಖುವುದು. ಇಲ್ಲಿ ಇಬ್ಬರು ಪರಸ್ಪರ ಬೆಂಬಲ ಸೂಚಿಸುವರು ಮತ್ತು ಸುರಕ್ಷಿತವಾಗಿ ಇರುವರು. ನಿಮ್ಮ ಸಮಸ್ಯೆಗಳನ್ನು ಇನ್ನೊಬ್ಬರ ಜತೆಗೆ ಹಂಚಿಕೊಂಡ ವೇಳೆ ಭಾವನಾತ್ಮಕ ಸಂಪರ್ಕವು ಬೆಸೆದು, ಇದು ರೋಮ್ಯಾಂಟಿಕ್ ಸಂಬಂಧವಾಗಿ ಮಾರ್ಪಾಡುಗೊಳ್ಳುವುದು.

ಹೀಗಾಗಿ ಲವ್ವನ್ನು ಲೈಟಾಗಿ ತಗೊಳ್ಬೇಡಿ. ಒಮ್ಮೆ ಲವ್ವಲ್ಲಿ ಬಿದ್ರೆ ಈ ಹಾರ್ಮೋನುಗಳು ಕೆಲಸ ಶುರು ಮಾಡಿಬಿಟ್ರೆ ಆಮೇಲೆ ನಿಮ್ಮನ್ನು ಆ ಭಗವಂತನೇ ಕಾಪಾಡಬೇಕು. ನೀವು ಬಿಡ್ತೀನಿ ಅಂದ್ರೂ ಈ ಪ್ರೀತಿ ನಿಮ್ಮನ್ನು ಬಿಡಲ್ಲ. ಅದರಲ್ಲೂ ಈಗ ಬೆಂಗಳೂರಿನಲ್ಲಿದೆಯಲ್ಲಾ ಅಂಥಾ ಸೊಗಸಾದ ವಾತಾವರಣ ಲವ್ವಲ್ಲಿ ಬೀಳೋದಕ್ಕೆ ಬಿದ್ದು ಒದ್ದಾಡೋದಕ್ಕೆ ಬೆಸ್ಟು ಅಂತಾರೆ ತಿಳಿದವರು. ಯಾವ್ದಕ್ಕೂ ಹುಷಾರಾಗಿರಿ!