ಗರ್ಭಾವಸ್ಥೆಯಲ್ಲಿ ಎಲೆ-ಅಡಿಕೆ ತಿಂದ್ರೆ ಮಗುವಿಗೂ ತೊಂದೆರೆಯಾಗುತ್ತಂತೆ! ಹೇಗೆ?

ಕೆಲವರಿಗೆ ಊಟ ಆದ ತಕ್ಷಣ ಎಲೆ-ಅಡಿಕೆಯನ್ನು ತಿನ್ನುವ ಸಂಪ್ರದಾಯ ಇದೆ. ಹೆಚ್ಚಿನವರಿಗೆ ಎಲೆ-ಅಡಿಕೆ ತಿನ್ನೋ ಅಭ್ಯಾಸವಿದ್ರೆ ಇನ್ನೂ ಕೆಲವರು ಯಾವತ್ತೋ ಒಮ್ಮೆ ತಿನ್ನುತ್ತಾರೆ. ಅದ್ರಲ್ಲೂ ಈಗಿನ ಯುವಕರು ಹಾಗೂ ಮಕ್ಕಳು ಸ್ವೀಟ್ ಪಾನ್ ತಿನ್ನೋದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ. ಸ್ವೀಟ್ ಪಾನ್ ನಿಂದ ಯಾವುದೇ ರೀತಿ ತೊಂದರೆ ಆಗೋದಿಲ್ಲ. ಆದರೆ ಅದನ್ನು ಅತಿಯಾಗಿ ಸೇವನೆ ಮಾಡಬಾರದು ಅಷ್ಟೇ. 

ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ಏನಾದ್ರೂ ತಿನ್ಬೇಕು ಅನ್ನೋ ಬಯಕೆ ಇರುತ್ತೆ. ಹೆಚ್ಚಿನವರು ಸ್ವೀಟ್ ಪಾನ್ ತಿನ್ಬೋಕು ಅಂತ ಆಸೆ ಪಡ್ತಾರೆ.

ಗರ್ಭಾವಸ್ಥೆಯಲ್ಲಿ ಎಲೆ-ಅಡಿಕೆ ತಿನ್ನಬಹುದಾ? 
ವೀಳ್ಯದೆಲೆಯು ಅನೇಕರಿಗೆ ಆರೋಗ್ಯಕರ ಆಯ್ಕೆಯಾಗಿದೆ. ಆದರೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಇದನ್ನು ಆದಷ್ಟು ಮಿತವ್ಯಯವಾಗಿ ಸೇವಿಸಿದ್ರೆ ತುಂಬಾನೇ ಒಳ್ಳೆಯದು. ವೀಳ್ಯದೆಲೆಯ ಜೊತೆಗೆ ಹೆಚ್ಚಿನವರು ತಂಬಾಕು ಕೂಡ ಸೇವನೆ ಮಾಡುತ್ತಾರೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ಗೂ ಕೂಡ ಕಾರಣವಾಗುವ ಸಾಧ್ಯತೆಯಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಜನರು ನಿಯಮಿತವಾಗಿ ವೀಳ್ಯದೆಲೆಗಳನ್ನು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಹಾಗಂತ ಗರ್ಭಾವಸ್ಥೆಯಲ್ಲಿಯೂ ಕೂಡ ಇದನ್ನೇ ಮುಂದುವರಿಸಿದರೆ ಹುಟ್ಟೋ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಗರ್ಭಾವಸ್ಥೆಯ ತೊಡಕುಗಳು, ಜನ್ಮ ಅಸ್ವಸ್ಥತೆಗಳು ಇತ್ಯಾದಿ ಸಮಸ್ಯೆಗಳು ಕೂಡ ಕಂಡು ಬಂದಿರೋ ಪ್ರಕರಣಗಳು ದಾಖಲಾಗಿದೆ.

ಗರ್ಭಾವಸ್ಥೆಯಲ್ಲಿ ವೀಳ್ಯದೆಲೆಯ ಸೇವನೆಯು ಏಕೆ ಸಾಮಾನ್ಯವಾಗಿದೆ? 
ಈ ಮೊದಲೇ ವೀಳ್ಯದೆಲೆ ತಿನ್ನುವ ಅಭ್ಯಾಸವಿದ್ದರೆ ಗರ್ಭಾವಸ್ಥೆಯ ಸಂದರ್ಭದಲ್ಲೂ ಅನೇಕ ಮಹಿಳೆಯರು ಈ ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ವೀಳ್ಯದೆಲೆಯು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ವ್ಯಕ್ತಿಯ ಹಸಿವನ್ನು ಉತ್ತೇಜಿಸುತ್ತದೆ ಅಂತ ಹೇಳಲಾಗುತ್ತದೆ. ಇನ್ನೂ ಕೆಲವು ಮಹಿಳೆಯರಿಗೆ ಸ್ತನದಲ್ಲಿ ಹಾಲು ಕಡಿಮೆ ಇದ್ದಾಗ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಾಲುಣಿಸುವ ಸಮಯದಲ್ಲಿ ವೀಳ್ಯದೆಲೆಗಳನ್ನು ಸ್ತನಗಳಿಗೆ ಅನ್ವಯಿಸಲಾಗುತ್ತದೆ. ವೀಳ್ಯದೆಲೆಗಳು ಗಣನೀಯ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಇವು ಕೆಮ್ಮು, ನಿರ್ಜಲೀಕರಣ, ಉರಿಯೂತ, ಮಲಬದ್ಧತೆ, ತಲೆನೋವು ಮತ್ತು ಇತರ ಅನೇಕ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಚಿಕಿತ್ಸೆ ನೀಡುತ್ತದೆ.

ಗರ್ಭಾವಸ್ಥೆಯಲ್ಲಿ ವೀಳ್ಯದೆಲೆ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನವಿದೆ? 

1. ಬಾಯಿಯ ಆರೋಗ್ಯಕ್ಕೆ ಒಳ್ಳೆಯದು 

2. ಕೀಲು ನೋವಿನ ಸಮಸ್ಯೆ ನಿವಾರಣೆ 

3. ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಣದಲ್ಲಿರುತ್ತೆ

 4. ಉಸಿರಾಟದ ಸಮಸ್ಯೆಗಳು ಕಡಿಮೆಯಾಗುತ್ತದೆ 

5. ನಂಜುನಿರೋಧಕವಾಗಿ ಕೆಲಸ ಮಾಡುತ್ತೆ 

6. ಜೀರ್ಣ ಕ್ರಿಯೆಗೆ ಸಹಾಯಮಾಡುತ್ತದೆ

ಗರ್ಭಾವಸ್ಥೆಯಲ್ಲಿ ವೀಳ್ಯದೆಲೆ ತಿಂದ್ರೆ ಅಡ್ಡ ಪರಿಣಾಮವಾಗುತ್ತಾ? 

1. ವೀಳ್ಯದೆಲೆಗಳನ್ನು ನಿಯಮಿತವಾಗಿ ತಿನ್ನುವವರಲ್ಲಿ ಕಂಡುಬರುವ ಪ್ರಮುಖ ಹಾನಿಕಾರಕ ಪರಿಣಾಮವೆಂದರೆ ಇದರಿಂದ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಾಗಿದೆ. ಹೆಚ್ಚಾಗಿ ಬಾಯಿಯ ಕ್ಯಾನ್ಸರ್ ತಾಯಿಗೆ ಮಾತ್ರವಲ್ಲದೆ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. 

2. ಗರ್ಭಾವಸ್ಥೆಯಲ್ಲಿ ಎಲೆ-ಅಡಿಕೆ ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಾಯಿಯಲ್ಲಿ ಹುಣ್ಣುಗಳು ರಚನೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಇವುಗಳನ್ನು ಗುಣಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ ಇವುಗಳು ದೇಹದೊಳಗೆ ತಲುಪುವ ಸಾಧ್ಯತೆ ಇರುತ್ತದೆ. ಅಲ್ಲಿಂದ ನಂತರ ಅನ್ನನಾಳ, ಧ್ವನಿಪೆಟ್ಟಿಗೆ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಅಪಾರ ಅಸ್ವಸ್ಥತೆಯನ್ನು ಉಂಟಾಗುತ್ತದೆ.

 3. ನಾನ್ ಪಾನ್ ಅಂಗಡಿಗಳಿಂದ ವೀಳ್ಯದೆಲೆಯನ್ನು ಖರೀದಿ ಮಾಡಿದಾಗ ಅದ್ರಲ್ಲಿ ತಂಬಾಕು ಸೇರ್ಪಡೆಯಾಗಿರುತ್ತದೆ. ತಂಬಾಕು ಡೋಪಮೈನ್ ಮಟ್ಟವನ್ನು ಹೆಚ್ಚಿಸುವ ಮತ್ತು ದೇಹದ ಜೀವಶಾಸ್ತ್ರದ ಮೇಲೆ ಪರಿಣಾಮ ಬೀರುವ ಉತ್ತೇಜಕ ಎಂದು ಹೆಸರುವಾಸಿಯಾಗಿದೆ. ಇದರಿಂದ ನಾವು ವೀಳ್ಯದೆಲೆ ತಿನ್ನುವ ವ್ಯಸನಿಗಳಾಗಿ ಬದಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬದಲಾವಣೆಗಳು ಮಗುವಿನ ಬೆಳವಣಿಗೆಗೆ ಹಾನಿಕಾರಕವಾಗಿರುವುದರಿಂದ ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. 

4. ಎಲೆಗಳ ಮೇಲೆ ಸುಣ್ಣವನ್ನು ಹಾಕಲಾಗಿರುತ್ತದೆ. ಇದರಿಂದ ನಮಗೆ ಎಲ್ಲಾ ಪೋಷಕಾಂಶಗಳು ಸಿಗೋದಕ್ಕೆ ಸಾಧ್ಯವಾಗೋದಿಲ್ಲ. ಆದರೆ ಇದು ಖಂಡಿತವಾಗಿಯೂ ಹೃದಯ ಬಡಿತದ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ಜನ ಇದ್ರಿಂದ ಸುಣ್ಣದ ಸೇವನೆಗೆ ವ್ಯಸನಿಯಾಗುತ್ತಾರೆ. 

5. ಸಿಹಿ ಪಾನ್ನ ನಿಯಮಿತ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಬೊಜ್ಜು ಉಂಟಾಗುತ್ತದೆ.